ಅಡುಗೆ-ಆಹಾರ

ಸವಿರುಚಿ: ಚೀನಿಕಾಯಿ ಎಲೆಯ ಸಾಂಪ್ರದಾಯಿಕ ಅಡುಗೆ ಹುಳಿಮೆಣಸು

ಬೇಕಾಗುವ ಸಾಮಗ್ರಿಗಳು:

ಚೀನಿಕಾಯಿ ಚಿಗುರು ಎಲೆಗಳು – 50
ಉಪ್ಪು ರುಚಿಗೆ
ಬೆಲ್ಲ ಸಣ್ಣ ನಿಂಬೆ ಗಾತ್ರದ್ದು
ನೀರು

ಮಸಾಲೆಗೆ:
ತೆಂಗಿನಕಾಯಿ 1 ಕಪ್ಪು
ಕೆಂಪು ಮೆಣಸಿನಕಾಯಿ 2-4
ಅರಿಶಿನ ಪುಡಿ 1/4 ಚಮಚ
ಹುಣಸೆ ಹಣ್ಣು 1 ಸಣ್ಣ ನಿಂಬೆ ಗಾತ್ರದ್ದು

ಒಗ್ಗರಣೆಗೆ:
ತೆಂಗಿನ ಎಣ್ಣೆ 2 ಚಮಚ
ಬ್ಯಾಡಗಿ ಮೆಣಸು 1
ಸಾಸಿವೆ 1 ಚಮಚ
ಬೆಳ್ಳುಳ್ಳಿ 10-15 ಎಸಳು
ಕರಿಬೇವು ಎಲೆ

ಮಾಡುವ ವಿಧಾನ:
ಎಳೆಯ ಚಿಗುರು ಕಿತ್ತು, ತೊಳೆದು, ಸಣ್ಣದಾಗಿ ತುಂಡರಿಸಿ.
ಉಪ್ಪು, ಬೆಲ್ಲ ಮತ್ತು ನೀರು ಹಾಕಿ ಕುದಿಸಿ.
ಮಸಾಲೆಗೆ ತೆಂಗಿನ ಕಾಯಿ, ಮೆಣಸು, ಅರಿಶಿನ, ಹುಣಸೆ ಹುಳಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿ.
ಸೊಪ್ಪು ಬೆಂದಾಗ ರುಬ್ಬಿದ ಮಿಶ್ರಣ ಸೇರಿಸಿ ಸ್ವಲ್ಪ ನೀರು ಹಾಕಿ ಕುದಿಸಿ.
ಗ್ಯಾಸ್ ಆರಿಸಿ ಕೊಳ್ಳಿ.
ಬಾಣಲೆಯಲ್ಲಿ ತೆಂಗಿನ ಎಣ್ಣೆ 2 ಚಮಚ ಬಿಸಿ ಮಾಡಿ, ಬ್ಯಾಡಗಿ ಕೆಂಪು ಮೆಣಸಿನಕಾಯಿ, ಸಾಸಿವೆ ಹಾಕಿ ಸಿಡಿಸಿ, ಸುಲಿದ ಬೆಳ್ಳುಳ್ಳಿ ಹಾಕಿ ಹುರಿದು, ಕರಿಬೇವು ಸೇರಿಸಿ.
ಹುಳಿಮೆಣಸಿನ ಸಾಂಬಾರಿಗೆ ಹಾಕಿ ಮಿಶ್ರ ಮಾಡಿ ಬಡಿಸಿ.

– ರಾಜೇಶ್ವರಿ ಶ್ಯಾಮ್ ಭಟ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸವಿರುಚಿ: ಮಸಾಲ ಚನ್ನಾ

Upayuktha

ಚಪಾತಿ ಜತೆ ನೆಂಜಿಕೊಳ್ಳಲು ರುಚಿ ರುಚಿ ಕ್ಯಾಪ್ಸಿಕಂ ಕೂರ್ಮ

Upayuktha

ಸವಿರುಚಿ: ಕೇಪುಳ ಹೂವಿನ ತಂಬುಳಿ

Upayuktha

Leave a Comment