ಅಡುಗೆ-ಆಹಾರ

ಸವಿರುಚಿ: ಓಣಂ ಸ್ಪೆಷಲ್- ಉದ್ದಿನಬೇಳೆ ಪಾಯಸ

ಉದ್ದಿನ ಬೇಳೆಯಿಂದ ಇಡ್ಲಿ ಮಾಡೋದು ಗೊತ್ತು, ದೋಸೆ ಮಾಡೋದು ಗೊತ್ತು, ಹಾಗೆಯೇ ಉದ್ದಿನ ವಡೆ ಮಾಡುವುದೂ ಗೊತ್ತು; ಆದರೆ ಉದ್ದಿನ ಬೇಳೆಯಿಂದ ರುಚಿಯಾದ ಪಾಯಸವನ್ನೂ ಮಾಡಬಹುದು ಅಂತ ಗೊತ್ತಾ? ಟ್ರೆಂಡಿ ಏಂಜೆಲ್ಸ್ ಕಿಚನ್‌ನ ಸ್ತುತಿ ಕೃಷ್ಣರಾಜ ಅವರು ಅದನ್ನು ಇಲ್ಲಿ ಹೇಳಿಕೊಟ್ಟಿದ್ದಾರೆ, ಓದಿ…

ಬೇಕಾದ ಸಾಮಾಗ್ರಿ
ಉದ್ದಿನಬೇಳೆ ಮುಕ್ಕಾಲು ಕಪ್
ಬೆಲ್ಲ 1 ಕಪ್
ಹಾಲು 2 ವರೆ ಕಪ್
ಉಪ್ಪು ಒಂದು ಚಿಟಿಕಿ
ತೆಂಗಿನ ಹಾಲು 3 ಕಪ್
ತೆಂಗಿನ ತುರಿ 3 ಚಮಚ
ತುಪ್ಪ 2 ಚಮಚ
ಏಲಕ್ಕಿ ಪುಡಿ 1 ಚಮಚ
ಒಣ ದ್ರಾಕ್ಷಿ 6
ಗೋಡಂಬಿ 4

ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಇಡಿ ಉದ್ದನ್ನು ಕಂದು ಬಣ್ಣ ಬರೋವರೆಗೆ ಹುರಿದು ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ಒಂದು ಕಡಾಯಿಯಲ್ಲಿ ತುಪ್ಪ ಹಾಕಿ ಒಣ ದ್ರಾಕ್ಷಿ, ಗೋಡಂಬಿ ಹಾಕಿ ಹುರಿಯಿರಿ. ಅದಕ್ಕೆ ಹಾಲು ಹಾಕಿ ಕುದಿಸಿ. ಹಾಲು ಕುದಿಯುತ್ತ ಬಂದಾಗ ಕೇಸರಿ, ಏಲಕ್ಕಿ ಪುಡಿ, ಒಂದು ಚಿಟಿಕಿ ಉಪ್ಪು ಹಾಕಿ. ನಂತರ ಹುರಿದು ಪುಡಿ ಮಾಡಿ ಇಟ್ಟುಕೊಂಡ ಉದ್ದಿನಬೇಳೆಯನ್ನು ಹಾಕಿ ಚೆನ್ನಾಗಿ ಗಂಟು ಇಲ್ಲದಂತೆ ಕಲಸಿ. ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಅದಕ್ಕೆ ತೆಂಗಿನ ಕಾಯಿ ಹಾಲನ್ನು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ತುಂಡು ಮಾಡಿದ ಬಾದಾಮಿಯನ್ನು ಹಾಕಿದರೆ ರುಚಿಯಾದ ಆರೋಗ್ಯವಾದ ಉದ್ದಿನಬೇಳೆ ಪಾಯಸ ಸಿದ್ಧವಾಗುತ್ತದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸೌತೆಕಾಯಿ, ಕುಂಬಳಕಾಯಿ ವೆರೈಟಿ ದೋಸೆ

Upayuktha

ಸವಿರುಚಿ: ಆಮ್ಚೂರು (ಒಣಗಿಸಿದ ಮಾವಿನ ಕಾಯಿಯ ಪೌಡರ್)

Upayuktha

ರುಚಿ ರುಚಿ ವೆರೈಟಿ ದೋಸೆಗಳು

Upayuktha

Leave a Comment

error: Copying Content is Prohibited !!