ರಾಜ್ಯ

ಸಾಗರ ಶಾಸಕ ಹಾಲಪ್ಪ ಕೋವಿಡ್ ಪಾಸಿಟಿವ್

 

ಶಿವಮೊಗ್ಗ: ಮುಖ್ಯಮಂತ್ರಿಗಳ ತವರು ಜಿಲ್ಲೆಯ ಮತ್ತೋರ್ವ ಶಾಸಕರಿಗೆ ಕೋವಿಡ್ 19 ಸೋಂಕು ತಗುಲಿರುವುದು ಈಗಾಗಲೇ ವರದಿಯಾಗಿದೆ.  ಸಾಗರ ಶಾಸಕ ಹರತಾಳು ಹಾಲಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಧೃಡ ವಾಗಿದೆ.

ಎಂಎಸ್ಐಎಲ್ ಬೋರ್ಡ್ ಅಧ್ಯಕ್ಷರಾಗಿರುವ ಶಾಸಕ ಹರತಾಳು ಹಾಲಪ್ಪ ತನಗೆ ಕೋವಿಡ್-19 ಸೋಂಕು ದೃಢವಾದ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಶಾಸಕ ಹಾಲಪ್ಪ ಅವರ ಪತ್ನಿಗೆ ಹಾಗೆಯೇ ಕಾರು ಚಾಲಕ ಹಾಗೂ ಓರ್ವ ಸಿಬ್ಬಂದಿಗೆ ಕೂಡಾ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು ಶಾಸಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತನಗೆ ಕೋವಿಡ್-19 ಸೋಂಕು ತಾಗಿರುವ ಕಾರಣದಿಂದ ತನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಹಾಲಪ್ಪ ಮನವಿ ಮಾಡಿದ್ದಾರೆ.

Related posts

ಕನ್ನಡಿಗರ ಬಗ್ಗೆ ಕೇರಳ ಅಧಿಕಾರಿಗಳಿಗೆ ತಾತ್ಸಾರ ಭಾವನೆ: ವಿ.ಬಿ. ಕುಳಮರ್ವ

Upayuktha

ಮಂಡ್ಯ: ಬಿರುಕು ಬಿಟ್ಟ ಚರ್ಮದ ವಿಚಿತ್ರ ಮಗು ಜನನ

Upayuktha

ರಾಜ್ಯದಲ್ಲಿಂದು ನಿನ್ನೆಗಿಂತಲೂ ಅಧಿಕ, 127 ಹೊಸ ಕೊರೊನಾ ಕೇಸ್

Upayuktha

Leave a Comment

error: Copying Content is Prohibited !!