ಪ್ರತಿಭೆ-ಪರಿಚಯ

ಉಡ್ಡಂಗಳದ ಗ್ರಾಮೀಣ ಪ್ರತಿಭೆ ಹರ್ಷಿಣಿ

ಯಕ್ಷಗಾನದಲ್ಲಿ ಸಾಧನೆ,ನಾಟಕ ಪ್ರವೀಣೆ, ಕರಾಟೆಗೂ ಸೈ, ಕ್ರೀಡೆಯಲ್ಲೂ ನಿಸ್ಸೀಮ, ಇಂಗ್ಲಿಷ್ ರೋಲ್ ಪ್ಲೇಯಲ್ಲಿ ಚಾಲಾಕಿ, ಇಂತಹ ಕ್ಷೇತ್ರಗಳಲ್ಲಿ ಹೆಜ್ಜೆ ಇಡುತ್ತಿರುವ ಗ್ರಾಮೀಣ ಪ್ರತಿಭೆ ಹರ್ಷಿಣಿ ಯು.

ಇವರು ಮೂಲತಃ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಉಡ್ಡಂಗಳ ನಿವಾಸಿ, ತಂದೆ ರವಿಮೂಲ್ಯ ಹಾಗೂ ತಾಯಿ ರೇವತಿ. ಇವರ ಪ್ರಾಥಮಿಕ ಶಿಕ್ಷಣ ಮಿತ್ತಡ್ಕದ ಸರಕಾರಿ ಶಾಲೆಯಲ್ಲಿ ನಡೆಸಿ, ಪ್ರೌಢ ಶಿಕ್ಷಣವನ್ನು ಪರ್ಪುಂಜದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಟ್ಟಂಪಾಡಿಯಲ್ಲಿ ಹಾಗೂ ಪ್ರಸ್ತುತ ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆಸುತ್ತಿದ್ದಾರೆ.

ಆರಂಭದಲ್ಲಿ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬೇಕು ಎಂಬುವುದು ಇವರ ತಂದೆಯ ಮಹದಾಸೆಯಾಗಿತ್ತು. ಅಂತೆಯೇ 8ನೇ ತರಗತಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿ ರಂಗದಲ್ಲಿ ನರ್ತಿಸಿದರು, ವಾಸುದೇವ ಪೂಜಾರಿ ಇವರ ಗುರುಗಳು. ಅದಾದ ನಂತರ ಇವರ ಮೊದಲ ನಾಟಕ ‘ಪ್ರಕೃತಿ ಮರಳಿ ಪ್ರಕೃತಿಯೆಡೆಗೆ’ ಎಂಬ ನಾಟಕದಲ್ಲಿ ಅಭಿನಯಿಸುವುದರ ಮೂಲಕ ಮೊದಲ ಬಾರಿಗೆ ಬಾಲ ಪ್ರತಿಭೆ ಎಂದು ಗುರುತಿಸಿಕೊಂಡ ಪ್ರಶಂಸೆ ಇವರದು. ಕರಾಟೆಯಲ್ಲೂ ಆಸಕ್ತಿ ಹೊಂದಿದ ಹರ್ಷಿಣಿಯವರು ನಾರಾಯಣ ಎಂಬ ಕರಾಟೆ ಗುರುಗಳ ಗರಡಿಯಲ್ಲಿ ಪಳಗಿದರು, ಇವರ ಈ ಕರಾಟೆ ಆಸಕ್ತಿಗೆ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲೂ ತನ್ನ ಕರಾಟೆ ಚಾಣಕ್ಷವನ್ನು ಪ್ರದರ್ಶಿಸಲು ವೇದಿಕೆ ದೊರೆಯಿತು.

14ನೇ ವಯಸ್ಸಿನಲ್ಲಿ ಎಚ್. ಐ.ವಿ ಎಂಬ ವಿಷಯದ ಬಗ್ಗೆ ರೋಲ್ ಪ್ಲೇ ಮಾಡಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಆಂಗ್ಲಭಾಷೆಯಲ್ಲಿ ನಾಟಕ ಮಾಡಿದ್ದು ಮೆಚ್ಚಬೇಕಾದ ವಿಷಯ. ಅದಲ್ಲದೆ ಇವರು ಆಟೋಟಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ಬಹುಮಾನ ಪಡೆದಿರುತ್ತಾರೆ.

ತನ್ನ ಪ್ರೌಢ ಶಿಕ್ಷಣದ ಸಮಯದಲ್ಲಿ ಭಾಷಣ ಸ್ಪರ್ಧೆ, ನಾಟಕ ಹಾಗೂ ನೃತ್ಯದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಮಿಂಚಿದ್ದಾರೆ. “ತನ್ನ ಈ ಪುಟ್ಟ ಸಾಧನೆಗೆ ಪಾಪೆಮಜಲು ಶಾಲೆಯ ಗಣಿತ ಶಿಕ್ಷಕರಾದ ಪ್ರಕಾಶ್ ಮೂಡಿತ್ತಾಯರವರೇ ಕಾರಣ” ಎಂದು ಹರ್ಷಿಣಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

-ನಿರಂಜನ್ ಕಡಂದೇಲು
ಪ್ರಥಮ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು
ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಾಮಾಜಿಕ ಜಾಲತಾಣಾಂತು ಕೃಷ್ಣಲೆ ಮೇಕಪ್ ಕಡೇನ್ ಪೂರಾ ಲೋಕಾಚೆ ಚಿತ್ತ

Upayuktha

ಸುಮಧುರ ಕಂಠದ ಭಾಗವತರು ಚಂದ್ರಕಾಂತ್ ರಾವ್ ಮೂಡುಬೆಳ್ಳೆ

Upayuktha

ಬಹುಮುಖ ಪ್ರತಿಭೆ, ತುಳು ನಾಟಕ, ಸಿನಿಮಾ ಕಲಾವಿದೆ ಜ್ಯೋತಿ ಕುಲಾಲ್ ಪುತ್ತೂರು

Upayuktha

Leave a Comment