ಬೇಕಾದ ಸಾಮಗ್ರಿಗಳು:
ಹಾಲು1/2 ಲೀಟರ್
ನಿಂಬೆ ಹಣ್ಣು 1
ಕಾರ್ನ್ ಫ್ಲೋರ್ ಹುಡಿ 1 ಚಮಚ
ನೀರು 4 ಕಪ್
ನೀಲಿ ಶಂಖ ಪುಷ್ಪ 15
ಸಕ್ಕರೆ 1 ಕಪ್ಪು
ಏಲಕ್ಕಿ ಹುಡಿ 1 ಚಮಚ
ಡ್ರೈ ಫ್ರೂಟ್ಸ್
ಮಾಡುವ ವಿಧಾನ:
ಹಾಲನ್ನು ಚೆನ್ನಾಗಿ ಕುದಿಸಿ.
ನಿಂಬೆ ರಸ ಬೆರೆಸಿ.
ಹಾಲು ಒಡೆದು ಹೋದ ಮೇಲೆ ನೀರನ್ನು ಬಸಿದು ತೆಗೆದು ಹೊಸ ನೀರು ಹಾಕಿ ತೊಳೆದು
ಚನ್ನ (ಪನ್ನೀರು) ಸಂಗ್ರಹಣೆ ಮಾಡಿ.
ಕಾರ್ನ್ ಫ್ಲೋರ್ ಹುಡಿ ಹಾಕಿ ಮಿಶ್ರ ಮಾಡಿ ಚೆನ್ನಾಗಿ ನಾದಿ ಸಣ್ಣ ನಿಂಬೆ ಗಾತ್ರದ್ದು ಉಂಡೆ ಮಾಡಿ ಒವಲ್ ಶೇಪ್ ಕೊಡಿ.
ನೀರು, ಸಕ್ಕರೆ, ಶಂಖ ಪುಷ್ಪದ ಹೂ ಕುದಿಯಲು ಇಡಿ.
ಬಣ್ಣ ಬಂದ ನಂತರ ಹೂಗಳನ್ನು ತೆಗೆದು “ಚನ್ನ” ಉಂಡೆಗಳು ಹಾಕಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ, ಗ್ಯಾಸ್ ಆರಿಸಿ ಆರಲು ಬಿಡಿ.
ಆರಿದ ನಂತರ ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿ ಸರ್ವ್ ಮಾಡಿ.
– ರಾಜೇಶ್ವರಿ ಶ್ಯಾಮ್ ಭಟ್
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ