ನಿಧನ ಸುದ್ದಿ

ನಿವೃತ್ತ ಶಿಕ್ಷಕ ಸುಮ್ಮಗುತ್ತು ನೇಮಿರಾಜ ಕಟ್ಟಡ ನಿಧನ

ಮಂಗಳೂರು: ಕಾರ್ಕಳ ಹಾಗೂ ಬಂಟ್ವಾಳ ತಾಲೂಕುಗಳ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಮ್ಮಗುತ್ತು ನೇಮಿರಾಜ ಕಟ್ಟಡ (88) ಅನಾರೋಗ್ಯದಿಂದ ಕಾರ್ಕಳ ತಾಲೂಕು ಇರ್ವತ್ತೂರಿನ ಸ್ವಗೃಹದಲ್ಲಿ ಸೆ.19ರಂದು ಶನಿವಾರ ಮುಂಜಾನೆ ನಿಧನರಾದರು.

ಕಾರ್ಕಳ ಸಾಣೂರು ಪರಿಸರದಲ್ಲಿ ನೇಮ್ರಾಜ ಮಾಷ್ಟ್ರು ಎಂದೇ ಪ್ರಸಿದ್ಧರಾಗಿದ್ದ ಕಟ್ಟಡ ಅವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ಮಂಜಯ್ಯ ಹೆಗ್ಗಡೆ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಂತೆ ಶಿಕ್ಷಕ ವೃತ್ತಿ ಆಯ್ಕೆ ಮಾಡಿ, ಕಾರ್ಕಳ ತಾಲೂಕು ಮಾಳ ಚೌಕಿ ಶಾಲೆಯಲ್ಲಿ ವೃತ್ತ ಜೀವನ ಆರಂಭಿಸಿದರು. ನಂತರ ಸೇವೆಯಲ್ಲಿದ್ದುಕೊಂಡೇ ಬಿ.ಎ. ಹಾಗೂ ಬಿಎಡ್ ಪದವಿ ಪಡೆದು ಹೈಸ್ಕೂಲಿಗೆ ಪದವಿಧರ ಸಹಾಯಕರಾಗಿ ಭಡ್ತಿ ಹೊಂದಿದರು.

ಬಜಗೋಳಿ, ರೆಂಜಾಳ, ಇರ್ವತ್ತೂರು ಹಾಗೂ ಸಾಣೂರು ಇಲ್ಲಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾಗಿಯೂ, ಬಂಟ್ವಾಳ ತಾಲೂಕಿನ ಬೆಂಜನಪದವು ಹಾಗೂ ಕಾರ್ಕಳ ತಾಲೂಕಿನ ಸಾಣೂರು ಪ್ರೌಢಶಾಲೆಯಲ್ಲಿ ಪದವಿಧರ ಸಹಾಯಕರಾಗಿದ್ದು, ಸೇವೆ ಸಲ್ಲಿಸಿ 1990ರಲ್ಲಿ ನಿವೃತ್ತರಾದರು.

ಅವರು ಪತ್ನಿ ಮಾಲತಿ, ವಿ.ವಿ.ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು ಸೇರಿದಂತೆ ಮೂವರು ಗಂಡು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕೊಡವ ಕುಟುಂಬಗಳ ಹಾಕಿ ಪಂದ್ಯಾಟದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪ ನಿಧನ

Upayuktha

ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿ ದೇಲಂಪಾಡಿ ವಿಧಿವಶ

Upayuktha

ಮಧೂರು ಕ್ಷೇತ್ರದ ಅನುವಂಶಿಕ ಅರ್ಚಕ ವೆಂಕಟಕೃಷ್ಣ ಕಲ್ಲೂರಾಯ ನಿಧನ

Upayuktha

Leave a Comment