ಆರೋಗ್ಯ ಮನೆ ಮದ್ದು

ಸವಿರುಚಿ: ಮನೆಯಲ್ಲಿಯೇ ಮಾಡಬಹುದಾದ ಮಿನಿ ಚ್ಯವನಪ್ರಾಶ್

ಚ್ಯವನಪ್ರಾಶದ ಮಹತ್ವ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕೋವಿಡ್ – 19 ಸೋಂಕಿನ ಈ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನಪ್ರಾಶ್ ತೆಗೆದುಕೊಳ್ಳುವಂತೆ ಆಯುಷ್ ಇಲಾಖೆ ಸೂಚಿಸಿದೆ. ಹಾಗಾಗಿ ಉತ್ತಮ ಗುಣಮಟ್ಟದ ಚ್ಯವನಪ್ರಾಶ್ ಲಭ್ಯವಾಗದಿದ್ದಲ್ಲಿ ಚಿಂತಿಸದೆ ಮನೆಯಲ್ಲಿಯೇ ಸುಲಭವಾಗಿ ಈ ಮಿನಿ ಚ್ಯವನಪ್ರಾಶ್ ತಯಾರಿಸಬಹುದು. ಇದು ಆರೋಗ್ಯ ವೃದ್ಧಿಗೆ ತುಂಬಾ ಸಹಕಾರಿ.

ಬೇಕಾಗುವ ಪದಾರ್ಥಗಳು:

ಒಣನೆಲ್ಲಿ – 250 ಗ್ರಾಂ
ಹಿಪ್ಪಲಿ – 15 ಗ್ರಾಂ
ದಾಲ್ಚಿನ್ನಿ ಎಲೆ – 7.5 ಗ್ರಾಂ
ಚಕ್ಕೆ – 7.5 ಗ್ರಾಂ
ಏಲಕ್ಕಿ – 7.5 ಗ್ರಾಂ
ಜೋನಿ ಬೆಲ್ಲ – 1.750 ಕಿ. ಗ್ರಾಂ
ತುಪ್ಪ – 100 ಗ್ರಾಂ
ಜೇನು ತುಪ್ಪ – 150 ಗ್ರಾಂ

ಮಾಡುವ ವಿಧಾನ:

ಒಣ ನೆಲ್ಲಿ, ಹಿಪ್ಪಲಿ, ದಾಲ್ಚಿನ್ನಿ ಎಲೆ, ಚಕ್ಕೆ ಹಾಗೂ ಏಲಕ್ಕಿ ಇವುಗಳನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ಒಂದು ಬಾಣಲೆಗೆ 100 ಗ್ರಾಂ ತುಪ್ಪ ಹಾಕಿ ಅದರಲ್ಲಿ ನೆಲ್ಲಿ ಪುಡಿಯನ್ನು ಹುರಿಯಿರಿ. ಆಮೇಲೆ ಅದಕ್ಕೆ 1.750 ಕಿ.ಗ್ರಾಂ ಜೋನಿ ಬೆಲ್ಲ ಹಾಕಿ ಪಾಕ ಬರುವವರೆಗೆ ಕಾಯಿಸಿ. ಪಾಕ ಬರುತ್ತಿದ್ದಂತೆ ಪುಡಿ ಮಾಡಿದ ಹಿಪ್ಪಲಿ, ದಾಲ್ಚಿನ್ನಿ ಎಲೆ, ಚಕ್ಕೆ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಒಲೆಯಿಂದ ಕೆಳಗಿಳಿಸಿ.

ತಣ್ಣಗಾದ ನಂತರ 150 ಗ್ರಾಂ ಜೇನು ತುಪ್ಪ ಸೇರಿಸಿದರೆ ಮಿನಿ ಚ್ಯವನಪ್ರಾಶ ತಯಾರು. ವಯಸ್ಕರು ನಿತ್ಯ 15 ರಿಂದ 20 ಗ್ರಾಂ ನಂತೆ,ಆರು ವರ್ಷದ ಮೇಲಿನ ಮಕ್ಕಳು 5 ರಿಂದ 10 ಗ್ರಾಂ ನಂತೆ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

‘ಝಿಂಕ್’- ದೇಹದೊಳಗಿನ ಕೋವಿಡ್ ವಾರಿಯರ್

Upayuktha

ಪಲ್ಲತ್ತಡ್ಕ ದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ

Harshitha Harish

ಕೋವಿಡ್-19 ಮತ್ತು ಮಾನಸಿಕ ಆರೋಗ್ಯ

Upayuktha

Leave a Comment

error: Copying Content is Prohibited !!