ಬೇಕಾದ ಸಾಮಗ್ರಿ
ದೋಸೆ ಅಕ್ಕಿ 1 ವರೆ ಕಪ್
ಬೆಲ್ಲ 1 ಕಪ್
ನೀರು ಕಾಲು ಕಪ್
ಬಿಳಿ ಎಳ್ಳು 1 ಚಮಚ
ಏಲಕ್ಕಿ ಪುಡಿ ಕಾಲು ಚಮಚ
ಕರಿಮೆಣಸು ಪುಡಿ ಅರ್ಧ ಚಮಚ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ದೋಸೆ ಅಕ್ಕಿ ಹಾಕಿ, ತೊಳೆದು, ನೀರು ಹಾಕಿ 3ರಿಂದ 4 ಗಂಟೆಗಳ ಕಾಲ ನೆನಯಲು ಬಿಡಿ. ನೆನೆ ಹಾಕಿದ ಅಕ್ಕಿಯನ್ನು ಬಸಿದು ಒಂದು ಬಟ್ಟೆಯಲ್ಲಿ ಒಣಗಲು ಹಾಕಿ. 30 ನಿಮಿಷದ ಬಳಿಕ ಅಕ್ಕಿಯನ್ನು ಒಂದು ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಾಡಿಕೊಂಡ ಅಕ್ಕಿ ಪುಡಿಯನ್ನು ಜರಡಿ ಮಾಡಿಕೊಂಡು ತೆಗೆದಿಡಿ. ಸಣ್ಣ ಬಾಣಲೆಯಲ್ಲಿ ಬಿಳಿ ಎಳ್ಳು ಹಾಕಿ ಹುರಿದುಕೊಳ್ಳಿ.
ಒಂದು ಬಾಣಲೆಯಲ್ಲಿ ಬೆಲ್ಲ, ನೀರು ಹಾಕಿ ಬೆಲ್ಲ ಪಾಕ ಮಾಡಿಕೊಳ್ಳಬೇಕು. ಬೆಲ್ಲ ಪಾಕಕ್ಕೆ ಅರ್ಧದಷ್ಟು ಮಾಡಿ ಇಟ್ಟುಕೊಂಡ ಅಕ್ಕಿಪುಡಿ, ಕರಿಮೆಣಸಿನ ಪುಡಿ, ಏಲಕ್ಕಿ ಪುಡಿ, ಹುರಿದ ಎಳ್ಳು ಎಲ್ಲ ಹಾಕಿ ಚೆನ್ನಾಗಿ ಕಲಸಿ. ಕಲಸಿದ ನಂತರ ಬಾಕಿ ಮಾಡಿದ ಅಕ್ಕಿಪುಡಿಯನ್ನು ಹಾಕಿ ಇನ್ನೊಮ್ಮೆ ಚೆನ್ನಾಗಿ 3ರಿಂದ 4 ನಿಮಿಷಗಳ ಕಾಲ ಚೆನ್ನಾಗಿ ಕಲಸಿ. ನಂತರ ಅದನ್ನು ಒಂದು ಡಬ್ಬಿಗೆ ಹಾಕಿ ತಣ್ಣಗೆ ಆಗಲು ಬಿಡಿ.
ತಣ್ಣಗಾದ ಮೇಲೆ ಒಂದು ಎಣ್ಣೆ ಸವರಿದ ಎಲೆ ಅಥವಾ ಪ್ಲಾಸ್ಟಿಕ್ಗೆ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ತಟ್ಟಿ ಕಾದ ಎಣ್ಣೆಗೆ ಬಿಡಿ. ಎಣ್ಣೆ ಮಧ್ಯಮ ಹುರಿಯಲ್ಲಿ ಇಡಬೇಕು. ಕಂದು ಬಣ್ಣ ಬರುವವರೆಗೆ ಹುರಿದು ಹೊರಗೆ ತೆಗೆಯಬೇಕು. ರುಚಿಕರವಾದ ಕಜ್ಜಾಯ ಅಥವಾ ಅತಿರಸ ಸವಿಯಲು ಸಿದ್ಧ. ಇದನ್ನು ಬಿಸಿ ಬಿಸಿ ಅಥವಾ ತಣ್ಣಗಾದ ಮೇಲೆ ತಿನ್ನಬಹುದು.
-ಸ್ತುತಿ ಕೃಷ್ಣರಾಜ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ