ಚಂದನವನ- ಸ್ಯಾಂಡಲ್‌ವುಡ್

ರಾಕಿಂಗ್ ಸ್ಟಾರ್ ಯಶ್- ರಾಧಿಕ ಅವರ ಮಗ ಯಥರ್ವ್ ಪ್ರಥಮ ವರ್ಷದ ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು : ಸ್ಯಾಂಡಲ್ ವುಡ್ ನ ಜನಪ್ರಿಯ ದಂಪತಿಗಳಾದ  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎರಡನೇ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2016, ಡಿಸೆಂಬರ್ 9ರಂದು ವಿವಾಹ ಬಂಧನಕ್ಕೆ ಒಳಗಾದ ಈ ಜೋಡಿ ಈಗ ಇಬ್ಬರು ಮಕ್ಕಳ ತಂದೆ-ತಾಯಿ.

ಕಳೆದ ವರ್ಷ ಅಕ್ಟೋಬರ್ 30ಕ್ಕೆ ಜೂನಿಯರ್ ಯಶ್ ಗೆ ಜನ್ಮ ನೀಡಿದ್ದರು ರಾಧಿಕಾ ಪಂಡಿತ್. ಇದೀಗ ತಮ್ಮ ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಒಂದು ವರ್ಷದವರೆಗಿನ ಫೋಟೋವನ್ನು ಹಂಚಿ ಸಂಭ್ರಮಿಸಿದ್ದಾರೆ.

ಯಶ್ ಎರಡನೇ ಮಗು ಯಥರ್ವ್ ಹುಟ್ಟಿ ಇಂದಿಗೆ ಒಂದು ವರ್ಷದ ಸಂಭ್ರಮ. ಕಳೆದ ವರ್ಷ 2019 ಅಕ್ಟೋಬರ್ 30ರಂದು ರಾಧಿಕಾ ಪಂಡಿತ್ ರವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು.

ಇಂದು ರಾಧಿಕಾ ದಂಪತಿ ಮಗನ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಆದರೆ ಅದ್ದೂರಿ ಹುಟ್ಟುಹಬ್ಬಕ್ಕೆ ಕೊರೊನಾದಿಂದಾಗಿ ಸರಳವಾಗಿ ಮನೆಯಲ್ಲಿ ಆಚರಿಸಿದ್ದಾರೆ.

ಮುದ್ದು ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಪ್ಲಾನ್ ಮಾಡಿದ್ದರು, ಆದರೆ ಸರಳವಾಗಿ ತೀರಾ ಆಪ್ತರ ಜೊತೆ ಮಾತ್ರ ಸೆಲೆಬ್ರೇಟ್ ಮಾಡಲಾಗುತ್ತೆ ಎಂದು  ಹೇಳಲಾಗುತ್ತಿದೆ.

ಮಗನ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಮಗನ ಅಪರೂಪದ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಗರ್ಭಿಣಿ ಆಗಿದ್ದ ಫೋಟೋದಿಂದ ಯಥರ್ವ್ ನಿಗೆ ಒಂದು ವರ್ಷ ತುಂಬುವವರೆಗಿನ ಎಲ್ಲಾ ಫೋಟೋವನ್ನು ಶೇರ್ ಮಾಡಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಚಂದನವನದ ಚೆಂದದ ಗಾನ ‘ಉತ್ತರೆ ಉತ್ತರೆ…’: ಮಾಧುರ್ಯದ ಜತೆಗೆ ಭಾವನೆಗಳ ಮೆರವಣಿಗೆ

Upayuktha

ನಟಿ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಕಾರು ಅಪಘಾತ; ಇಬ್ಬರು ಸಾವು

Harshitha Harish

ಇಂದಿನ ಐಕಾನ್- ಕನ್ನಡದ ಚಾರಿತ್ರಿಕ ನಟ ದತ್ತಣ್ಣ (H.G. ದತ್ತಾತ್ರೇಯ)

Upayuktha

Leave a Comment