ಅಡುಗೆ-ಆಹಾರ

ಸವಿರುಚಿ: ಹಲಸಿನ ಹಣ್ಣಿನ ಜಾಮ್ (ಬೆರಟಿ)

ಹಲಸಿನ ಹಣ್ಣಿನ ಸೀಸನ್‌ಲ್ಲಿ ಹಲಸಿನ ಕಾಯಿ, ಹಲಸಿನ ಹಣ್ಣಿನದ್ದೇ ವೈವಿಧ್ಯಮಯ ಅಡುಗೆಗಳು, ರುಚಿಗಳು ಬಾಯಲ್ಲಿ ನೀರೂರಿಸುತ್ತವೆ. ಹಳ್ಳಿ ಮನೆಗಳಲ್ಲಿ ನಾಲ್ಕಾರು ಹಲಸಿನ ಮರಗಳಿದ್ದರೆ ಏಕಕಾಲಕ್ಕೆ ತುಂಬಾ ಹಲಸಿನ ಕಾಯಿಗಳು ಪಕ್ವವಾಗಿ ಹಣ್ಣಾಗಿಬಿಡುತ್ತವೆ. ಅವುಗಳನ್ನು ಹಾಳಾಗದಂತೆ ಉಳಿಸಿಕೊಳ್ಳಲು ಮೌಲ್ಯವರ್ಧನೆ ಮಾಡಬೇಕಾಗುತ್ತದೆ.

ಹಲಸಿನ ಹಪ್ಪಳ, ಹಲಸಿನ ಹಣ್ಣಿನ ಹಪ್ಪಳ, ಹಲಸಿನ ಕಾಯಿ ಉಪ್ಪು ಸೊಳೆ, ಹಲಸಿನ ಹಣ್ಣಿನ ಜಾಮ್ ಅಥವಾ ಬೆರಟಿ- ಹೀಗೆ ಹಲವು ರೀತಿಯಲ್ಲಿ ಮೌಲ್ಯವರ್ಧನೆ ಮಾಡಬಹುದು.

ಅವುಗಳ ಪೈಕಿ ಹಲಸಿನ ಹಣ್ಣಿನ ಜಾಮ್ (ಬೆರಟಿ) ಮಾಡುವ ವಿಧಾನವನ್ನು ಹೋಮ್‌ ಆಫ್‌ ಟೇಸ್ಟ್ಸ್‌ನ ದೀಪ್ತಿ ಗಣಪತಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ.

ಮಾಡುವ ವಿಧಾನ:

ಹಲಸಿನ ಹಣ್ಣಿನ ಸೊಳೆಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಕುಕ್ಕರ್‌ನಲ್ಲಿ ಇಟ್ಟು ಬೇಯಿಸಿಕೊಳ್ಳಿ. ಕುಕ್ಕರ್‌ನಲ್ಲಿ ಒಂದು ವಿಸಿಲ್ ಹೊಡೆಸಿದರೆ ಸಾಕು.

ನಂತರ ಒಂದು ಕಡಾಯಿಗೆ ಅದನ್ನು ವರ್ಗಾಯಿಸಿಕೊಳ್ಳಿ. ಅದನ್ನು ಚೆನ್ನಾಗಿ ಸೌಟಿನಲ್ಲಿ ಕಲಕುತ್ತಾ ಇರಿ. ಹಿಟ್ಟಿನ ರೂಪಕ್ಕೆ ಬಂದ ಹಲಸಿನ ಹಣ್ಣು ಕಡಾಯಿಗೆ ತಳಹತ್ತದಂತೆ ನೋಡಿಕೊಳ್ಳಿ. ಹಣ್ಣಿನ ಜಾಮ್‌ ಕಂದು ಕಡು ಬಣ್ಣಕ್ಕೆ ಬರುವವರೆಗೂ ಕಾಯಿಸುತ್ತಾ ಇರಿ. ಹದಪಾಕ ಬರುವ ವರೆಗೂ ಕಾಯಿಸುತ್ತಾ ಇರಿ. ಹೆಚ್ಚು ಹೊತ್ತು ಕಾಯಿಸಿದಷ್ಟೂ ಪಾಕ ಗಟ್ಟಿಯಾಗಬಹುದು. ಚಾಕಲೇಟ್‌ನಂತೆ ಗಟ್ಟಿಯಾದಷ್ಟೂ ಬಾಳಿಕೆ ಹೆಚ್ಚು ಬರುತ್ತದೆ.

ಸುಮಾರು ಮೂರು ತಿಂಗಳ ವರೆಗೆ ಇಟ್ಟರೂ ಹಲಸಿನ ಹಣ್ಣಿನ ಜಾಮ್ (ಬೆರಟಿ) ಕೆಡುವುದಿಲ್ಲ. ಅನಂತರ ಫ್ರಿಜ್‌ನಲ್ಲಿಟ್ಟರೆ ಒಂದು ವರ್ಷದ ವರೆಗೂ ಕೆಡದಂತೆ ಉಳಿಸಿಕೊಳ್ಳಬಹುದು. ಆದರೆ ತೇವಾಂಶದ ಸಂಪರ್ಕಕ್ಕೆ ಬಾರದಂತೆ ಜಾಗ್ರತೆವಹಿಸಬೇಕಾಗುತ್ತದೆ.

ದೊಡ್ಡ ಪ್ರಮಾಣದಲ್ಲಿ ಈ ರೀತಿ ಜಾಮ್ ಅಥವಾ ಹಲಸಿನ ಹಣ್ಣಿನ ಬೆರಟಿ ತಯಾರಿಸಿಟ್ಟರೆ, ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಅದರಿಂದ ಪಾಯಸವನ್ನೂ ತಯಾರಿಸಬಹುದು.

ಜಾಮ್‌ ಸ್ವಲ್ಪ ಎಳೆಪಾಕವಾಗಿದ್ದರೆ ಅದನ್ನು ದೋಸೆ, ಇಡ್ಲಿ, ಚಪಾತಿಯಂತಹ ತಿಂಡಿಗಳ ಜತೆ ಸೇರಿಸಿಕೊಂಡು ತಿನ್ನಬಹುದು.

– ದೀಪ್ತಿ ಗಣಪತಿ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಸವಿರುಚಿ: ಗೆಣಸಿನ ಪಾಯಸ, ಹಲಸಿನ ಬೀಜದ ಸಾರು

Upayuktha

ಸವಿರುಚಿ: ಕೊಕೊನಟ್ ಮ್ಯಾಂಗೋ ಕ್ಯಾಂಡಿ

Upayuktha

ಸವಿರುಚಿ: ಹೆಸರು ಕಾಳಿನ ದೋಸೆ

Upayuktha
error: Copying Content is Prohibited !!