ಅಡುಗೆ-ಆಹಾರ

ಸವಿರುಚಿ: ಒಂದೆಲಗ (ಉರಗೆ) ತಂಬುಳಿ

ಸಂಸ್ಕೃತದಲ್ಲಿ ಬ್ರಾಹ್ಮಿ, ಕನ್ನಡದಲ್ಲಿ ಒಂದೆಲಗ, ತುಳುವಿನಲ್ಲಿ ತಿಮರೆ ಎಂದು ಕರೆಯಲಾಗುವ ಈ ಔಷಧೀಯ ಎಲೆಯಲ್ಲಿ ಸ್ಮರಣ ಶಕ್ತಿ ಹೆಚ್ಚಿಸುವ ಗುಣವಿದೆ. ತಂಪಾದ, ತೇವಭರಿತ ಪ್ರದೇಶಗಳಲ್ಲಿ ಬೆಳೆಯುವ ಈ ಎಲೆಯಲ್ಲಿ ಮಿದುಳಿನ ಶಕ್ತಿ ವರ್ಧಕ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ಇದರಿಂದ ತಯಾರಿಸುವ ತಂಬುಳಿ ಅತ್ಯಂತ ರುಚಿಕರ ಹಾಗೂ ಆರೋಗ್ಯದಾಯಕ.

ಒಂದೆಲಗದ ತಂಬುಳಿ ತಯಾರಿಸುವುದು ಹೇಗೆ ಎಂಬುದನ್ನು ಟ್ರೆಂಡಿ ಏಂಜೆಲ್ಸ್‌ ಕಿಚನ್‌ನ ಸ್ತುತಿ ಭಟ್ ಅವರು ತಿಳಿಸಿಕೊಡುತ್ತಾರೆ.

ಬೇಕಾಗುವ ಸಾಮಾಗ್ರಿ
ಬ್ರಾಹ್ಮಿ – 1 ಕೈಯಷ್ಟು
ಕಾಯಿತುರಿ – ಒಂದೂವರೆ ಕಪ್
ಹಸಿ ಮೆಣಸಿನ ಕಾಯಿ – 1
ಜೀರಿಗೆ – 1 ಚಮಚ
ಮಜ್ಜಿಗೆ / ಮೊಸರು -1
ನೀರು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ ಒಂದೆಲಗ ಕಾಯಿತುರಿ ಹಸಿಮೆಣಸು ಜೀರಿಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
ನಂತರ ಅದನ್ನು ಪಾತ್ರೆಗೆ ಹಾಕಿ ಮಜ್ಜಿಗೆ ಅಥವಾ ಮೊಸರನ್ನು ಸೇರಿಸಿ.
ಮತ್ತೆ ನಿಮಗೆ ಎಷ್ಟು ತೆಳು ಬೇಕೋ ಹಾಗೆ ನೀರು ಸೇರಿಸಿಕೊಳ್ಳಬೇಕು.
ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.

ಒಂದು ಬಾಣಲೆಯಲ್ಲಿ ಎಣ್ಣೆ , ಬೆಳ್ಳುಳ್ಳಿ ಕೆಂಪು ಮೆಣಸು ಹಾಕಿ. ಬೆಳ್ಳುಳ್ಳಿ ಕಂದು ಬಣ್ಣ ಬಂದ ಮೇಲೆ ಸಾಸಿವೆ ಕರಿಬೇವು ಹಾಕಿ ಸಿಡಿಸಿದ ಮೇಲೆ ಒಗ್ಗರಣಿಯನ್ನು ಇದಕ್ಕೆ ಸೇರಿಸಿ.
ರುಚಿಯಾದ ಒಂದೆಲಗ ತಂಬುಳಿ ಸವಿಯಲು ಸಿದ್ದ.
ಇದನ್ನು ಹಾಗೆ ಕುಡಿಯಲೂಬಹುದು, ಅನ್ನದ ಜೊತೆ ಸವಿಯಲೂ ಬಹುದು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಸವಿರುಚಿ: ಹಲಸಿನ ಬೀಜದ ಲಡ್ಡು

Upayuktha

ಸವಿರುಚಿ: ಪಪ್ಪಾಯಿ ಹಲ್ವಾ

Upayuktha

ಸವಿರುಚಿ: ಸಬ್ಬಸಿಗೆ ಸೊಪ್ಪಿನ ರೊಟ್ಟಿ

Upayuktha