ಕೃಷಿ ದೇಶ-ವಿದೇಶ

ಕಿರು ನೀರಾವರಿ ನಿಧಿಯಿಂದ ಬಡ್ಡಿ ರಿಯಾಯತಿ ಸಾಲ ಬಿಡುಗಡೆ

ಹೊಸದಿಲ್ಲಿ: ನಬಾರ್ಡ್ ನಲ್ಲಿ ರೂಪಿಸಲಾದ 5000 ಕೋ.ರೂ.ಗಳ ಮೂಲನಿಧಿಯ ಕಿರು ನೀರಾವರಿ ನಿಧಿ 2019-20 ರಲ್ಲಿ ಕಾರ್ಯಾರಂಭ ಮಾಡಿದೆ. ರಾಜ್ಯಗಳು ಕಿರು ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸಲು ವಿಶೇಷ ಮತ್ತು ನವೀನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಡ್ಡಿ ರಿಯಾಯತಿಯ ಸಾಲವನ್ನು ಒದಗಿಸುವುದು ಈ ನಿಧಿಯ ಉದ್ದೇಶವಾಗಿದೆ. ಜೊತೆಗೆ ಪಿ.ಎಂ.ಕೆ.ಎಸ್.ವೈ.-ಅಡಿಯಲ್ಲಿ ಲಭ್ಯ ಇರುವ ಅವಕಾಶಗಳ ಮಿತಿಯನ್ನು ದಾಟಿ ಹನಿ ನೀರಿಗೆ ಹೆಚ್ಚು ಬೆಳೆ ಬೆಳೆಯುವಂತೆ ರೈತರನ್ನು ಉತ್ತೇಜಿಸುವುದಕ್ಕಾಗಿ ಕಿರು ನೀರಾವರಿ ಯೋಜನೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವುದೂ ಇದರಲ್ಲಿ ಸೇರಿದೆ.

ಎಂ.ಐ.ಎಫ್. ನ ಚಾಲನಾ ಸಮಿತಿಯು 3971.31 ಕೋ.ರೂ.ಗಳ ಸಾಲದ ಯೋಜನೆಗಳಿಗೆ ಅನುಮೋದನೆ ನೀಡಿದೆ.ಇದರಲ್ಲಿ ಗುಜರಾತಿಗೆ 764.13 ಕೋ.ರೂ., ತಮಿಳುನಾಡಿಗೆ 1357.93 ಕೋ.ರೂ., ಆಂಧ್ರ ಪ್ರದೇಶಕ್ಕೆ 616.13 ಕೋ.ರೂ., ಪಶ್ಚಿಮ ಬಂಗಾಳಕ್ಕೆ 276.55 ಕೋ.ರೂ., ಹರಿಯಾಣಕ್ಕೆ 790.94 ಕೋ.ರೂ., ಪಂಜಾಬಿಗೆ 150.00 ಕೋ.ರೂ. ಮತ್ತು ಉತ್ತರಾಖಂಡಕ್ಕೆ 15.63 ಕೋ.ರೂ.ಗಳಿಗೆ ಅನುಮೋದನೆ ನೀಡಲಾಗಿದೆ.

ಹರಿಯಾಣ, ತಮಿಳುನಾಡು, ಮತ್ತು ಗುಜರಾತ್ ಗಳಿಗೆ ನಬಾರ್ಡ್ 659.70 ಕೋ.ರೂ. ಗಳ ಸಾಲವನ್ನು ನಬಾರ್ಡ್ ಬಿಡುಗಡೆ ಮಾಡಿದೆ. ಆ ಮೂಲಕ ಒಟ್ಟು 1754.60 ಕೋ.ರೂ. ಗಳನ್ನು ಇದುವರೆಗೆ ಬಿಡುಗಡೆ ಮಾಡಿದಂತಾಗಿದೆ. ಇದರಲ್ಲಿ ಆಂಧ್ರ ಪ್ರದೇಶಕ್ಕೆ 616.13 ಕೋ.ರೂ, ತಮಿಳುನಾಡಿಗೆ 937.47 ಕೋ.ರೂ., ಹರ್ಯಾಣಾಕ್ಕೆ 21.57 ಕೋ.ರೂ . ಮತ್ತು ಗುಜರಾತಿಗೆ 179.43 ಕೋ.ರೂ ಲಭಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೃಷಿಕರನ್ನು ಬದುಕಲು ಬಿಡಿ, ರಾಜಕೀಯ ಅಸ್ತ್ರವಾಗಿಸಬೇಡಿ

Upayuktha

ಬಾಂಗ್ಲಾದೇಶ ದ ಅಂತರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲ ಗೆ ಕೋವಿಡ್ ಪಾಸಿಟಿವ್

Harshitha Harish

ಜಮ್ಮು-ಕಾಶ್ಮೀರ ಪರಿಸ್ಥಿತಿ ಸುಧಾರಣೆ: 7,000ಕ್ಕೂ ಅಧಿಕ ಅರೆಸೇನಾ ಪಡೆಗಳ ವಾಪಸಿಗೆ ನಿರ್ಧಾರ

Upayuktha

Leave a Comment