ಕತೆ-ಕವನಗಳು

ಲಿವರ್, ಕಿಡ್ನಿ ಕೊಡಲು ತಂದೆ ತಾಯಿ ತಯಾರಾಗಿದ್ದಾರೆ, ಆದರೆ ಜೀವ ಕೊಟ್ಟಾನೋ ಭಗವಂತ?

ಪ್ರಾತಿನಿಧಿಕ ಚಿತ್ರ

ಸತ್ಯಕಥೆ: ಡಾ.ಶಶಿಕಿರಣ್ ಶೆಟ್ಟಿ

ಆಕೆ 9ನೆಯ ತರಗತಿ ವಿದ್ಯಾರ್ಥಿ ಅಂದು ಸಂಜೆ ಮನೆಗೆ ಬಂದರೆ ಅಮ್ಮ ನೈಟ್ ಡ್ಯೂಟಿಗೆಂದು ಆಸ್ಪತ್ರೆಗೆ ಹೋಗಿದ್ದರು (ಆಕೆ ನರ್ಸ್).. ಟೇಬಲ್ ಮೇಲೆ ಚಾ ಇತ್ತು ತಿಂಡಿ ಗಾಗಿ ಫ್ರಿಡ್ಜ್ ಅಲ್ಲಿ ಹುಡುಕಿದ ಅನನ್ಯ (ಹೆಸರು ಬದಲಿಸಿದೆ) ಅಲ್ಲೇ ಫ್ರಿಡ್ಜ್ ಮೇಲೆ ಇದ್ದ ಅರ್ಧ ಖಾಲಿ ಯಾಗಿದ್ದ ಚಕ್ಕುಲಿ ಪ್ಯಾಕ್ ಅನ್ನು ತಿಂದು ಮುಗಿಸಿದ್ದಳು.. ಆಕೆಗೆ ತುಂಬಾ ಹಸಿವಿತ್ತು ಹಾಗಾಗಿ ಜಿಡ್ಡಿನ ಪರಿಮಳವಿದ್ದರೂ ತಿಂದಿದ್ದಳು ಅನನ್ಯ. ತಿಂದು ಎಂದಿನ ಕೆಲಸದಲ್ಲಿ ಮಗ್ನಳಾದಳು….

2 ದಿನದ ನಂತರ ಸಂಜೆ ಮನೆಗೆ ಬಂದ ಅನನ್ಯ ವಾಂತಿ ಮಾಡಲಾರಂಭಿಸಿದಳು..

2, 3 ಬಾರಿ ವಾಂತಿ ಆದಾಗ ತಾಯಿಗೆ ಏನೋ ಡೌಟ್ ಆಗಿತ್ತು. 2 ದಿನದಿಂದ ಏನೆಲ್ಲ ತಿಂದಿದ್ದಾಳೆ ಎಂದು ವಿಚಾರಿಸುವಾಗ ಆಘಾತಕಾರಿ ವಿಷಯವೊಂದು ತಿಳಿದಿತ್ತು. ಅಂದು ಡ್ಯೂಟಿಗೆ ಲೇಟ್ ಆಗುತಿದ್ದಾಗ ಅರ್ಜೆಂಟ್ ಅಲ್ಲಿ ಫ್ರಿಡ್ಜ್ ಮೇಲೆ ಇಲಿಗಳಿಗೆಂದು ತಂದಿಟ್ಟಿದ್ದ ವಿಷದಲ್ಲಿ ಅದ್ದಿ ಇಟ್ಟಿದ್ದ ಚಕ್ಕುಲಿ ತಿಂದಿದ್ದಳು ಅನನ್ಯ. ವಿಷಯದ ಗಾಂಭೀರ್ಯತೆ ಅರಿತ ತಾಯಿ ತುರ್ತಾಗಿ ಮಗಳನ್ನು ಆಸ್ಪತ್ರೆಗೆ ಸಾಗಿಸಿದಳು… ವಾಂತಿ ರಕ್ತ ಮಿಶ್ರಿತ ವಾಗಿ ಬದಲಾಗಿತ್ತು… ವಿಷ ದೇಹ ಸೇರಿ ಅದಾಗಲೇ 48 ಗಂಟೆ ದಾಟಿದ್ದರಿಂದ ಅದಾಗಲೇ ದೇಹ ಅದನ್ನು ಹೀರಿಕೊಂಡಾಗಿತ್ತು… ಕಿಡ್ನಿ, ಲಿವರ್ ಗಳೆರಡನ್ನು ಡ್ಯಾಮೇಜ್ ಮಾಡಿಯಾಗಿತ್ತು ಆ ವಿಷ, ಈಗ ಹುಡುಗಿ ಕೋಮಾದಲ್ಲಿದ್ದಾಳೆ. ಚಕ್ಕುಲಿ ಇಲಿಯನ್ನಲ್ಲ… ಮುದ್ದಿನ ಮಗಳನ್ನು ಬಲಿ ತೆಗೆದುಕೊಳ್ಳುವುದರಲ್ಲಿದೆ.

ಅನನ್ಯ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆ ಯಲ್ಲಿದ್ದಾಳೆ. 20 ರಿಂದ 30 ಲಕ್ಷದಷ್ಟು ಖರ್ಚಿದೆ.

ಲಿವರ್, ಕಿಡ್ನಿ ಕೊಡಲು ತಂದೆ ತಾಯಿ ತಯಾರಿದ್ದಾರೆ… ಆದರೆ ಜೀವ ಕೊಡಲು ದೇವರು ಮಾತ್ರ ಮನಸ್ಸು ಮಾಡಬೇಕಿದೆ.

ನಮ್ಮ ನಿಮ್ಮ ಪ್ರಾರ್ಥನೆ ಮಾಡುವ ಮನಸ್ಸುಗಳು ಹಾಗೆ ಸಹಾಯ ಮಾಡುವ ಕೈಗಳು ಮಾತ್ರ ಆಕೆಯನ್ನು ಬದುಕಿಸಬಲ್ಲದು. ತಾಯಿ ಮಗಳು ಮತ್ತೆ ಒಂದಾಗಲಿ ಎಂಬುದಷ್ಟೇ ನಮ್ಮೆಲ್ಲರ ಹಾರೈಕೆ.

ನೆನಪಿರಲಿ, ವಿಷ ಹಾಕಿರುವ ಚಕ್ಕುಲಿ, ಚಿಕ್ಕಿ, ವಿಷದ ಪೌಡರ್, ಲಿಕ್ವಿಡ್ ವಿಷ, ಇರುವೆಗೆ ವಿಷ, ಗೆದ್ದಲಿಗೆ ಹಾಕುವ ವಿಷ, ಗಿಡಗಳಿಗೆ ಸಿಂಪಡಿಸುವ ಕೀಟನಾಶಕ, ಸಮಯ ಮುಗಿದ ಔಷದಿ ಇತ್ಯಾದಿ ಇತ್ಯಾದಿ ನಮ್ಮ ಮನೆಗೆ ಖಡ್ಡಾಯವಾಗಿ ತರದಿರೋಣ. ಯಾರಿಗೊತ್ತು ಇಂದು ಅನನ್ಯಳ ಅವಸ್ಥೆ ನಾಳೆ ನಮ್ಮ ನಿಮ್ಮ ಮನೆಯ ಮಕ್ಕಳಿಗಾದರೆ ಖಂಡಿತ ಆ ದೇವರೂ ಸಹ ನಿಮ್ಮನ್ನು ಕ್ಷಮಿಸಲಾರ.

ಇದು ಉಡುಪಿಯಲ್ಲಿ ನಡೆದ ನೈಜ ಘಟನೆ( 16/01/2021). ಒಬ್ಬಳೇ ಮಗಳು ಮಣಿಪಾಲ ಆಸ್ಪತ್ರೆ ಯಲ್ಲಿ ಕೋಮಾ ಸ್ಥಿತಿಯಲ್ಲಿದ್ದಾಳೆ. ತಂದೆ ತಾಯಿ ಕಂಗಾಲಾಗಿದ್ದಾರೆ.

ಸಹಾಯ ಮಾಡಲಿಚ್ಚಿಸುವ ಮಂದಿ ನನ್ನನ್ನು ಸಂಪರ್ಕಿಸಿ. ರೋಗಿಯ ಸಂಪೂರ್ಣ ವಿವರ ಕೊಡಲು ನಾನು ಸಿದ್ದ.

-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
(9945130630) ವಾಟ್ಸಪ್
ಹೋಮ್ ಡಾಕ್ಟರ್ ಫೌಂಡೇಶನ್ (ರಿ)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹಿಂಗೇ ಇರು

Harshitha Harish

ಕವನ: ನೆನಪುಗಳು

Upayuktha

*ಮೂರ್ಖನಾಗುತಿಹನು*

Harshitha Harish