
ಪುತ್ತೂರು:
ಈ ಸಂದರ್ಭದಲ್ಲಿ ಸುದಾನ ಶಿಕ್ಷಣ ಸಂಸ್ಥೆಯ ಧರ್ಮಗುರು ರೆ.ಫಾ. ವಿಜಯ ಹಾರ್ವಿನ್, ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳ ಹಾಗೂ ಅಪರಾಧ ಪತ್ತೆ ದಳದ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮರವಂಜ, ಯುವ ಉದ್ಯಮಿ ಸಂಶುದ್ದೀನ್ ಎ.ಆರ್, , ಚಿಂತಕ ಜಗದೀಶ್ ಪಡ್ಪು, ಕವಯತ್ರಿ ಶಾಂತ ಕುಂಟಿನಿ, ಸೌಹಾರ್ದ ವೇದಿಕೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಪುಣಚ, ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಭೀಮರಾವ್ ವಾಷ್ಠರ್ ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣ ಕುಂಬ್ರ ಅವರು ಹಲವಾರು ಬಾರಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿ ತಮ್ಮ ಕವನವನ್ನು ವಾಚಿಸಿರುತ್ತಾರೆ. ಪುತ್ತೂರಿನ ಕಡಲೂರಿನ ಲೇಖಕರು ಸಂಘಟನೆಯ ಕೋಶಾಧಿಕಾರಿಯಾಗಿ, ಪುತ್ತೂರಿನ ಸಿರಿಗನ್ನಡ ವೇದಿಕೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.