ದೇಶ-ವಿದೇಶ

ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೋವಿಡ್ ಪಾಸಿಟಿವ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಕೋವಿಡ್ ವೈರಸ್ ತಗುಲಿ ಪಾಸಿಟಿವ್ ವರದಿ ಬಂದಿರುತ್ತದೆ ಭಾನುವಾರ ಹೇಳಿಕೊಂಡಿದ್ದಾರೆ.

63 ವರ್ಷದ ಶಕ್ತಿಕಾಂತ್ ದಾಸ್ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಕೋವಿಡ್ ಪಾಸಿಟಿವ್ ವರದಿ ಬಂದಿದ್ದು ಹಾಗಾಗಿ ಕ್ವಾರಂಟೈನ್ ನಲ್ಲಿದ್ದು ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮತ್ತು ದೂರವಾಣಿ ಮೂಲಕ ಎಲ್ಲಾ ಉಪ ಗವರ್ನರ್‌ಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.

“ನಾನು ಕೋವಿಡ್ 19 ಪಾಸಿಟಿವ್ ವರದಿ ಪಡೆದಿದ್ದೇನೆ. ಆದರೆ ಯಾವ ರೋಗದ ಲಕ್ಷಣಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಪರ್ಕಕ್ಕೆ ಬಂದವರು ಎಚ್ಚರವಾಗಿರಿ. ಪ್ರತ್ಯೇಕತೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಸಂಸ್ಥೆಯಲ್ಲಿನ ಕೆಲಸ ಸಾಮಾನ್ಯ ದಿನಗಳಂತೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಹಾಗೂ ದೂರವಾಣಿ ಮೂಲಕ ಸರ್ಕಾರ ಮತ್ತು ಇತರ ಅಧಿಕಾರಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ” ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

 

Related posts

ಕೊರೊನಾ: ದೇಶದಲ್ಲಿ ಒಟ್ಟಾರೆ ಸಂಖ್ಯೆ ಹೆಚ್ಚಿದರೂ ಪಾಸಿಟಿವ್‌ ಪ್ರಕರಣಗಳು ಸ್ಥಿರ: ಐಸಿಎಂಆರ್

Upayuktha

ಪೌರತ್ವ ಕಾಯ್ದೆ ವಿಚಾರದಲ್ಲಿ ದೇಶಕ್ಕೆ ಬೆಂಕಿ ಹಚ್ಚಲು ಕಾಂಗ್ರೆಸ್ ಯತ್ನ: ಪ್ರಧಾನಿ ಆರೋಪ

Upayuktha

ಶಬರಿಮಲೆ ತೀರ್ಪು ನಾಳೆ: ಕೇರಳದಲ್ಲಿ ಕುತೂಹಲಭರಿತ ಆತಂಕ

Upayuktha