ಅಡುಗೆ-ಆಹಾರ

ಸವಿರುಚಿ: ಬಾಳೆ ಹಣ್ಣು ಪೋಡಿ

ನೇಂದ್ರ ಬಾಳೆಹಣ್ಣು 10
ಮೈದಾ 1 ಕಪ್
ಅಕ್ಕಿಹುಡಿ ಅರ್ಧ ಕಪ್
ಸಕ್ಕರೆ 2 ಚಮಚ
ಅರಶಿನ ಹುಡಿ ಅರ್ಧ ಚಮಚ
ಕಪ್ಪು ಎಳ್ಳು ಅರ್ಧ ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಬಾಳೆಹಣ್ಣಿನ ನಮಗೆ ಬೇಕಾದ ಹಾಗೆ ಕಟ್ ಮಾಡಿಕೊಳ್ಳಬೇಕು. ಮೈದಾ, ಅಕ್ಕಿಹುಡಿ (2:1 ಪ್ರಮಾಣದಲ್ಲಿ) ಸಕ್ಕರೆ, ಅರಿಶಿನ, ಕಪ್ಪು ಎಳ್ಳು, ಉಪ್ಪು ಎಲ್ಲ ಹಾಕಿ ಒಂದರಿ ಕಲಸಿ. ಮತ್ತೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಹಿಟ್ಟಿನ ನೀರು ಮಾಡಿಕೊಳ್ಳಬೇಕು. (ಬೇರೆ ಪೋಡಿ ಹಿಟ್ಟಿನಂತೆ) ಮತ್ತೆ ಹಿಟ್ಟಿನಲ್ಲಿ ಬಾಳೆಹಣ್ಣನ್ನು ಅದ್ದಿ ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಚಹಾ ಅಥವಾ ಕಾಫಿಯ ಜತೆ ಸವಿಯಲು ರುಚಿ ರುಚಿಯಾದ ಬಾಳೆ ಹಣ್ಣಿನ ಪೋಡಿ (ಬಜ್ಜಿ) ರೆಡಿಯಾಯ್ತು.

– ಸ್ತುತಿ ಕೃಷ್ಣರಾಜ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಸವಿರುಚಿ: ಹಲಸಿನ ಬೀಜದ ಪರೋಟ

Upayuktha

ಸವಿರುಚಿ: ‘ನೀರ ಕಡ್ಡಿ’ ತಂಬುಳಿ

Upayuktha

ಸವಿರುಚಿ: ಕೃತಕ ಬಣ್ಣ ಬಳಸದೆ ಮನೆಯಲ್ಲೇ ಟೂಟಿ ಫ್ರೂಟಿ ತಯಾರಿಸಿ

Upayuktha

Leave a Comment

error: Copying Content is Prohibited !!