ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

ಆರ್ ಎಸ್ ಎಸ್ ಮುಖಂಡ ಮಂಜೇಶ್ವರ ಪದ್ಮನಾಭ ಕಾಮತ್ ನಿಧನ

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್.ಎಸ್.ಎಸ್.) ಮುಖಂಡರಾದ ಹಾಗೂ  ಉದ್ಯಮಿ, ಮಂಜೇಶ್ವರ ಪದ್ಮನಾಭ ಕಾಮತ್ (94) ವಯಸ್ಸಿನವರಾದ ನಿಧನ ಹೊಂದಿದರು..

ಮದನಂತೇಶ್ವರ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿದ್ದ ಪದ್ಮನಾಭ ಕಾಮತ್ ರವರು ಭಾನುವಾರ ಬೆಳಿಗ್ಗಿನ ವೇಳೆಯಲ್ಲಿ ನಗರದಲ್ಲಿರುವ ಸ್ವಗೃಹದಲ್ಲಿ ಮೃತಪಟ್ಟರು.

ಮೃತ ಕಾಮತ್ ತುರ್ತು ಪರಿಸ್ಥಿತಿಯ ವೇಳೆ ಒಂದೂವರೆ ವರ್ಷದ ಕಾಲ ಕೇರಳ ಕಣ್ಣೂರು ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು.

ಮಂಜೇಶ್ವರ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಕಾಮತ್ ಟ್ರಾನ್ಸ್‌ಪೋರ್ಟ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಮೃತರ ಪುತ್ರ ನಾದ ಮೋಹನ್‌ದಾಸ್ ಕಾಮತ್ ಕುವೈಟ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 

Related posts

ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ: ದ.ಕ, ಉಡುಪಿ ಜಿಲ್ಲೆಗಳ ಹಲವು ಕಡೆ ಸ್ವಯಂ ಲಾಕ್‌ಡೌನ್‌-ನಿರ್ಬಂಧಗಳು ಜಾರಿ

Upayuktha

ಹಿರಿಯ ಪತ್ರಕರ್ತ ವೈ ರವಿ ನಿಧನ

Harshitha Harish

ಕನ್ನಡ ಸೇವಾರತ್ನ ಪ್ರಶಸ್ತಿಗೆ ಪ್ರಮೋದ್ ಸಪ್ರೆ ಆಯ್ಕೆ

Upayuktha