ಅಡುಗೆ-ಆಹಾರ

ಸವಿರುಚಿ: ನೆಲಬಸಳೆ ಗ್ರೇವಿ

ಬೇಕಾದ ಸಾಮಗ್ರಿಗಳು

ನೆಲಬಸಳೆ 3 ಕಪ್
ಟೊಮ್ಯಾಟೋ 1
ಈರುಳ್ಳಿ 1
ಎಣ್ಣೆ 2 ಚಮಚ
ಉದ್ದಿನಬೇಳೆ 1 ಚಮಚ
ಸಾಸಿವೆ ಅರ್ಧ ಚಮಚ
ಕರಿಬೇವು 10
ಕಾಯಿತುರಿ 1 ಕಪ್
ಬೆಳ್ಳುಳ್ಳಿ 3 – 4
ಹಸಿಮೆಣಸು 1
ಏಲಕ್ಕಿ 2
ಲವಂಗ 3
ಮೆಣಸಿನ ಹುಡಿ 1 ಚಮಚ
ಅರಿಶಿನ ಹುಡಿ ಅರ್ಧ ಚಮಚ
ಆಮ್ಚೂರ್ ಅರ್ಧ ಚಮಚ
ಕೊತ್ತಂಬರಿ ಹುಡಿ ಅರ್ಧ ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ನೆಲಬಸಳೆ, ಈರುಳ್ಳಿ, ಟೊಮ್ಯಾಟೋ ಎಲ್ಲ ಸಣ್ಣಗೆ ಕಟ್ ಮಾಡಿಕೊಂಡು ಇಡಬೇಕು. ಒಂದು ಜಾರಿಗೆ ತೆಂಗಿನತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಏಲಕ್ಕಿ,ಲವಂಗ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಕರಿಬೇವು ಹಾಕಿ ಸಿಡಿಸಿ. ನಂತರ ಅದಕ್ಕೆ ಈರುಳ್ಳಿ, ಟೊಮ್ಯಾಟೋ, ಬೆಳ್ಳುಳ್ಳಿ ಹಾಕಿ fry ಮಾಡಿಕೊಳ್ಳಿ.

ಮತ್ತೆ ಅದಕ್ಕೆ ನೆಲಬಸಳೆ ಹಾಕಿ ಮೆಣಸಿನ ಹುಡಿ, ಅರಿಶಿನ, ಆಮ್ಚೂರ್, ಕೊತ್ತಂಬರಿ ಪುಡಿ, ಉಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಬೇಯಲು ಇಡಿ. ನಂತರ ಬೆಂದ ಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಕುದಿಸಿ. ಆಗ ನಿಮಗೆ ರುಚಿಯಾದ ನೆಲಬಸಳೆ ಗ್ರೇವಿ ಸಿದ್ಧವಾಗುತ್ತದೆ. ಇದನ್ನು ಚಪಾತಿಯ ಜೊತೆ ತಿನ್ನಬಹುದು.

Summary: Waterleaf Gravy is prepared from water leaf. Other ingredients are added for nice texture for gravy. The water leaf is helps to maintain restore body to its natural form.

– ಸ್ತುತಿ ಕೃಷ್ಣರಾಜ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಚಪಾತಿ ಜತೆ ನೆಂಜಿಕೊಳ್ಳಲು ರುಚಿ ರುಚಿ ಕ್ಯಾಪ್ಸಿಕಂ ಕೂರ್ಮ

Upayuktha

ಸವಿರುಚಿ: ಸಬ್ಬಸಿಗೆ ಸೊಪ್ಪಿನ ರೊಟ್ಟಿ

Upayuktha

ಸವಿರುಚಿ: ಕಲ್ಲಂಗಡಿಯ ತೊಗಟೆಯ ಹಲ್ವ

Upayuktha

Leave a Comment

error: Copying Content is Prohibited !!