ಹಾಯ್ ಫ್ರೆಂಡ್ಸ್, ಮಳೆಗಾಲದಲ್ಲಿ ಏನಾದರೂ ಸಿಹಿಯಾಗಿ ತಿನ್ನಬೇಕೆನಿಸಿದರೆ ದಿಢೀರಾಗಿ ಮಾಡಿ ಸಿಹಿಗೆಣಸಿನ ಪಾಯಸ.
ಸಿಹಿಗೆಣಸನ್ನು ಚಿಕ್ಕದಾಗಿ ಕತ್ತರಿಸಿ ಬೇಯಿಸಿ, ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಆದ ಮೇಲೆ 2 ಸ್ಪೂನ್ ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಕುದಿಸಿ ನಂತರ ತೆಂಗಿನಹಾಲು ಹಾಕಿ ಮುಚ್ಚಿಡಿ, 5 ನಿಮಿಷ ಬಿಟ್ಟು ಏಲಕ್ಕಿ ಪುಡಿ ಸೇರಿಸಿ ಸವಿಯಿರಿ.
****
ಹಲಸಿನ ಬೀಜದ ಸಾರು
8 ಹಲಸಿನ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆದು ಕಟ್ ಮಾಡಿಕೊಳ್ಳಿ.
ಬಾಣಲೆಯಲ್ಲಿ ಇಂಗು, ಕೊತ್ತಂಬರಿ, ಮೆಂತೆ, ಜೇರಿಗೆ, ಕೆಂಪುಮೆಣಸು ಇವುಗಳನ್ನು ಹುರಿದುಕೊಳ್ಳಿ, ನಂತರ ಹಲಸಿನ ಬೀಜದೊಂದಿಗೆ ಎಲ್ಲ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಿ, ಸ್ವಲ್ಪ ಹುಣಸೆಹಣ್ಣು ಸೇರಿಸಿ ರುಬ್ಬಿದ ಮಸಾಲೆಗೆ ಬೇಕಾದಷ್ಟು ನೀರು ಸೇರಿಸಿ ಉಪ್ಪು ಬೆಲ್ಲ ಹಾಕಿ ಕುದಿಸಿ, ಒಗ್ಗರಣೆ ಹಾಕಿ ಊಟಕ್ಕೆ ರುಚಿಯಾಗಿರುತ್ತದೆ.
– ಶಂಕರಿ ಭಟ್, ಪಾದೆಕಲ್ಲು ಮನೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.