ಓದುಗರ ವೇದಿಕೆ

‘ಪಟ್ಲ ಸತೀಶ್ ಶೆಟ್ಟರಿಗೆ ಈ ಅವಮಾನ ಆಗಬಾರದಿತ್ತು’

ತೆಂಕು ತಿಟ್ಟಿನ ಅಪ್ರತಿಮ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರನ್ನು ಅವರು ಭಾಗವತಿಕೆ ಮಾಡುತ್ತಿರುವಾಗಲೇ ಅರ್ಧದಲ್ಲಿಯೇ ನಿಲ್ಲಿಸಿ, ರಂಗದಿಂದ ಇಳಿಸಿ ಅವಮಾನಿಸಿದ್ದಾರೆಂದು ವರದಿಯಾಗಿದೆ. ಇದು ನಿಜವಾಗಿದ್ದರೆ, ಸಂಘಟಕರಿಂದ ಯಕ್ಷಗಾನ ಕಲೆಗೆ ಅತಿ ದೊಡ್ಡ ಅಪಚಾರವಾಗಿದೆ. ಈ ಘಟನೆಯಿಂದ ಭಾರತೀಯ ರಂಗಭೂಮಿಯಲ್ಲಿ ಕೆಲಸ ಮಾಡುವವರೆಲ್ಲರೂ ತಲೆ ತಗ್ಗಿಸುವಂತಾಗಿದೆ.

ಪಟ್ಲ ಭಾಗವತರು ತಮ್ಮ ಅಸಾಮಾನ್ಯ ಪ್ರತಿಭೆಯಿಂದ ತೆಂಕು ತಿಟ್ಟು ಹಾಡುಗಾರಿಕೆಗೆ ಹೊಸ ಆಯಾಮವನ್ನು ತಂದು ಕೊಟ್ಟವರು. ಅವರು ಹಾಡಲಾರಂಭಿಸಿದ ಮೇಲೆ ಸ್ವಲ್ಪ ಜಡವಾಗಿದ್ದ ಯಕ್ಷಗಾನಕ್ಕೆ ಹೊಸ ಚೈತನ್ಯ ಒದಗಿಬಂದು ಪ್ರೇಕ್ಷಕರು ಮತ್ತೆ ಯಕ್ಷಗಾನದ ಕಡೆಗೆ ಬರತೊಡಗಿದರು. ಅವರು ಅನೇಕ ಶಿಷ್ಯರುಗಳನ್ನೂ ತಯಾರು ಮಾಡಿದರು. ತನ್ನ ಅಪಾರ ಪ್ರಸಿದ್ಧಿಯಿಂದ ಮೈ ಮರೆಯದ ಪಟ್ಲರು ಪಟ್ಲ ಫೌಂಡೇಶನ್ ಸ್ಥಾಪಿಸಿ, ನೂರಾರು ಬಡ ಕಲಾವಿದರಿಗೆ ಆರ್ಥಿಕ ಸಹಾಯ ನೀಡಿದರು, ಮನೆ ಕಟ್ಟಿಕೊಟ್ಟರು. ವಾರ್ಷಿಕ ಎರಡು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಅವರು ಯಕ್ಷಗಾನಕ್ಕಾಗಿ ವ್ಯಯಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಇಂಥ ಮಹನೀಯನೊಬ್ಬನಿಗಾದ ಅವಮಾನವು ನಮಗೆಲ್ಲರಿಗೂ ಆದ ಅವಮಾನವೂ ಹೌದು.

ತೆಂಕು ತಿಟ್ಟಿನ ಅಪ್ರತಿಮ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರನ್ನು ಅವರು ಭಾಗವತಿಕೆ ಮಾಡುತ್ತಿರುವಾಗಲೇ ಅರ್ಧದಲ್ಲಿಯೇ ನಿಲ್ಲಿಸಿ,…

Purushottama Bilimale यांनी वर पोस्ट केले शुक्रवार, २२ नोव्हेंबर, २०१९

ನನಗೆ ತಿಳಿದಂತೆ, ಯಕ್ಷಗಾನ ಮೇಳಗಳು ತಿರುಗಾಟಕ್ಕೆ ಹೊರಡುವ ಮುನ್ನ ಎಲ್ಲವೂ ನಿಗದಿಯಾಗಿರುತ್ತದೆ. ಇದು ಹೌದಾದರೆ, ಪಟ್ಲ ಅವರ ಜವಾಬ್ದಾರಿಯೂ ಸ್ಪಷ್ಟವಾಗಿರುತ್ತದೆ. ಆ ಪ್ರಕಾರವೇ ಪಟ್ಲರು ಹಾಡಲು ರಂಗವೇರಿರಬೇಕು. ಅಲ್ಲೇನಾದರೂ ಸಂಘಟನಾತ್ಮಕ ಸಮಸ್ಯೆಗಳಿದ್ದರೆ, ಆ ದಿವಸದ ಆಟ ಮುಗಿದ ಮೇಲೆ ಪರಾಮರ್ಶಿಸಿಕೊಳ್ಳಬಹುದಿತ್ತು. ಅದು ಬಿಟ್ಟು ಅರ್ಧದಲ್ಲಿಯೇ ಇಳಿಯುವಂತೆ ಮಾಡಿದ್ದು ಸಂಘಟಕರ ದುರ್ವರ್ತನೆಯೇ ಸರಿ.

ಕಟೀಲಿನ ಆರೇಳು ಮೇಳಗಳನ್ನು ನಡೆಸುವವರು, ದೇವಿಯ ಹೆಸರಿನಲ್ಲಿಯೇ ಅವುಗಳನ್ನು ನಡೆಸುತ್ತಾರೆ. ಯಕ್ಷಗಾನ ಕಲೆಯ ಬಗ್ಗೆ ಸಾಕಷ್ಟು ಮಾತಾಡುತ್ತಾರೆ. ಆದರೆ, ಅವರಿಗೆ ಕಟೀಲು ದೇವಿಯ ಬಗೆಗಾಗಲೀ, ಅವರ ಜೊತೆ ಜೀವನ ಸಾಗಿಸುವ ಕಲಾವಿದರ ಬಗೆಗಾಗಲೀ ಏನಾದರೂ ಗೌರವ ಇದೆಯಾ? ಇದ್ದರೆ ಅವರ್ಯಾಕೆ ಹೀಗೆ ಮಾಡಬೇಕಿತ್ತು?
ಈ ಘಟನೆಗೆ ಬೇರೇನಾದರೂ ವಿವರಣೆ ಇದ್ದರೆ ತಿಳಿಸಿ.

ಮೇಳದ ಸಂಘಟಕರು ಪಟ್ಲ ಭಾಗವತರಲ್ಲಿ ಕ್ಷಮೆಯಾಚಿಸಿ ಪ್ರಕರಣವನ್ನು ಇಲ್ಲಿಗೇ ಮುಗಿಸುವುದೊಳ್ಳೆಯದು.

🖊 ಪುರುಷೋತ್ತಮ_ಬಿಳಿಮಲೆ

 

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ನುಡಿನಮನ: ಶಾಸ್ತವನದ ಮುತ್ತೊಂದು ಕಳಚಿತ್ತು, ನಂಬಲೆಡಿಯ….

Upayuktha

ಖಾರಾ ಬಾತ್’: ಖಾಸಗಿ ಚಾನಲ್‌ಗಳಿಗೆ ಒಂದು ಪಬ್ಲಿಕ್ ‘ಲವ್‌’ ಲೆಟರ್

Upayuktha

ಚಿಗುರು ಪ್ರತಿಭೆ ಸಾಂಘವಿಯ ಕನಸುಗಳನ್ನು ಪೋಷಿಸೋಣ

Upayuktha