ಉಡುಪಿ: ದೇಶದ ಮಹಾನ್ ದಾರ್ಶನಿಕರಾದ ಆಚಾರ್ಯ ಶಂಕರರು ಮತ್ತು ಆಚಾರ್ಯ ರಾಮಾನುಜರ ಜಯಂತಿ ನಿಮಿತ್ತ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಯತಿಶ್ರೇಷ್ಠರ ಸಂಸ್ಮರಣೆ ನಡೆಯಿತು.
ಅದ್ವೈತ ತತ್ವ ಪ್ರತಿಪಾದಕರಾದ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ, ದೀಪಗಳನ್ನು ಬೆಳಗಿ ಭಕ್ತಿ ನಮನ ಸಲ್ಲಿಸಲಾಯಿತು. ವಿಶಿಷ್ಟಾದ್ವೈತ ಪ್ರತಿಪಾದಕರಾದ ರಾಮಾನುಜಾಚಾರ್ಯರ ವಾಙ್ಮಯ ಕೊಡುಗೆಗಳನ್ನು ಸ್ಮರಿಸಲಾಯಿತು.
ಸಮಿತಿ ಸಂಘಟನಾ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಅರ್ಚಕರಾದ ಗೋವಿಂದ ಐತಾಳ್ , ದಿವಾಕರ ಐತಾಳ್ , ಪ್ರಸನ್ನ ಆಚಾರ್ಯ, ಕಾರ್ಯದರ್ಶಿ ನಾಗರಾಜ ಭಟ್, ವ್ಯವಸ್ಥಾಪಕ ವಾಗೀಶ್ ರಮೇಶ್ ಬಾರಿತ್ತಾಯ ಡಾ. ಎಸ್. ಎಲ್. ಕರಣಿಕ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ