ಅಡುಗೆ-ಆಹಾರ

ಸವಿರುಚಿ: ಬಸಳೆ ಎಲೆಯ ಸಿಗಾರ್

ಬೇಕಾದ ಸಾಮಾಗ್ರಿ
ಬಸಳೆ ಎಲೆ 7
ಬೇಯಿಸಿದ ಬಟಾಟೆ 2
ಈರುಳ್ಳಿ 1
ಬೆಳ್ಳುಳ್ಳಿ 10
ಚಿಲ್ಲಿ ಫ್ಲ್ಯಾಕ್ ಅರ್ಧ ಚಮಚ
ಒರಗೇನೋ ಅರ್ಧ ಚಮಚ
ಅರಿಶಿನ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ 1 ಚಮಚ
ಆಮಚುರು ಅರ್ಧ ಚಮಚ
ಕರಿಬೇವು 7
ಚಾಟ್ ಮಸಾಲ ಕಾಲು ಚಮಚ
ಜೀರಿಗೆ 1 ಚಮಚ
ಎಣ್ಣೆ ಕಾಲ್ ಕಪ್
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹಾಕಿ ಚೆನ್ನಾಗಿ ಬಾಡಿಸಿ. ನಂತರ ಚಿಲ್ಲಿ ಪ್ಲಾಕ್, ಒರಗೇನೂ, ಆಮ್ಚುರು ಪುಡಿ, ಅರಿಶಿನ, ಕೊತ್ತಂಬರಿ ಪುಡಿ ಹಾಕಿ ಕಲಸಿ. ಬೇಯಿಸಿದ ಮತ್ತು ಮಾಷ್ ಮಾಡಿದ ಬಾಟಾಟೆಯನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿದರೆ stuff ಸಿದ್ಧವಾಗುತ್ತದೆ.

ಒಂದು ಬಸಳೆ ಎಲೆಯಲ್ಲಿ ಈ stuff ಹಾಕಿ ಉದ್ದಕ್ಕೆ ಇಟ್ಟು ಎರಡು ಬದಿಯನ್ನು ಮಡಿಚಿ ಇಡಿ. ಎಲ್ಲವನ್ನು ಹಾಗೆ ಮಾಡಿ.

ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಮಡಿಚಿಟ್ಟ ಬಸಳೆ ಎಲೆಯನ್ನು ಒಂದೊಂದೇ ಇಟ್ಟು ಮುಚ್ಚಿ 5 ನಿಮಿಷ ಮೀಡಿಯಂ ಉರಿಯಲ್ಲಿ ಬೇಯಲು ಬಿಡಿ. ರುಚಿಯಾದ ತಿಂಡಿ ಸಿದ್ಧವಾಗುತ್ತದೆ. ಇದನ್ನು ಚಹಾ, ಕಾಫಿಯ ಜೊತೆ ಸವಿಯಬಹುದು.
– ಸ್ತುತಿ ಕೃಷ್ಣರಾಜ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸವಿರುಚಿ: ನಕ್ಷತ್ರ ನೇರಳೆ ಹಣ್ಣಿನ ಗೊಜ್ಜು

Upayuktha

ಸವಿರುಚಿ: ಏನಿದು ಗೆರಟೆ ಚಹಾ / ಚಿಪ್ಪಿ ಚಾ? ನೀವೂ ಮಾಡಿ ನೋಡಿ…

Upayuktha

ಸವಿರುಚಿ: ಬಸಳೆ ಸೊಪ್ಪಿನ ತಂಬುಳಿ

Upayuktha