ಕುಂಬಳೆ: ಪ್ರಸಿದ್ಧ ಆಯುರ್ವೇದ ಪಂಡಿತ, ಸಂಸ್ಕೃತ ವಿದ್ವಾಂಸ ಕಂಗಿಲ ಕೃಷ್ಣ ಭಟ್ಟರು (96) ಗುರುವಾರ ನಿಧನರಾದರು.
ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಪುತ್ರ ಡಾ. ಜಯದೇವ ಕಂಗಿಲ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ಅವರು ನಿಧನರಾದರು.
ಅವರು ಪೆರ್ಲದ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ ಮನೆತನದ ಬಳುವಳಿಯಾದ ಆಯುರ್ವೇದ ವೈದ್ಯ ಪರಂಪರೆಯನ್ನು ಮುಂದುವರಿಸಿದರು. ಅಧ್ಯಾಪಕ ಹುದ್ದೆಯಿಂದ ನಿವೃತ್ತರಾದ ಬಳಿಕ ವೈದ್ಯಕೀಯ ವೃತ್ತಿಯಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದರು.
ಕಂಗಿಲ ಕೃಷ್ಣ ಭಟ್ಟರ ಪತ್ನಿ ಪರಮೇಶ್ವರಿ ಅಮ್ಮ ಈ ಹಿಂದೆ ನಿಧನರಾಗಿದ್ದರು. ಅವರಿಗೆ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ.
ಕಂಗಿಲ ಕೃಷ್ಣ ಭಟ್ಟರ ನಿಧನಕ್ಕೆ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಹಾಗೂ ಕಾರ್ಯದರ್ಶಿ ವಿ.ಬಿ ಕುಳಮರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.
ನುಡಿ ನಮನ: ಡಾ. ಕಂಗಿಲರ ಬದುಕಿನತ್ತ ಒಂದು ಪಕ್ಷಿ ನೋಟ