ನಗರ ಸ್ಥಳೀಯ

ಗೃಹರಕ್ಷಕರಿಗೆ ರೋಟರಿ ಕ್ಲಬ್‌ನಿಂದ ಫೇಸ್ ಶೀಲ್ಡ್ ಕೊಡುಗೆ

ಮಂಗಳೂರು: ಕೋವಿಡ್ ಮಾರ್ಷಲ್ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಕೋವಿಡ್ ವೈರಾಣುವಿನಿಂದ ರಕ್ಷಿಸುವ ಸಲುವಾಗಿ ರೋಟರಿ ಕ್ಲಬ್ ಹಿಲ್‍ಸೈಡ್ ಮಂಗಳೂರು ಇದರ ವತಿಯಿಂದ ಇಪ್ಪತ್ತು ಸಾವಿರ ಮೌಲ್ಯದ 200 ಫೇಸ್ ಶೀಲ್ಡ್‍ಗಳನ್ನು ಸೋಮವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ರವರು ಮಾತನಾಡಿ, ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಕೋವಿಡ್ ಕರ್ತವ್ಯ ಮಾಡುವ ಗೃಹರಕ್ಷಕ ಬಗ್ಗೆ ಕಾಳಜಿಯಿಂದ ಫೇಸ್ ಶೀಲ್ಡ್ ವಿತರಿಸಿದ ರೋಟರಿ ಕ್ಲಬ್ ಸದಸ್ಯರುಗಳಿಗೆ ಧನ್ಯವಾದ ಸಲ್ಲಿಸಿದರು.

ಸಾಮಾಜಿಕ ಅಂತರ, ಮುಖ ಕವಚ ಧರಿಸುವಿಕೆ, ಸ್ಯಾನಿಟೈಸರ್ ಮತ್ತು ಸಾಬೂನು ಬಳಸುವುದು ಸೂಕ್ತ. ಇದರ ಮುಖಾಂತರವೇ ರೋಗವನ್ನು ನಿಯಂತ್ರಿಸಲು ಸಾಧ್ಯ ಈ ನಿಟ್ಟಿನಲ್ಲಿ ನಾವೆಲ್ಲರೂ ಇನ್ನಷ್ಟು ಜಾಗೃತರಾಗಿ ವ್ಯವಹರಿಸಬೇಕಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಹಿಲ್‍ಸೈಡ್ ಇದರ ಅಧ್ಯಕ್ಷರಾದ ಸುರೇಶ್ ಕಿಣಿ ಹಾಗೂ ಸದಸ್ಯರುಗಳಾದ ಸತೀಶ್ ಬಿ.ಕೆ., ದಿನೇಶ್ ಮಲ್ಯ, ಅಶೋಕ್ ರಾವ್, ಪ್ರವೀಣ್ ಉಡುಪ ಹಾಗೂ ಗೃಹರಕ್ಷಕರುಗಳಾದ ರಮೇಶ್ ಭಂಡಾರಿ, ಸುನಿಲ್, ಸಂತೋಷ್ ಸಲ್ದಾನ, ಭವಾನಿ, ಮಂಜುಳಾ, ಸುಕನ್ಯಾ, ದಿವಾಕರ್, ದುಷ್ಯಂತ್ ರೈ ಇವರುಗಳು ಉಪಸ್ಥಿತರಿದ್ದರು.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇಲ್ಲ; ರಾಜ್ಯದಲ್ಲಿ 12 ಕೇಸ್ ಪತ್ತೆ

Upayuktha

ಸವಿತಾಗೆ ಡಾಕ್ಟರೇಟ್ ಪದವಿ

Upayuktha

ಕಲ್ಲೇರಿ ಜನತೆಯ ನೀರಿನ ಬವಣೆ ನೀಗಿಸಿ ನುಡಿದಂತೆ ನಡೆದ ಶಾಸಕ ಹರೀಶ್ ಪೂಂಜ

Upayuktha