ನಿಧನ ಸುದ್ದಿ

ಖ್ಯಾತ ಶಿಲ್ಪಿ, ಚಿತ್ರ ಕಲಾವಿದ ಎಂಜಿಕೆ ಆಚಾರ್ಯ ನಿಧನ

ಕುಂಬಳೆ: ಖ್ಯಾತ ಶಿಲ್ಪಿ,ಚಿತ್ರ ಕಲಾವಿದ ಎಂ.ಜಿ.ಕೆ. ಆಚಾರ್ಯ ಕುಂಬಳೆ (ಮೂಡಬಿದ್ರೆ ಗೋಪಾಲಕೃಷ್ಣ ಆಚಾರ್ಯ ಕುಂಬಳೆ) ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನರಾದರು.

ಕೇರಳ ಕರ್ನಾಟಕದ ಕ್ಷೇತ್ರದ ಚಿತ್ರಕಲೆಯಲ್ಲಿ ಹಾಗೂ ಶಿಲ್ಪ ರಚನೆಯಲ್ಲಿ ಪ್ರಸಿದ್ಧಿಯನ್ನು ಗಳಿಸಿಕೊಂಡ ಇವರು ತನ್ನ ಜೀವಮಾನ ಸಾಧನೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆರೆಯಿಸಿದ ಕಲಾವಿದರಾಗಿದ್ದಾರೆ‌. ಹಲವಾರು ದೈವ ದೇವಸ್ಥಾನಗಳಲ್ಲಿ ಇವರು ರಚಿಸಿ ಚಿತ್ರ ಕಂಡು ಬರುತ್ತಿದೆ.

ಹಲವಾರು ಶಿಷ್ಯರನ್ನು ಹೊಂದಿದ್ದ ಇವರು ಹಲವಾರು ರಾಜ್ಯಗಳಲ್ಲಿ ಚಿತ್ರಕಲಾ ಕಾರ್ಯಾಗಾರವನ್ನು ನಡೆಸಿದ್ದರು. ತನ್ನ ಮಕ್ಕಳಿಗೂ ಈ ಕಲಾ ಚಾತುರ್ಯವನ್ನು ಧಾರೆ ಎರೆದ ಇವರು ಆದರ್ಶ ಕಲಾವಿದರಾಗಿ ವಿಶ್ವಕರ್ಮ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ. ಈ ಮಹಾನ್ ಕಲಾವಿದನ ಗಣನೀಯ ಸಾಧನೆಯನ್ನು ಗುರುತಿಸಿ ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗವು 2019ರ ವಿಶ್ವದರ್ಶನ ಸಾಧಕ ಪುರಸ್ಕಾರ ನೀಡಿ ಗೌರವಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬಾಷ್ಪಾಂಜಲಿ: ಸೀತಾಲಕ್ಷ್ಮಿ- ಇಲ್ಲಿ ಬೆಳಗಬೇಕಾದವಳು ‘ತಾರೆ’ಯಾಗಿ ಅಲ್ಲಿ ಬೆಳಗಿದಳು

Upayuktha

ಹಿರಿಯ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ. ಕಾನತ್ತಿಲ ಮಹಾಲಿಂಗ ಭಟ್ ನಿಧನ

Upayuktha

ಕತೆಗಾರ ಎನ್ ಪ್ರಕಾಶ್ ಹೃದಯಾಘಾತದಿಂದ ನಿಧನ

Harshitha Harish