ಅಡುಗೆ-ಆಹಾರ

ಸವಿರುಚಿ: ಕಾಯಿ ಹೋಳಿಗೆ

ಬೇಕಾದ ಸಾಮಾಗ್ರಿಗಳು
ಮೈದಾ
ಚಿಟಿಕೆ ಅರಿಶಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ನೀರು

ತುರಿದ ಹಸಿ ಕೊಬ್ಬರಿ
ಬೆಲ್ಲ
ಏಲಕ್ಕಿ ಪುಡಿ
ಎಣ್ಣೆ
ಪುಟಾಣಿ ಹಿಟ್ಟು (ಹುರಿಗಡಲೆ ಹಿಟ್ಟು )

ಕಾಯಿ ಹೋಳಿಗೆ ಮಾಡುವ ವಿಧಾನ:

ಮೊದಲಿಗೆ ಮೈದಾ ಹಿಟ್ಟಿಗೆ (ಚಿರೋಟಿ ರವೆ ಕೂಡ ಬಳಸಿಕೊಳ್ಳಬಹುದು ) ಚಿಟಿಕೆ ಅರಿಶಿನ ಪುಡಿ ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ ಮೃದುವಾಗಿ ಹಿಟ್ಟನ್ನು ತಯಾರಿಸಿಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಪಾಕ ಮಾಡಿಕೊಳ್ಳಿ ಒಂದು ಎಳೆ ಪಾಕ ಬಂದ್ರೆ ಸಾಕು ಈಗ ಇದಕ್ಕೆ ತುರಿದ ಕೊಬ್ಬರಿಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ ಇದು ಗಟ್ಟಿ ಆಗಿಲ್ಲ ಅಂದ್ರೆ ಸ್ವಲ್ಪ ಹುರಿಗಡಲೆ ಹಿಟ್ಟನ್ನು ಹಾಕಿ ನಂತರ ಏಲಕ್ಕಿ ಪುಡಿಯನ್ನು ಹಾಕಿ ಹೂರಣ ತಯಾರಿಸಿಕೊಳ್ಳಿ.

ನಂತರ ಕಲಸಿಟ್ಟುಕೊಂಡಿರುವ ಮೈದಾ ಹಿಟ್ಟನ್ನು ಒಂದು ಚಿಕ್ಕ ಉಂಡೆ ಗಾತ್ರದಷ್ಟು ತೆಗೆದುಕೊಂಡು ಪೂರಿ ಸೈಜಿನಲ್ಲಿ ಲಟ್ಟಿಸಿ ಅದರೊಳಗೆ ಮಾಡಿಟ್ಟುಕೊಂಡಿರುವ ಕಾಯಿ ಹೂರಣವನ್ನು ಹಾಕಿ ಫುಲ್ ಕವರ್ ಮಾಡಿ ಮತ್ತೊಮ್ಮೆ ಲಟ್ಟಿಸಿಕೊಳ್ಳಿ. ನಂತರ ಸಾಧಾರಣ ಉರಿಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಳಸಿ ಎರಡೂ ಬದಿಯಲ್ಲೂ ಹೊಂಬಣ್ಣ ಬರುವವರೆಗೂ ಬೇಯಿಸಿ. ಈಗ ರುಚಿಕರವಾಗಿರುವ ಕಾಯಿ ಹೋಳಿಗೆ ರೆಡಿ.

ತುಪ್ಪ ಹಾಕಿಕೊಂಡು ತಿನ್ನಬಹುದು. ಹಬ್ಬದ ದಿನಗಳಲ್ಲಿ ತುಂಬಾ ಕಾಯಿಗಳು ಇದ್ದರೆ ಈ ತರ ಕಾಯಿ ಹೋಳಿಗೆ ಮಾಡಿಕೊಂಡು ತಿನ್ನಬಹುದು.

ಇನ್ನೂ ಹೆಚ್ಚಿನ ವಿಡಿಯೋಗಳಾಗಿ ಯೂಟ್ಯೂಬ್‌ ನಲ್ಲಿ ಪ್ರೀತಿಯಿಂದ ಅನುಶ್ರುತಿ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಸವಿರುಚಿ: ಪಪ್ಪಾಯಿ ಹಲ್ವಾ

Upayuktha

ಸವಿರುಚಿ: ಸುಟ್ಟ ಬದನೆ ಗೊಜ್ಜು

Upayuktha

ಬ್ರೇಕ್‌ಫಾಸ್ಟ್‌ಗೂ ಸೈ, ಸ್ನ್ಯಾಕ್ಸ್‌ಗೂ ಸೈ ರುಚಿಕರ ಚೀಸ್ ಪಾಸ್ತಾ

Upayuktha