ಕೃಷಿ ಲೇಖನಗಳು

ಕಷ್ಟಗಳ ಮೇಲೆ ಕಷ್ಟ ಬಂದರೂ ನಿಲ್ಲದೇ ದುಡಿಯುವ ರೈತರಿಗೊಂದು ನಮನ

ನಮ್ಮ ಈಗಿನ ನವಯುಗದಲ್ಲಿ ಅದೆಷ್ಟೋ ತರಹದ ವೃತ್ತಿಗಳಿವೆ. ಅದರಲ್ಲಿ ಹಲವಾರು ವೃತ್ತಿಗಳು ತಂತ್ರಜ್ಞಾನ ಆಧಾರಿತ ವೃತ್ತಿಯಾಗಿದೆ. ತಂತ್ರಜ್ಞಾನಗಳು ಅದೇಷ್ಟರ ಮಟ್ಟಿಗೆ ತನ್ನ ಕೈಚಳಕವನ್ನು ತೋರಿಸುತ್ತಿದೆ ಎಂದರೆ ಶೇಕಡ 75ರಷ್ಟು ವೃತ್ತಿಗಳಿಗೆ ತಂತ್ರಜ್ಞಾನ ಅಡಿಪಾಯವಾಗಿ ಬಿಟ್ಟಿದೆ. ಇದು ಕೃಷಿಕ್ಷೇತ್ರದಲ್ಲೂ ಹೊರತಾಗಿಲ್ಲ.

ಕೃಷಿ ಕ್ಷೇತ್ರದಲ್ಲಿ ಅದೆಷ್ಟೇ ತಂತ್ರಜ್ಞಾನಗಳು ಬಳಕೆಯಾದರೂ ಕೂಡ, ರೈತ ತನ್ನ ಸ್ವಂತ ಪರಿಶ್ರಮದ ಮೂಲಕ ಬೆಳಗಿನಿಂದ ಸಂಜೆಯವರೆಗೆ ಹೊಲ ಅಥವಾ ಜಮೀನಿನಲ್ಲಿ ದುಡಿಯುತ್ತಾ, ನಮ್ಮ ದೇಶದ ಬೆನ್ನೆಲುಬಾಗಿ ಮತ್ತು ನಮಗೆಲ್ಲ ಆಸರೆಯಾಗಿ ನಿಂತಿದ್ದಾನೆ.

ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಎಷ್ಟರಮಟ್ಟಿಗೆ ಅಭಿವೃದ್ಧಿ ಆಗಿದೆ ಎಂದರೆ, ಮಂಗಳನ ಅಂಗಳಕ್ಕೆ ಸಹ ಕಾಲಿಡುವ ಪ್ರಯತ್ನವನ್ನು ಮಾನವರು ಸಕ್ರಿಯವಾಗಿ ನಡೆಸುವಷ್ಟು ಮುಂದುವರೆದಿದೆ. ಅದೆಷ್ಟೋ ಪ್ರತಿಷ್ಠಿತ ಕಂಪನಿಗಳು ಐಷಾರಾಮಿ ಉತ್ಪನ್ನಗಳನ್ನು ಉತ್ಪಾದಿಸಿದರು ಕೂಡ, ಮಾನವನ ಹಸಿವನ್ನು ನೀಗಿಸಲು ಬೇಕಾಗಿರುವ ಅನ್ನವನ್ನು ರೈತನೇ ಮಾಡಬೇಕಷ್ಟೇ.

ಆದರೆ ಇತ್ತೀಚಿನ ದಿನಗಳಲ್ಲಿ ಕೊರೋನ ಎಂಬ ವೈರಸ್ ಇಡೀ ಜಗತ್ತಿನ ನಿದ್ದೆಗೆಡಿಸಿದ್ದು, ದಿನೇದಿನೇ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ಭಯಾನಕ ವೈರಸ್ಸನ್ನು ತಡೆಗಟ್ಟಲು ವೈದ್ಯರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

ನಮ್ಮ ರಾಷ್ಟ್ರದಲ್ಲಿ ಕೊರೋನ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹಾಗೂ ಸೀಲ್ ಡೌನ್ ಅನ್ನು ಜಾರಿಗೆ ತರಲಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ಯಾವುದೇ ಆರ್ಥಿಕ ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ರೈತರು ತಾನು ಬೆಳೆದ ಬೆಳೆಯನ್ನು ಸರಿಯಾಗಿ ಪೋಷಿಸಲಾಗದೆ, ಗಿಡಗಳಿಗೆ ಬೇಕಾದ ಸರಿಯಾದ ಗೊಬ್ಬರ, ಕೀಟನಾಶಕಗಳು ದೊರೆಯದೆ ಅದೆಷ್ಟೋ ಫಸಲುಗಳು ನಾಶವಾಗಿದೆ.

ಅಂತೂ ಸಿಕ್ಕಾ ಅಲ್ಪಸ್ವಲ್ಪ ಇಳುವರಿಯನ್ನು ಸರಬರಾಜು ಮಾಡಲು ವಾಹನಗಳ ಕೊರತೆ ಒಂದೆಡೆಯಾದರೆ, ಮಾರುಕಟ್ಟೆಗೆ ಕೊಂಡು ಹೋದ ಬೆಳೆಯನ್ನು ನ್ಯಾಯವಾದ ಬೆಲೆಗೆ ಮಾರುವುದೇ ದೊಡ್ಡ ಸವಾಲಾಗಿತ್ತು. ಲಾಕ್ ಡೌನ್ ಸಡಿಲಿಕೆ ನಂತರದಲ್ಲಾದರೂ ಎಲ್ಲಾ ಸಮಸ್ಯೆಗಳು ಸರಿಹೋಗಬಹುದು ಎಂದುಕೊಂಡ ಕೃಷಿಕರಿಗೆ ವಿಪರೀತ ಮಳೆ ಮುಳುವಾಯಿತು. ಅಲ್ಲಿ-ಇಲ್ಲಿ ಸಾಲ ಮಾಡಿ ಕೃಷಿಗಾಗಿ ಖರ್ಚು ಮಾಡಿದ ವೆಚ್ಚವೆಲ್ಲ ವರುಣನ ಆರ್ಭಟಕ್ಕೆ ಕೊಚ್ಚಿ ಹೋಯಿತು. ಅದೆಷ್ಟೋ ಎಕರೆಗಟ್ಟಲೆ ಜಮೀನಿನಲ್ಲಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡು ನಾಶವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಮನೆಗಳು ಕಟ್ಟಡಗಳು ಕೂಡ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗಿದೆ.

ಬರುವ ಬೆಳೆಯಿಂದ ಒಂದಿಷ್ಟು ಸಿಗುವ ಹಣದಲ್ಲಿ ತಮ್ಮ ಜೀವನ ನಡೆಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಹಣವನ್ನು ತೆಗೆದಿಡಬಹುದು ಅಂದುಕೊಂಡ ಕೃಷಿಕರ ಯೋಜನೆಯೆಲ್ಲ ತಲೆಕೆಳಗಾಗಿದೆ. ಇಷ್ಟೇಲ್ಲಾ ಆದರೂ ಕೂಡ ನಾವುಗಳು ಗಮನಿಸುವಾಗ ನಮಗೆ ಬೇಗನೇ ಗೋಚರಿಸುವುದು ಆ ಕಂಪನಿಗೆ ಇಷ್ಟು ಲಾಸ್ ಆಯಿತು, ಈ ಕಂಪನಿಗೆ ಇಷ್ಟು ಲಾಸ್ ಆಯಿತು ಅಂತ. ಆದರೆ ದೇಶದ ಆಧಾರಸ್ತಂಭವಾಗಿರುವ ರೈತನಿಗೆ ನಷ್ಟ ಆಗಿರೋದು ಮಾತ್ರ ಯಾರ ಕಣ್ಣಿಗೂ ಕಾಣುವುದೇ ಇಲ್ಲ.

ದೇಶದಲ್ಲಿ ಎಷ್ಟೇ ದೊಡ್ಡ ದೊಡ್ಡ ಕಂಪನಿಗಳು ಬಂದರೂ ಸಹ ಜನರು ತಿನ್ನುವ ಅನ್ನವನ್ನು ನೀಡಲು ರೈತರಿಂದ ಮಾತ್ರ ಸಾಧ್ಯ. ಏನೇ ಆಗಲಿ ನಾವೆಲ್ಲರೂ ರೈತರನ್ನು, ಕೃಷಿಕರನ್ನು ಗೌರವಿಸೋಣ. ಅವಶ್ಯವಿದ್ದರೆ ಕೈಲಾದಷ್ಟು ಸಹಾಯ ಮಾಡೋಣ.

-ಸಂದೀಪ್ ಎಸ್. ಮಂಚಿಕಟ್ಟೆ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-2

Harshitha Harish

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (21-05-2020)

Upayuktha

ಬದುಕಿನ ಪಾಠ ಕಲಿಸಿದ 2020!

Upayuktha