ಜಿಲ್ಲಾ ಸುದ್ದಿಗಳು ರಾಜ್ಯ

ಬಂಗರ ಪಲ್ಕೆ ದುರಂತ: 22 ದಿನಗಳ ಬಳಿಕ ಸಿಕ್ಕಿದ ಸನತ್ ಶೆಟ್ಟಿ ಮೃತ ದೇಹ

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಬಂಗರಪಲ್ಕೆ ಬಳಿಗೆ ಬಡಮನೆ ಅಬ್ಬಿ ಜಲಪಾತ ವೀಕ್ಷಣೆ ಮಾಡುತ್ತಿದ್ದ ನಾಲ್ವರ ಮೇಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿದ್ದ, ಉಜಿರೆಯ ನಿವಾಸಿ ವಿದ್ಯಾರ್ಥಿ ಸನತ್ ಶೆಟ್ಟಿ ಅವರ ಮೃತದೇಹ ಫೆ.16ರಂದು ಸಂಜೆ ಪತ್ತೆಯಾಗಿದೆ.

ಕಾಶಿಬೆಟ್ಟು ನಿವಾಸಿ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ದ್ವೀತಿಯ ಪದವಿ ವಿದ್ಯಾರ್ಥಿ ಸನತ್ ಶೆಟ್ಟಿ ತನ್ನ ಸ್ನೇಹಿತರ ಜೊತೆ ಜ.25 ರಂದು ಜಲಪಾತ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿತ್ತು. ಜಲಪಾತದ ಮೇಲ್ಗಡೆಯ ಗುಡ್ಡ ಮಣ್ಣು ಸಹಿತ ಬೃಹತ್ ಬಂಡೆಕಲ್ಲುಗಳು ಜಲಪಾತ ವೀಕ್ಷಿಸುತ್ತಿದ್ದವರ ಮೇಲೆ ಕುಸಿದು ಬಿದ್ದಿದ್ದು, ಇತರರು ಪಾರಾದರೆ, ಸನತ್ ಶೆಟ್ಟಿಯವರು ಮಣ್ಣಿನಡಿ ಸಿಲುಕಿಕೊಂಡು ನಾಪತ್ತೆಯಾಗಿದ್ದರು.

ಸನತ್ ಶೆಟ್ಟಿ ಮೃತ ದೇಹ

ವಿಪತ್ತು ನಿರ್ವಹಣ ತಂಡ, ಅಗ್ನಿಶಾಮಕದಳ, ಗೃಹರಕ್ಷಕ ದಳ, ಪೊಲೀಸ್, ವನ್ಯಜೀವಿವಿಭಾಗ, ಕಂದಾಯ, ಗ್ರಾಮ ಪಂಚಾಯತು, ಶ್ರೀ ಕ್ಷೇ.ಧ. ವಿಪತ್ತು ನಿರ್ವಹಣಾ ತಂಡ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ತಂಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಯವರು, ಸ್ಥಳೀಯರು ಸೇರಿದಂತೆ ಪ್ರತಿದಿನ ಮಣ್ಣು ಬಂಡೆ ತೆರವುಗೊಳಿಸುವ ಕಾರ್ಯಾಚರಣೆ ನಿರಂತರವಾಗಿ ನಡೆದಿತ್ತು.

ಫೆ.4ರಿಂದ ಜಲಪಾತಕ್ಕೆ ಹೋಗುವ ಕಾಡುದಾರಿಯಲ್ಲಿ ಜೆಸಿಬಿಯ ಮೂಲಕ ರಸ್ತೆಯನ್ನು ನಿರ್ಮಿಸಿ ಜೆಸಿಬಿಯ ಮೂಲಕ ಮಣ್ಣು, ಬಂಡೆ ತೆರೆಯುವ ಕಾರ್ಯಾಚರಣೆ ನಡೆಸಲಾಗಿತ್ತು. ನಂತರ ಜಿಲ್ಲಾಧಿಕಾರಿಯವರು ಭೇಟಿ ನೀಡಿ, ಎರಡು ದಿನ ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಳಿಕ ಹಿಟಾಚಿ ಮೂಲಕ ಕಾರ್ಯಾಚರಣೆ ಆರಂಭಿಸಿದ್ದು, ಈಗ ಇದು ಯಶಸ್ವಿಯಾಗಿದ್ದು, ನಾಪತ್ತೆಯಾದ ಸನತ್ ಶೆಟ್ಟಿಯವರ ಮೃತದೇಹ ಪತ್ತೆಯಾಗಿದೆ.

Related posts

ಕೊರೊನಾ ವೈರಸ್‌ಗೆ ಭಾರತದಲ್ಲಿ ಮೊದಲ ಬಲಿ; ಕಲಬುರಗಿಯಲ್ಲಿ ವೃದ್ಧನ ಸಾವು

Upayuktha

ಇಂದು ಮಧ್ಯಾಹ್ನ 8ನೇ ಬಜೆಟ್ ಮಂಡನೆ ಮಾಡಲಿರುವ ಸಿಎಂ

Sushmitha Jain

ಕೊರೊನಾ ವಿಶೇಷ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯ ಅಪಸ್ವರಕ್ಕೆ ನಳಿನ್ ಕುಮಾರ್ ಕಟೀಲ್ ತರಾಟೆ

Upayuktha