ಬೇಕಾಗುವ ಸಾಮಾಗ್ರಿಗಳು
ತುರಿದ ಮುಳ್ಳುಸೌತೆ 2 ಕಪ್
ಗೋಧಿ ಹುಡಿ 2.5 ಕಪ್
ಕೊತ್ತಂಬರಿ ಹುಡಿ 1 ಚಮಚ
ಆಮ್ಚೂರ್ ಹುಡಿ ಅರ್ಧ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ
ನೀರು ಬೇಕಾದಲ್ಲಿ
ಮಾಡುವ ವಿಧಾನ:
ಮುಳ್ಳು ಸೌತೆ ಚೆನ್ನಾಗಿ ತೊಳೆದು ತುದಿ ಭಾಗವನ್ನು ತುಂಡು ಮಾಡಿ ತುರಿದು ಒಂದು ಪಾತ್ರೆಗೆ ಹಾಕಿಡಿ. ಅದಕ್ಕೆ ಗೋಧಿಹುಡಿ, ಕೊತ್ತಂಬರಿ ಹುಡಿ,ಆಮ್ಚೂರ್ ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ 5 ನಿಮಿಷಗಳ ಕಾಲ ಬಿಡಿ.
ಚಿಕ್ಕ ಉಂಡೆ ಕಟ್ಟಿ ಚಪಾತಿಯ ಹಾಗೆ ಲಟ್ಟಿಸಿ. ಕಾದ ಕಾವಲಿಗೆಗೆ ಹಾಕಿ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ ಬೇಯಿಸಿದರೆ ರುಚಿಯಾದ ಮುಳ್ಳುಸೌತೆ ಪರೋಟಾ ಸಿದ್ಧವಾಗುತ್ತದೆ.
– ಸ್ತುತಿ ಕೃಷ್ಣರಾಜ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.