ರಾಜ್ಯ

ಸುಧಾ ಮೂರ್ತಿ ಅವರಿಂದ ಮೈಸೂರು ಮೃಗಾಲಯಕ್ಕೆ 20 ಲಕ್ಷ ರೂ. ದೇಣಿಗೆ

ಮೈಸೂರು: ಇದೀಗ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ಪಾಲನೆಗಾಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಗುರುವಾರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರಣಿ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದು, ಸುಧಾ ಮೂರ್ತಿ ಅವರು ಕಳೆದ ಮೇ ತಿಂಗಳಲ್ಲಿ 20 ಲಕ್ಷ ರೂ. ನೀಡಿರುವುದಾಗಿ ಹೇಳಿದ್ದಾರೆ.

ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಯ ಮುಖ್ಯ ವೆಚ್ಚವೂ ಪ್ರವಾಸಿಗರ ಪ್ರವೇಶ ಶುಲ್ಕದಿಂದ ಬರುತ್ತಿತ್ತು.

ಆದರೆ ಇದೀಗ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ಭಯ ಭೀತಿಗೆ ಒಳಗಾಗಿ ಯಾರು ಪ್ರವಾಸಿಗರಿಲ್ಲದೆ ಮೃಗಾಲಯದ ನಿರ್ವಹಣೆ ಮುಂದೆ ಭವಿಷ್ಯದಲ್ಲಿ ಕಷ್ಟ.

ಈ ಬಗ್ಗೆ ನೆರವಿನ ಹಸ್ತ ನೀಡುವಂತೆ ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಪತ್ರ ಬರೆದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸುಧಾ ಮೂರ್ತಿ ಅವರು ಒಳ್ಳೆಯ ಮನಸ್ಸು ಮಾಡಿ ಮೃಗಾಲಯಕ್ಕೆ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

Related posts

ಇಂದು ಸಿಎಂ ದ.ಕ. ಪ್ರವಾಸ, ಮಳೆ ಹಾನಿ ಸಮೀಕ್ಷೆ

Upayuktha

ಮೊದಲ ಮಗುವಿನ ನಿರೀಕ್ಷೆ ಯಲ್ಲಿ ‘ಬಿಗ್ ಬಾಸ್’ ನಯನ ಪುಟ್ಟಸ್ವಾಮಿ

Harshitha Harish

ಖಾಸಗಿ ಉಪನ್ಯಾಸಕರ ಪಿಂಚಣಿ ಸಮಸ್ಯೆ ಬಗೆಹರಿಸಲು ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯ

Upayuktha