ಪ್ರಮುಖ ರಾಜ್ಯ

ಆಂಧ್ರದ ಬೆಳವಣಿಗೆಗಳ ಮೇಲೆ ತೀವ್ರ ನಿಗಾ: ಆರೆಸ್ಸೆಸ್‌

ಶ್ರೀ ವಿಶ್ವೇಶತೀರ್ಥರ ವೃಂದಾವನದ ದರ್ಶನ ಪಡೆದ ಆರೆಸ್ಸೆಸ್ ಸರಸಂಘಚಾಲಕ ಭಾಗವತ್

 

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಜೀ ಭಾಗವತ್ ಇಂದು ಸೋಮವಾರ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿರುವ ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ದರ್ಶನ ಪಡೆದರು.

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವತ್ ರನ್ನು ಶಾಲು ಸ್ಮರಣಿಕೆ ಸಹಿತ ಅಭಿನಂದಿಸಿದರು. ‌ಅಯೋಧ್ಯೆ ರಾಮ ಮಂದಿರ ಮತ್ತು ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯಗಳ ವಿಚಾರವಾಗಿ ಇಬ್ಬರೂ ಗಂಭೀರ ಸಮಾಲೋಚನೆ ನಡೆಸಿದರು. ಆಂಧ್ರದಲ್ಲಿನ ಬೆಳವಣಿಗೆಗೆಳ ಬಗ್ಗೆ ಸಂಘ ತನ್ನ ಕೆಲಸವನ್ನು‌ ನಿರ್ವಹಿಸಲಿದೆ ಎಂದು ತೀಕ್ಷ್ಣವಾಗಿ ತಿಳಿಸಿದರು.

ಶ್ರೀ ವಿಶ್ವೇಶತೀರ್ಥರು ಸಂಘ ಕಾರ್ಯಗಳು, ಮತ್ತು ಹಿಂದೂ ಜಾಗೃತಿ ಆಂದೋಲನಗಳಿಗೆ ನೀಡಿದ ನೇತೃತ್ವ ಮತ್ತು ಮಾರ್ಗದರ್ಶನ ಅವಿಸ್ಮರಣೀಯ ಮತ್ತು ಅತ್ಯಮೂಲ್ಯವಾದುದು ಅವರೊಬ್ಬ ಮಹಾನ್ ತಪಸ್ಬಿ ಎಂದು ಬಣ್ಣಿಸಿದ ಭಾಗವತ್ ಅವರ ವೃಂದಾವನ ದರ್ಶನದಿಂದ ಮನಸ್ಸಿಗೆ ಆನಂದವಾಗಿದೆ ಎಂದ ಭಾಗವತ್ ಅವರ ಸ್ಮರಣೆ ನಮಗೆಲ್ಲ ವಿಶೇಷ ಪ್ರೇರಣಾದಾಯಿಯಾಗಿದೆ ಎಂದರು.

ವಿದ್ಯಾಪೀಠದ ವಿದ್ಯಾರ್ಥಿಗಳು ವೇದಘೋಷದೊಂದಿಗೆ ಸರಸಂಘಚಾಲಕರನ್ನು ಗೌರವದಿಂದ ಬರಮಾಡಿಕೊಂಡರು. ವಿಶ್ವಪ್ರಸನ್ನತೀರ್ಥರು ಭಾಗವತ್ ಅವರ ರಾಷ್ಟ್ರ ಕಾರ್ಯ ಮತ್ತು ಸಂಘದ ವರಿಷ್ಠರಾಗಿ ಅವರು ನಿರ್ವಹಿಸುತ್ತಿರುವ ಧರ್ಮಕಾರ್ಯವನ್ನು ವಿಶೇಷವಾಗಿ ಉಲ್ಲೇಖಿಸಿ ಅಭಿನಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಾಜ್ಯ ರಾಜಧಾನಿಯಲ್ಲಿ ಹೆಚ್ಚಿದ ಕೋವಿಡ್ ಆತಂಕ: 1,195 ಮಂದಿಯಲ್ಲಿ ಸೋಂಕು ದೃಢ

Sushmitha Jain

ರಾಮನಗರ: ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ದಲ್ಲಿ ವೇದಿಕೆ ಮೇಲೆ ಕುಸಿದು ಬಿದ್ದು ಬಿಜೆಪಿ ಕಾರ್ಯಕರ್ತ ಸಾವು

Harshitha Harish

ಇನ್ನೋವೇಶನ್ ಕಾನ್‌ಕ್ಲೇವ್ ಉದ್ಘಾಟಿಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ್

Upayuktha