ನಗರ ಸ್ಥಳೀಯ

ಕಾಸರಗೋಡು: ರೆವೆನ್ಯೂ ರಿಕವರಿ ದರದಲ್ಲಿ ರಿಯಾಯಿತಿ


ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ನಿಗಮದಿಂದ ಸಾಲ ಪಡೆದು ಮರಳಿ ಪಾವತಿಸದೇ ರೆವೆನ್ಯೂ ರಿಕವರಿ ಕ್ರಮ ಎದುರಿಸುತ್ತಿರುವ ಫಲಾನುಭವಿಗಳಿಗೆ ಏಕವೇಳೆ ಬಾಕಿ ಪಾವತಿ ನಡೆಸಿದಲ್ಲಿ ರೆವೆನ್ಯೂ ರಿಕವರಿ ಕ್ರಮದಲ್ಲಿ ಶೇ. 4ರ ರಿಯಾಯಿ ನೀಡಲಾಗುವುದು. ಇದಲ್ಲದೆ ಅಭಿವೃದ್ಧಿ ನಿಗಮದಿಂದ ಶೇ 2 ಬಡ್ಡಿಯಲ್ಲೂ ರಿಯಾಯಿತಿ ದೊರೆಯುವುದು. ನೋಟೀಸು ದರ ಅನ್ವಯಿಸುವುದಿಲ್ಲ. ನ.15ರಿಂದ 2020 ಮಾ.31 ವರೆಗೆ ಈ ಸೌಲಭ್ಯ ಫಲಾನುಭವಿಗಳಿಗೆ ಲಭಿಸುವ ನಿಟ್ಟಿನಲ್ಲಿ ಜಿಲ್ಲಾ/ಉಪಜಿಲ್ಲಾ ಕಚೇರಿಗಳಲ್ಲಿ ಪ್ರತ್ಯೇಕ ಸೌಲಭ್ಯ ಏರ್ಪಡಿಸಲಾಗಿದೆ.

ದಾಖಲಾತಿ ಹಾಜರು
ಕೇರಳ ಮದ್ರಸಾ ಶಿಕ್ಷರ ಕಲ್ಯಾಣ ಮಂಡಳಿಯಿಂದ ಪಿಂಚಣಿ ಪಡೆಯುತ್ತಿರುವ ಎಲ್ಲ ಸದಸ್ಯರು ಡಿ.20ರ ಮುಂಚಿತವಾಗಿ ಅವರ ಲೈಫ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. ಲೈಫ್ ಸರ್ಟಿಫಿಕೆಟ್, ಆದಾರ್ ಕಾರ್ಡ್ ನ ನಕಲನ್ನು “ಮೆನೆಜರ್, ಕೇರಳ ಮದ್ರಸಾ ಅಧ್ಯಾಪಕ ಕ್ಷೇಮನಿಧಿ ಆಫೀಸ್, ಪುದಿಯರ ಪಿ.ಒ., ಕೋಯಿಕೋಡ್-673004” ಎಂಬ ವಿಳಾಸಕ್ಕೆ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 0495-2720577.

23ರಂದು ಅರ್ಹತೆ ಶಿಬಿರ
ಆನಿವಾಸಿ ಕೇರಳೀಯರ ಪುನರ್ವಸತಿ ಯೋಜನೆ (ಎನ್.ಡಿ.ಪ್ರೇಂ) ವ್ಯಾಪ್ತಿಯಲ್ಲಿಉದ್ದಿಮೆ ಆರಂಭಕ್ಕೆ ಬಂಡವಾಳ/ ಬಡ್ಡಿ ಸಬ್ಸಿಡಿ ಸಹಿತದ ಸಾಲ ಲಭ್ಯತೆಗೆ ಅರ್ಹತೆ ಪಡೆದವರ ಅರ್ಹತೆ ನಿಗದಿ ಶಿಬಿರ ನ.23ರಂದು ಬೆಳಗ್ಗೆ 10 ಗಂಟೆಗೆ ಎರ್ನಾಕುಲಂ ನಾರ್ತ್ ಪರವೂರಿನಲ್ಲಿರುವ ವ್ಯಾಪಾರ ಭವನದಲ್ಲಿ ನಡೆಯಲಿದೆ.

ನೋರ್ಕ ರೂಟ್ಸ್ ನೇತೃತ್ವದಲ್ಲಿ, ಬ್ಯಾಂಕ್ ಆಫ್ ಇಂಡಿಯಾದ ಸಹಕಾರದಲ್ಲಿ ಈ ಚಟುವಟಿಕೆ ಜರುಗಲಿದೆ. ಶಾಸಕ ವಿ.ಡಿ.ಸತೀಶನ್ ಶಿಬಿರ ಉದ್ಘಾಟಿಸುವರು. ಕನಿಷ್ಠ 2 ವರ್ಷ ವಿದೇಶದಲ್ಲಿ ನೌಕರಿ ನಡೆಸಿದ ಆನಿವಾಸಿ ಕೇರಳೀಯರು ನಂತರ ಊರಲ್ಲೇ ಶಾಶ್ವತ ನಿವಾಸಿಗಳಾಗುವ ನಿರ್ಧಾರ ಕೈಗೊಂಡು ಉದ್ದಿಮೆ ಆರಂಭಿಸುವುದಿದ್ದರೆ, ಅಂಥವರು ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.

ಸಾಲ ನೀಡಿಕೆಯ ಪ್ರಕ್ರಿಯೆ ಈ ಶಿಬಿರದಲ್ಲಿ ನಡೆಯಲಿದೆ. ಆಸಕ್ತರಿಗೆ ನೂತನ ಉದ್ದಿಮೆ ಆರಂಭಕ್ಕೆ ಬೇಕಾದ ಸಲಹೆ ಸೂಚನೆಗಳು, ಸರಕಾರಿ ಮ್ಯನೇಜ್‌ಮೆಂಟ್ ತರಬೇತಿ ಸಂಸ್ಥೆ ಸಿ.ಎಂ.ಡಿ.ಯ ಸೇವೆಯೂ ಶಿಬಿರದಲ್ಲಿ ಲಭ್ಯವಿರುವುದು. ಆರಂಭಿಸಲು ಉದ್ದೇಶಿಸಿರುವ ಉದ್ದಿಮೆಯ ಕಿರು ಮಾಹಿತಿ, ಕಳೆದ 2 ವರ್ಷ ವಿದೇಶದಲ್ಲಿ ನೌಕರಿಯಲ್ಲಿದ್ದ ಸಂಬಂಧ ದಾಖಲೆ ಪತ್ರಗಳ ನಕಲು , ಪಾನ್ ಕಾರ್ಡ್, ಪಡಿತರ ಚೀಟಿ, ಆಧಾರ್ ಕಾರ್ಡ್, ಮೂರು ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ಇತ್ಯಾದಿಗಳ ಸಹಿತ ಶಿಬಿರಕ್ಕೆ ಹಾಜರಾಗಬೇಕು. ನೋರ್ಕ ರೂಟ್ಸ್ ನ ವೆಬ್ ಸೈಟ್ www.norkaroots.org ನಲ್ಲಿ ಹೆಸರು ನೋಂದಣಿ ನಡೆಸಬೇಕು.

ಪುರಸ್ಕಾರಕ್ಕೆ ಆಯ್ಕೆ
ಕಾಸರಗೋಡು ನೆಹರೂ ಯುವ ಕೇಂದ್ರದ 2019-20 ವರ್ಷದ ಪುರಸ್ಕಾರಕ್ಕೆ ಕಾಸರಗೋಡು ಬ್ಲಾಕ್ ವ್ಯಾಪ್ತಿಯ ಆಲಂಪಾಡಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಆಯ್ಕೆಗೊಂಡಿದೆ. ಈ ಪುರಸ್ಕಾರವು ಪ್ರಶಸ್ತಿ ಫಲಕ ಮತ್ತು 25 ಸಾವಿರ ರೂ. ಹೊಂದಿದೆ. ಅಡೀಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಅವರ ಅಧ್ಯಕ್ಷತೆಯ ಸಮಿತಿ 2018-19ರ ಅವಧಿಯಲ್ಲಿ ಸಮಸ್ಥೆ ನಡೆಸಿದ ಚಟುವಟಿಕೆಗಳನ್ನು ಪರಿಶೀಲಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಶೀಘ್ರದಲ್ಲೇ ನಡೆಯಲಿರುವ ರಾಷ್ಟ್ರೀಯ ಯುವಜನ ಸಪ್ತಾಹ ಸಂಬಂಧ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ನಡೆಯಲಿದೆ.

Related posts

ವಿದ್ಯಾರ್ಥಿಗಳಲ್ಲಿ ಪುಸ್ತಕದ ಒಲವು ಹೆಚ್ಚಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ: ಮುರಳಿಕೃಷ್ಣ

Upayuktha

ಫರಂಗಿಪೇಟೆ ಶ್ರೀ ರಾಮ ವಿದ್ಯಾ ಸಂಸ್ಥೆಗೆ ಜಯ ಪದ್ಮ ಗೋಲ್ಡನ್ ಜ್ಯೂಬಿಲಿ ಹಾಲ್ ಸಮರ್ಪಣೆ

Upayuktha

ವರದಕ್ಷಿಣೆ ಕಿರುಕುಳ: ಕೋಡಿಜಾಲ್ ಇಬ್ರಾಹಿಂ ಸಿರಾಜ್ ಸಹಿತ ನಾಲ್ವರ ವಿರುದ್ಧ ಕೇಸು

Upayuktha