ದೇಶ-ವಿದೇಶ

ಭೇದ-ಭಾವವಿಲ್ಲದ ಸಮಾಜ ಕಟ್ಟೋಣ, ನಿರಂತರ ಸೇವೆ ಮಾಡೋಣ: ಮೋಹನ್ ಭಾಗವತ್‌

ನಾಗಪುರ: ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಇಂದು ರಾಷ್ಟ್ರವನ್ನುದ್ದೇಶಿಸಿ ಆನ್ಲೈನ್ ಮೂಲಕ ಭಾಷಣ ಮಾಡಿದರು. ಮಹಾರಾಷ್ಟ್ರದ ನಾಗಪುರದಿಂದ ಮಾತನಾಡಿದ ಅವರು, ಕೊರೋನಾದಿಂದಾಗಿ ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ಸೇವಾ ಕಾರ್ಯದ ಬಗ್ಗೆ ಮಾತನಾಡಿದರು.

ಯೂಟ್ಯೂಬ್, ಫೇಸ್ಬುಕ್ ಮತ್ತು ಟ್ವಿಟರ್ ಮಾಧ್ಯಮಗಳಲ್ಲಿ ನೇರಪ್ರಸಾರ ಆದ ಅವರ ಭಾಷಣದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಸಂಘ ಮಾಡುತ್ತಿರುವ ಸೇವೆ ಪ್ರಚಾರಕ್ಕೋಸ್ಕರ ಅಲ್ಲ. ನಮ್ಮ ಸಮಾಜ, ನಮ್ಮ ದೇಶಗಳ ಬಗ್ಗೆ ಸಂಘದ ಸ್ವಯಂಸೇವಕರಿಗೆ ಇರುವ ಪ್ರೇಮದಿಂದ ಈ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ.
ಜೂನ್ ವರೆಗಿನ ತನ್ನ ಎಲ್ಲ ಕಾರ್ಯಕ್ರಮಗಳನ್ನು ಆರೆಸ್ಸೆಸ್ ನಿಲ್ಲಿಸಿದೆ, ರದ್ದುಗೊಳಿಸಿದೆ.

ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ನಾಗರಿಕರಾದ ನಾವೆಲ್ಲರೂ ಪಾಲಿಸಲೇಬೇಕು. ಹಾಗೆಯೇ, ಇದು ನಮ್ಮದೇ ಸಮಾಜ. ಸಂಕಷ್ಟದ ಸಂದರ್ಭದಲ್ಲಿ ನಾವು ಸಮಾಜದ ಜೊತೆ ನಿಲ್ಲಬೇಕು.
ನಿಜವಾದ ದೇಶಭಕ್ತಿ ಎಂದರೆ ಕಾನೂನನ್ನು ಪಾಲಿಸುವುದು ಎಂಬ ಭಗಿನಿ ನಿವೇದಿತಾರ ಮಾತನ್ನು ನಾವು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಭವಿಷ್ಯದ ಭಾರತವನ್ನು ಕಟ್ಟಬೇಕಾದರೆ, ಶಿಸ್ತುಬದ್ಧವಾದ ಸಮಾಜ ಬಹಳ ಮುಖ್ಯ
ಕರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಯಾರಿಗೆ ಆದರೂ ಸೇವೆ ಮಾಡುವುದು ನಮ್ಮ ಧರ್ಮ. ಸೇವೆ ಮಾಡುವಾಗ ನಾವು ವ್ಯಕ್ತಿಗಳ ನಡುವೆ ಭೇದವನ್ನು ಎಣಿಸುವವರಲ್ಲ.
ಸೇವಾಕಾರ್ಯದಲ್ಲಿ ನಾವು ಯಾರೊಂದಿಗೂ ಸ್ಪರ್ಧಿಸಬೇಕಾದರೆ ಅರ್ಥವಿಲ್ಲ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಕೋರೋನಾವನ್ನು ತೊಲಗಿಸುವುದೊಂದೇ ನಮ್ಮ ಗುರಿ.
ಭಯ, ಕೋಪ, ಆಲಸ್ಯ ಹಾಗೂ ಅನಗತ್ಯವಾದ ವಿಳಂಬ ಇವುಗಳನ್ನು ತೊರೆದರೆ ಮಾತ್ರ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯ. ಇದು ನಮ್ಮ ಸಮಾಜಕ್ಕೂ ಅನ್ವಯವಾಗುತ್ತದೆ. ಜವಾಬ್ದಾರಿಯುತ ನಾಗರಿಕರೆಲ್ಲ ಈ ಸಂದರ್ಭದಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡಬೇಕಾದ್ದು ಅತ್ಯಂತ ಅಗತ್ಯ.

ಭಾಷಣವನ್ನು ಪೂರ್ಣ ಕೇಳಲು ಯೂಟ್ಯೂಬ್ ಲಿಂಕ್ ನೋಡಿರಿ.

ಇಂತಹ ಸಂದರ್ಭವನ್ನು ರಾಜಕೀಯಕ್ಕೋಸ್ಕರ ಬಳಸುವುದು ಖಂಡಿತ ಸಲ್ಲ.
ಕರೋನಾದಿಂದಾಗಿ ಇಂದು ನಾವು ಸ್ವಾವಲಂಬಿಗಳಾಬೇಕಾದ ಅಗತ್ಯದ ಅರಿವು ನಮಗಾಗುತ್ತಿದೆ. ಸ್ವದೇಶಿ ವಸ್ತುಗಳ ಬಳಕೆ ನಮ್ಮೆಲ್ಲರ ಜೀವನಶೈಲಿ ಆಗಬೇಕಾಗಿದೆ. ನಮ್ಮ ದೇಶದ ವಸ್ತುಗಳನ್ನು ನಾವು ಖರೀದಿಸೋಣ. ನಮ್ಮ ದೇಶದ ಉತ್ಪಾದಕ ಕಂಪನಿ ಗಳನ್ನು ನಾವು ಪ್ರೋತ್ಸಾಹಿಸೋಣ.

ನಮ್ಮ ಆರ್ಥಿಕತೆಯನ್ನು ಸ್ವಾವಲಂಬಿಯಾಗಿ ಮಾಡುವುದು ಕೇವಲ ಸರ್ಕಾರದ ಕೆಲಸ ಅಲ್ಲ. ಒಂದು ಸಮಾಜವಾಗಿ ಇದನ್ನು ಸಾಧ್ಯವಾಗಿಸುವ ಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಲ್ಲಿ ಕಂಪೆನಿಗಳು ಹಾಗೂ ಅಲ್ಲಿನ ಉದ್ಯೋಗಿಗಳ ಪಾತ್ರ ಪ್ರಮುಖವಾದದ್ದು.

ಮುಂದಿನ ದಿನಗಳಲ್ಲಿ ಸ್ವದೇಶಿ ಮಾತ್ರ ನಮ್ಮನ್ನು ಯಶಸ್ವಿಗೊಳಿಸಬಲ್ಲದು. ಇದರ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ.

ಇಂದು ನಮಗೊದಗಿರುವ ಸಂಕಷ್ಟವನ್ನು ನಾವು ಒಂದು ಅವಕಾಶ ಎಂಬಂತೆ ನೋಡಬೇಕಾಗಿದೆ. ಪ್ರಪಂಚವನ್ನು ಈ ಸಂಕಷ್ಟದಿಂದ ಪಾರು ಮಾಡುವ ಕೆಲಸದಲ್ಲಿ ನಾವು ಮುಂಚೂಣಿಯಲ್ಲಿ ನಿಲ್ಲಬೇಕಾಗಿದೆ. ಸ್ವದೇಶಿ, ಶುದ್ಧ ಪರಿಸರ ಮತ್ತು ಸಾವಯವ ಕೃಷಿ ಇವುಗಳನ್ನು ಜಾರಿಗೆ ತರುವಲ್ಲಿ ಕೇವಲ ಸರ್ಕಾರ ಮಾತ್ರವಲ್ಲ, ಸಮಾಜ ಕೂಡ ಹೆಚ್ಚಿನ ಶ್ರಮವನ್ನು ಹಾಕಬೇಕಾಗಿದೆ.

ಲಾಕ್ಡೌನ್ ನಿಂದಾಗಿ ಕುಟುಂಬದ ನಡುವೆ ಒಳ್ಳೆಯ ಸಂವಾದ, ಬಾಂಧವ್ಯ ಬೆಳೆಯುತ್ತಿದೆ. ಸಂಬಂಧಗಳು ಗಟ್ಟಿಯಾಗುತ್ತಿವೆ. ಒಂದು ಕುಟುಂಬಕ್ಕೆ ಇದು ಒಂದು ಬಹಳ ಒಳ್ಳೆಯ ವಿಷಯ.

ಹಾಗೆಯೇ ಪರಿಸರ ಮಾಲಿನ್ಯ ಕೂಡ ಬಹಳ ಕಡಿಮೆಯಾಗಿದೆ. ಮುಂದೆಯೂ ಕೂಡ ಪರಿಸರದ ಬಗ್ಗೆ ನಾವು ಯಾವಾಗಲೂ ಯೋಚಿಸಬೇಕಾದ ಅಗತ್ಯವಿದೆ. ನಮ್ಮ ಅಗತ್ಯಗಳು ಕಟಿಮೆಯಾದಾಗ ಪರಿಸರದ ಮಾಲಿನ್ಯ ಕಡಿಮೆಯಾಗುತ್ತದೆ. ಮಾಲಿನ್ಯವನ್ನು ಕಡಿಮೆಗೊಳಿಸುವ ಬಗ್ಗೆಯೂ ಸಂಶೋಧನೆಗಳು ನಡೆಯಬೇಕಾದ್ದು ಅತ್ಯಂತ ಅಗತ್ಯ,

ನಮ್ಮ ಜೀವನ ಮೌಲ್ಯಗಳ ಆಧಾರದ ಮೇಲೆ, ರಾಷ್ಟ್ರದ ಪುನರ್ ನಿರ್ಮಾಣ ಆಗಬೇಕಾದ್ದು ಇಂದಿನ ಅಗತ್ಯ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆಗಳನ್ನು ತರುವ ಜವಾಬ್ದಾರಿಯೂ ಕೂಡ ನಮ್ಮ ಮೇಲಿದೆ.

(ಕೃಪೆ: ಸಂವಾದ.ಓಆರ್‌ಜಿ)

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಗಣನೀಯ ಇಳಿಕೆ; ಈ ವರೆಗೆ 765 ಬಂಧನ

Upayuktha

ದೇಶದ ಮೊದಲ ಸಿಡಿಎಸ್ ಆಗಿ ಜ. ಬಿಪಿನ್ ರಾವತ್ ಅಧಿಕಾರ ಸ್ವೀಕಾರ, ಪ್ರಧಾನಿ ಮೋದಿ ಅಭಿನಂದನೆ

Upayuktha

ದಿಲ್ಲಿಯಲ್ಲಿ ಪಿಝಾ ಡೆಲಿವರಿ ಬಾಯ್‌ಗೆ ಕೊರೊನಾ ಸೋಂಕು: 72 ಕುಟುಂಬಗಳಿಗೆ ಸ್ವಯಂ ಕ್ವಾರಂಟೈನ್‌ಗೆ ಸೂಚನೆ

Upayuktha