ಅಡುಗೆ-ಆಹಾರ

ಸವಿರುಚಿ: ಅಕ್ಕಿ ರೊಟ್ಟಿ

ಪದಾರ್ಥಗಳು
2 ಕಪ್ ನೀರು
1 ಟೀಸ್ಪೂನ್ ಎಣ್ಣೆ
1 ಟೀಸ್ಪೂನ್ ಉಪ್ಪು
2 ಕಪ್ ಅಕ್ಕಿ ಹಿಟ್ಟು

ವಿಧಾನ:
ದೊಡ್ಡ ಕಡಾಯಿಯನ್ನು ತೆಗೆದುಕೊಂಡು ನೀರು, ಎಣ್ಣೆ ಮತ್ತು ಉಪ್ಪು ಸೇರಿಸಿ, ನೀರು ಕುದಿಯಲು ಇಡಿ. ನೀರು ಕುದಿಯಲು ಪ್ರಾರಂಭಿಸಿದಾಗ ಅಕ್ಕಿ ಹಿಟ್ಟು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡುತ್ತ ಬರಬೇಕು.
ಹಿಟ್ಟು ನೀರನ್ನು ಹೀರಿಕೊಂಡ ನಂತರ, ಮುಚ್ಚಳವನ್ನು ಮುಚ್ಚಿ 2 ರಿಂದ 3 ನಿಮಿಷಗಳ ಬೇಯಲು ಬಿಡಬೇಕು.
ಅಕ್ಕಿ ಹಿಟ್ಟು ತೇವವಾಗುತ್ತದೆ. ನಂತರ ಅಕ್ಕಿ ಹಿಟ್ಟಿನ ಮಿಶ್ರಣವನ್ನು ಒಂದು ಪಾತ್ರಕ್ಕೆ ವರ್ಗಾಯಿಸಿಕೊಂಡು 5 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಮಿಶ್ರಣವು ಸ್ವಲ್ಪ ಬಿಸಿಯಾಗಿದ್ದಾಗ, ಕೈ ಒದ್ದೆ ಮಾಡಿಕೊಂಡು ಚೆನ್ನಾಗಿ ಬೆರೆಸಿಕೊಳ್ಳಿ.
ಅಕ್ಕಿ ಹಿಟ್ಟಿನ ನಯವಾದ ಮತ್ತು ಮೃದುವಾದ ಹಿಟ್ಟನ್ನು ಮಾಡಿಕೊಳ್ಳಬೇಕು.
ಚೆಂಡಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ನಿಧಾನವಾಗಿ ರೊಟ್ಟಿಯ ಹಾಗೆ ಹರಡಿಸಿಕೊಳ್ಳಿ.
ಹರಡಿಸಿದ ಮೇಲೆ ಕಾದ ತವಾದ ಮೇಲೆ ಹಾಕಿ ಎರಡೂ ಬದಿ ಬೇಯಿಸಿ ಅಥವಾ ನೇರವಾಗಿ ಜ್ವಾಲೆಯಲ್ಲಿ ಬೇಯಿಸಿ.
ಆರೋಗ್ಯಕರ ಮತ್ತು ಟೇಸ್ಟಿ ಅಕ್ಕಿ ರೊಟ್ಟಿ ಈಗ ತಿನ್ನಲು ಸಿದ್ಧವಾಗಿದೆ.

-ಸ್ತುತಿ ಕೃಷ್ಣರಾಜ
(ಟ್ರೆಂಡಿ ಏಂಜೆಲ್ಸ್‌ ಕಿಚನ್)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಸವಿರುಚಿ: ಸಹಜ ನೀಲಿ ಚಂಪಕಲ್ಲಿ

Upayuktha

ಸವಿರುಚಿ: ಅರ್ಕ ಮತ್ತು ಬಾಳೆಹಣ್ಣಿನ ಕಡುಬು

Upayuktha

ಸವಿರುಚಿ: ನೆರುಗಲ ಸೊಪ್ಪಿನ ಪಲ್ಯ, ತಂಬುಳಿ, ಸಾರು

Upayuktha