ಅಡುಗೆ-ಆಹಾರ

ಸವಿರುಚಿ: ಹಲಸಿನ ಬೀಜದ ಲಡ್ಡು

ಹಲಸಿನ ಹಣ್ಣಿನ ಉಪಯೋಗಗಳು ಹಲವು. ಹಲಸಿನ ಸೀಸನ್‌ಲ್ಲಿ ಸಾಮಾನ್ಯವಾಗಿ ಪ್ರತಿದಿನ ಹಲಸಿನ ವಿವಿಧ ಉತ್ಪನ್ನಗಳದ್ದೇ ಅಡುಗೆ ಇರುತ್ತದೆ. ಹಲಸಿನ ಬೀಜದಿಂದ ಸವಿಯಾದ ಲಡ್ಡು ತಯಾರಿಸಬಹುದು. ಅದರ ಪಾಕ ವಿಧಾನ ಇಲ್ಲಿದೆ:

ಅಗತ್ಯ ಸಾಮಾಗ್ರಿಗಳು
ಮಳೆಗಾಲಕ್ಕೆ ಶೇಖರಿಸಿ ಇಟ್ಟ ಹಲಸಿನ ಬೀಜ – 6 ಕಪ್,  ಬೆಲ್ಲ 4 – ಕಪ್,  ತೆಂಗಿನ ಕಾಯಿ ತುರಿ – 3 ಕಪ್,  ಏಲಕ್ಕಿ ಪುಡಿ – 1 ಚಮಚ.

ತಯಾರಿಸುವ ವಿಧಾನ
ಹಲಸಿನ ಬೀಜದ ಹೊರಗಿನ ಸಿಪ್ಪೆ ತೆಗೆದು ಶುಚಿಗೊಳಿಸಿ ಚೆನ್ನಾಗಿ ಬೇಯಿಸಿ. ಬೆಂದ ಹಲಸಿನ ಬೀಜ, ಬೆಲ್ಲ, ತೆಂಗಿನ ಕಾಯಿ ತುರಿ, ಸ್ವಲ್ಪ ನೀರು ಹಾಕಿ ಪಾಕ ತಯಾರಿಸಿ. ಅದಕ್ಕೆ ಏಲಕ್ಕಿ ಪುಡಿ ಹಾಕಿ. ಪಾಕಕ್ಕೆ ನೀರು ಹಾಕದೆ ಗಟ್ಟಿಯಾಗಿ ಅರೆಯಿರಿ. ಲಿಂಬೆ ಗಾತ್ರದ ಉಂಡೆ ಮಾಡಿ. ಹಲಸಿನ ಬೀಜದ ಲಡ್ಡು ಸಿದ್ಧ.

ಇನ್ನೊಂದು ವಿಧ
ಮೇಲಿನ ವಿಧಾನದಲ್ಲಿ ತಯಾರಿಸಿದ ಲಡ್ಡನ್ನು ಅಕ್ಕಿ ಅಥವಾ ಮೈದಾ ಹಿಟ್ಟಿನಲ್ಲಿ ಮುಳುಗಿಸಿ, ಎಣ್ಣೆಯಲ್ಲಿ ಕರಿಯುವುದು.
ಅಕ್ಕಿ ಅಥವಾ ಮೈದಾ ಪುಡಿ – ಒಂದೂವರೆ ಕಪ್, ನೀರು, ತೆಂಗಿನ ಎಣ್ಣೆ – 2 ಕಪ್, ಉಪ್ಪು ರುಚಿಗೆ ತಕ್ಕಷ್ಟು.
ಅಕ್ಕಿ ಅಥವಾ ಮೈದಾ ಪುಡಿ, ನೀರು, ಉಪ್ಪು ಹಾಕಿ ತೆಳ್ಳಗಿನ ಹಿಟ್ಟು ತಯಾರಿಸಿ.
ಹಲಸಿನ ಬೀಜದ ಲಡ್ಡನ್ನು ಈ ಹಿಟ್ಟಿನಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಇದು ತಿನ್ನಲು ಬಹಳ ರುಚಿ.

– ಪುಷ್ಪಲತಾ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಪ್ರವಾಸ: ಗಢವಾಲ್‌ನ ಪಹಾಡಿ ಅಡುಗೆಯ ಮೋಡಿ

Upayuktha

ಸವಿರುಚಿ: ನಕ್ಷತ್ರ ನೇರಳೆ ಹಣ್ಣಿನ ಗೊಜ್ಜು

Upayuktha

ಸವಿರುಚಿ: ಗರಿ ಗರಿ ಕುಕ್ಕೀಸ್

Upayuktha