ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ಚಿತ್ರ ಸಾಹಿತಿ ಹಾಗೂ ನಟ ಆಗಿರುವ ಎಸ್.ನಾರಾಯಣ್ ಅವರ ಪುತ್ರ ಪವನ್ ಹಸೆ ಮಣೆ ಏರಿದ್ದಾರೆ.
ಇಂದು ಬೆಳಗ್ಗೆ 7.30 ರಿಂದ 08.30ಕ್ಕೆ ನಡೆದ ಶುಭ ಮುಹೂರ್ತದಲ್ಲಿ ಪವಿತ್ರಾಳನ್ನು ವಿವಾಹವಾದರು. 10.30 ರ ನಂತರ ಆರತಕ್ಷತೆ ಕಾರ್ಯ ಕ್ರಮ ನಡೆಯಿತು.
ಆರತಕ್ಷತೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಟ ಶರಣ್, ನಟ ಶ್ರೀ ಮುರಳಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಮುಖ್ಯಮಂತ್ರಿ ಚಂದ್ರು, ಅಮೂಲ್ಯ, ಸಚಿವ ಗೋಪಾಲಯ್ಯ , ಸಂಸದೆ ಸುಮಲತಾ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕೆಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ.