ಅಡುಗೆ-ಆಹಾರ

ಸವಿರುಚಿ: ಬ್ಯಾಂಬೂ ವೆಜಿಟೇಬಲ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು

ಈರುಳ್ಳಿ 1 ವರೆ ಕಪ್
ಟೊಮ್ಯಾಟೋ 2 ಕಪ್
ಬೀನ್ಸ್ 1 ವರೆ ಕಪ್
ಕ್ಯಾರೆಟ್ 1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಪುದಿನ ಸೊಪ್ಪು 1 ಕಪ್
ಕೊತ್ತಂಬರಿ ಸೊಪ್ಪು 1 ಕಪ್
ಬಿರಿಯಾನಿ ಹುಡಿ 2 ಚಮಚ
ಲವಂಗ 5
ಏಲಕ್ಕಿ 2
ಚೆಕ್ಕೆ 1 ಚಮಚ
ನಕ್ಷತ್ರ ಹೂ 1
ಕಾಯಿ ಮೆಣಸು 2
ಲಿಂಬೆ ರಸ 3 ಚಮಚ
ತುಪ್ಪ 5 ಚಮಚ
ಎಣ್ಣೆ ಅರ್ಧ ಕಪ್
ಕಲ್ಲುಪ್ಪು 2 ಚಮಚ
ಅರಿಶಿನ ಹುಡಿ 1 ಚಮಚ
ಅಕ್ಕಿ 2 ಕಪ್
ನೀರು 6 ಕಪ್

ಮಾಡುವ ವಿಧಾನ:
ಮೊದಲಿಗೆ 1 ಫೀಟ್ ಉದ್ದದ ಬಿದಿರನ್ನು ಆರಿಸಿ ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಈರುಳ್ಳಿ, ಬೀನ್ಸ್, ಕ್ಯಾರೆಟ್, ಟೊಮ್ಯಾಟೋ, ಕಾಯಿ ಮೆಣಸು ಎಲ್ಲವನ್ನು ಹಚ್ಚಿ ಇಡಬೇಕು. ಒಂದು ಕಡಾಯಿಯಲ್ಲಿ ತುಪ್ಪ , ಎಣ್ಣೆ ಈರುಳ್ಳಿ, ಲವಂಗ , ಏಲಕ್ಕಿ, ಚೆಕ್ಕೆ, ನಕ್ಷತ್ರ ಹೂ ಹಾಕಿ ಚೆನ್ನಾಗಿ ಬಾಡಿಸಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಯಿಮೆಣಸು, ಟೊಮ್ಯಾಟೋ ಹಾಕಿ ಬಾಡಿಸಿ.

ನಂತರ ಅದಕ್ಕೆ ಬೀನ್ಸ್, ಕ್ಯಾರೆಟ್, ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಅರಿಶಿನ, ಬಿರಿಯಾನಿ ಹುಡಿ, ನಿಂಬೆ ರಸ, ಉಪ್ಪು ಹಾಕಿ ಕಲಸಿ. ಮತ್ತೆ ಅಕ್ಕಿ ಹಾಕಿ ಚೆನ್ನಾಗಿ ಕಲಸಿ. ಈಗ ಸ್ವಚ್ಛ ಮಾಡಿದ ಬಿದಿರನ್ನು ತೆಗೆದು ಅದಕ್ಕೆ ತಯಾರು ಮಾಡಿಕೊಂಡ ಬಿರಿಯಾನಿ ಅಕ್ಕಿ ಹಾಕಿ ನೀರು ಹಾಕಿ ಬಾಳೆಯ ಸಹಾಯದಿಂದ ಚೆನ್ನಾಗಿ ಮುಚ್ಚಬೇಕು.

ಒಂದು ಒಲೆಯನ್ನು ಸಿದ್ಧಮಾಡಿಕೊಳ್ಳಿ. ಒಲೆಗೆ ಬೆಂಕಿ ಹಾಕಿ ಕೆಂಡ ಸಿದ್ದಮಾಡಿಕೊಳ್ಳಬೇಕು. ಇದರಲ್ಲಿ ಆ ತುಂಬಿಸಿದ ಬಿದಿರನ್ನು ಕೆಂಡದಲ್ಲಿ 40-45 ನಿಮಿಷ ಇಟ್ಟರೆ ರುಚಿಯಾದ ಬಿದಿರಿನ ತರಕಾರಿ ಬಿರಿಯಾನಿ ಸಿದ್ಧವಾಗುತ್ತದೆ.

-ಸ್ತುತಿ ಕೃಷ್ಣರಾಜ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸವಿರುಚಿ: ಬಾಳೆ ಹಣ್ಣು ಪೋಡಿ

Upayuktha

ಸವಿರುಚಿ: ಹಲಸಿನ ಹಣ್ಣಿನ ಬರ್ಫಿ

Upayuktha

ಸವಿರುಚಿ: ನೆಲಬಸಳೆ ಗ್ರೇವಿ

Upayuktha
error: Copying Content is Prohibited !!