ನಗರ ಸ್ಥಳೀಯ

ಮನನೊಂದ ಯುವಕನ ಸಂಬಂಧಿಕರು ಪತ್ತೆ; ಜಾಲತಾಣ ವರದಿ ಫಲಶ್ರುತಿ

ಉಡುಪಿ: ಮಾನಸಿಕ ಖಿನ್ನತೆಗೆ ಒಳಗಾದ ಅಪರಿಚಿತ ಯುವಕನೊಬ್ಬ ಶ್ರೀಕೃಷ್ಣ ಮಠದಲ್ಲಿ ಅಸಹಾಯಕ ಸ್ಥಿತಿಯಲ್ಲಿ ರವಿವಾರ ಕಂಡಬಂದಿದ್ದನು. ಮಠದ ಸಿಬ್ಬಂದಿಗಳು ನೀಡಿರುವ ಮಾಹಿತಿ ಮೆರೆಗೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಯುವಕನನ್ನು ರಕ್ಷಿಸಿ, ಮಣಿಪಾಲ ಹೊಸಬೆಳಕು ಆಶ್ರಮದಲ್ಲಿ ದಾಖಲುಪಡಿಸಿದ್ದರು.

ಆಶ್ರಮ ಸಂಚಾಲಕಿ ತನುಲಾ ತರುಣ್ ಅವರು ಅನುಕಂಪದ ನೆಲೆಯಲ್ಲಿ ಆಶ್ರಯ ಒದಗಿಸಿ ಮಾನವಿಯತೆ ಮೆರೆದಿದ್ದರು. ಯುವಕ ಮನೆ ಬಿಟ್ಟು ಬಂದು, ಕೆಲವು ದಿನಗಳಿಂದ ಉಡುಪಿಯಲ್ಲಿ ದಿನಗಳ ಕಳೆಯುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದರು.

ಯುವಕನು ತನ್ನ ಹೆಸರು ಮಲ್ಲಿಕಾರ್ಜುನ (23ವ) ತಂದೆ ಬಸವರಾಜು ಹಡಪದ, ಗುಲ್ಬರ್ಗ ಜಿಲ್ಲೆಯ ನಿವಾಸಿ ಎಂದು ಹೇಳಿಕೊಂಡಿದ್ದನು. ಯುವಕನು ನೀಡಿದ ಮಾಹಿತಿಯಂತೆ ಸಂಬಂಧಿಕರ ಪತ್ತೆಗೊಳಿಸಲು, ಸಮಿತಿಯ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಪ್ರಕಟಿಸಿದ್ದರು.

ಕಾಣೆಯಾಗಿರುವ ಮಗನ ಹುಡುಕಾಟದಲ್ಲಿದ್ದ ತಂದೆ ಬಸವರಾಜು, ಜಾಲತಾಣದಲ್ಲಿ ಮಗನ ಇರುವಿಕೆಯ ಸುದ್ದಿ ತಿಳಿದು, ಗುಲ್ಬರ್ಗದಿಂದ ಉಡುಪಿಗೆ ಬಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಛೇರಿಯನ್ನು ಸಂಪರ್ಕಿಸಿದ್ದಾರೆ.

ಸಮಿತಿಯ ಕಾರ್ಯಕರ್ತರ ಮುಖೇನ, ಹೊಸಬೆಳಕು ಆಶ್ರಮದಲ್ಲಿ ಆಶ್ರಯದಲ್ಲಿದ್ದ ಮಗನನ್ನು ಸೂಕ್ತ ದಾಖಲೆ ತೋರ್ಪಡಿಸಿ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಶ್ರಮ ಸಂಚಾಲಕಿ ತನುಲಾ ತರುಣ್ ಅವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ಇದೀಗ ಸಿಗ್ನಲ್ Appನಲ್ಲಿ… ಗ್ರೂಪ್‌ಗೆ ಸೇರಲು ಮೊದಲು ಸಿಗ್ನಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಲಿಂಕ್ ಕ್ಲಿಕ್ ಮಾಡಿ.

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದ.ಕ ಜಿಲ್ಲಾ ಗೃಹರಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟ

Upayuktha

ಮೂಡುಬಿದಿರೆ: ‘ಆಳ್ವಾಸ್ ನ್ಯೂಟ್ರಿಷನ್ ಸೆಂಟರ್’ ಉದ್ಘಾಟನೆ

Upayuktha

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ. ವಿಜಯ ಕುಮಾರ್ ಅವರಿಗೆ ಧರ್ಮಸ್ಥಳದಲ್ಲಿ ಅಭಿನಂದನೆ

Upayuktha