ನಗರ ಸ್ಥಳೀಯ

ಅಧ್ಯಾತ್ಮ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ‘ಸಂಚಾರಿ ಕನಕ ಪುರಂದರ ಪ್ರಶಸ್ತಿ’ ಪ್ರದಾನ

ಜೀವನದ ನಶ್ವರತೆ ತಿಳಿಯುವುದೇ ನಿಜವಾದ ಆಧ್ಯಾತ್ಮ. ಅದರ ಕುರಿತು ಯೋಚಿಸುವಂತೆ ಮಾಡುವುದೇ  ದಾಸರಪದಗಳ ಸಂದೇಶ’


   
ಆಯೋಜನೆ: ಶ್ರೀ ಪುರಂದರ ಇಂಟರ್‍ನ್ಯಾಷನಲ್ ಟ್ರಸ್ಟ್ (ರಿ)

ಎಲ್ಲಿ : ಚಿಕ್ಕಬಳ್ಳಾಪುರ ಜಿಲ್ಲೆಯ ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ರಂಗಸ್ಥಳದ ಭೂ-ನೀಳಾ ಸಮೇತ ಮೋಕ್ಷ ಶ್ರೀರಂಗನಾಥನ ದಿವ್ಯಸನ್ನಿಧಿಯಲ್ಲಿ

ಬೆಂಗಳೂರು: ಶ್ರೀ ಪುರಂದರ ಇಂಟರ್‍ನ್ಯಾಷನಲ್ ಟ್ರಸ್ಟ್ (ರಿ) ವತಿಯಿಂದ 22ನೇ ವರ್ಷದ ಪುರಂದರದಾಸರ ಪುಣ್ಯದಿನದ ಸಂಸ್ಮರಣೆಯಲ್ಲಿ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ಇಂದು (ಫೆ.12) ‘ಸಂಚಾರಿ ಕನಕ ಪುರಂದರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ರಂಗಸ್ಥಳದ ಭೂ-ನೀಳಾ ಸಮೇತ ಮೋಕ್ಷ ಶ್ರೀರಂಗನಾಥನ ದಿವ್ಯಸನ್ನಿಧಿಯಲ್ಲಿ ಉಪಸ್ಥಿತ ಭಕ್ತ ಸಮೂಹದ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಮ್ಮ ನಡುವಿನ ಸನಾತನ ಸಾಹಿತ್ಯ ವಕ್ತಾರ; ಸಂಸ್ಕೃತಿ ಮಾಲೆಯ ಸೃಜನಶೀಲ ಪುಸ್ತಕ ಸೊಗಸಿಗೆ ಅನೇಕ ಕೃತಿ ರಚಿಸಿ, ಸಾರಸ್ವತ ಕೈಂಕರ್ಯ ಮಾಡುತ್ತಿರುವ ಅನನ್ಯ ಅಕ್ಷರ ಪ್ರೇಮಿ. ಉತ್ತಮ ಸಮಾಜದ-ವ್ಯಷ್ಠಿ ಸಮಷ್ಟಿ ನೀತಿಯನ್ನು ಬಯಸುತ್ತ; ಸಾಂಸ್ಕೃತಿಕ ಆಸ್ಥೆ ಇಟ್ಟುಕೊಂಡು ತಮ್ಮ ಬರಹಗಳಿಂದ ಪ್ರಸಿದ್ಧ. ವಿದ್ವಜ್ಜನರ ವ್ಯಾಪ್ತಿಯಲ್ಲಿ ಕಿರಿಯ ವಯಸ್ಸಿಗೆ ಸೇರ್ಪಟ್ಟು ಜ್ಞಾನ ಸಾಂಗತ್ಯದಿಂದ ಓದುಗರಿಗೆ ಚಿರಪರಿಚಿತ. ಸಾಮಾಜಿಕ ಕಳಕಳಿಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಸಾತ್ವಿಕ ಚೇತನ ಹರಿದಾಸ ಸಂಸ್ಕøತಿ ಪ್ರಚಾರ ಕೈಂಕರ್ಯವನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ಯುವ ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರಿಗೆ ಶ್ರೀಪುರಂದರ ಇಂಟರ್‍ನ್ಯಾಷನಲ್ ಟ್ರಸ್ಟ್‌ನ ವತಿಯಿಂದ 22ನೇ ವರ್ಷದ ಪುರಂದರದಾಸರ ಪುಣ್ಯದಿನದ ಸಂಸ್ಮರಣೆಯಲ್ಲಿ ‘ಸಂಚಾರಿ ಕನಕ ಪುರಂದರ ಪ್ರಶಸ್ತಿ’ ಪ್ರದಾನ ಮಾಡಿ ಪುರಸ್ಕರಿಸುತ್ತಿರುವುದು ದಾಸಸಾಹಿತ್ಯ ಪರಂಪರೆಯ ಶಿಖರ ಗೌರವವೆಂದು ಭಾವಿಸಿ ಅಭಿನಂದಿಸುತ್ತಿದ್ದೇವೆ ಎಂದು ಕಾರ್ಯದರ್ಶಿ ಡಾ.ಸುವರ್ಣ ಮೋಹನ್ ತಿಳಿಸಿದರು.

ಆಧ್ಯಾತ್ಮಿಕತೆ ಭಾರತೀಯ ಪರಂಪರೆಯ ಜೀವನಾಡಿ. ಕರ್ನಾಟಕದ ಸಾಂಸ್ಕೃತಿಕ ಭೂಮಿಕೆಯಲ್ಲಿ ಎಲ್ಲರೂ ಮೆಚ್ಚುವಂತಹ ಒಂದು ಕವಲೆಂದರೆ ದಾಸ ಸಾಹಿತ್ಯ. ಕನ್ನಡ ಭಾಷೆಯ ಪ್ರಜ್ಞೆ, ಪ್ರಬುದ್ದತೆಗಳಿಗೊಂದು ಸಾಕ್ಷಿಯಾಗಿ, ಜನರು ಆಡುವ ಮಾತನ್ನೇ ಕಾವ್ಯದ ಮೌಲ್ಯಕ್ಕೆ ಏರಿಸಿದವರಾಗಿ, ಸಾಹಿತ್ಯಕ್ಕೆ ಸಂಗೀತದ ಸಾಹಚರ್ಯ ನೀಡಿ ಕರ್ನಾಟಕ ಸಂಗೀತಕೊಬ್ಬ ಗೌರವದ ಗುರುವಾಗಿ, ನೈತಿಕತೆಯ ನೆಲೆಗಟ್ಟಿನಲ್ಲಿ ಭಕ್ತಿ ತತ್ವದ ಪ್ರಚಾರಕನಾಗಿ ‘ದಾಸಸಾಹಿತ್ಯ’ ವನ್ನು ಶ್ರೀಮಂತಗೊಳಿಸಿ, ಆಧ್ಯಾತ್ಮ, ಕಲೆ, ಸಂಸ್ಕೃತಿಗಳ ಒಕ್ಕೂಟ ನಿರ್ಮಿಸಿದ ಆಕೃತಿಗಳಲ್ಲಿ ಭವ್ಯವಾದುದು ಪುರಂದರದಾಸರ ವ್ಯಕ್ತಿತ್ವ. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತಕಾಲ. ಅಂತರಂಗದ ನಡೆ ದಾಸರ ನುಡಿಕಟ್ಟಿನಲ್ಲಿ ಶಾಬ್ದಿಕ ಕಸರತ್ತಾಗದೆ ಅನುಭೂತಿಯ ಆವಿಷ್ಕಾರವಾಗಿ ಮೂಡಿ ಕನ್ನಡದ ಕನ್ನಡಿಯಲ್ಲಿ ಕಣ್ಣಿಗೆ ಕಟ್ಟುವಂತೆ ಪಡಿಮೂಡಿಸಿದ ಅನನ್ಯ ದೇಸಿ ಪ್ರತಿಭೆ. ಅಂತಹ ಹರಿಶರಣರಿಗೆ ನಮೋ ನಮಃ.

ಕನ್ನಡಿಗರ ಆತ್ಮಶಕ್ತಿಯನ್ನು ಸದೃಢಗೊಳಿಸಿದ ಕನಕದಾಸರ ಜೀವನ ಮತ್ತು ಸಾಧನೆ ಬತ್ತಲಾರದ ಗಂಗೆ ಸವೆಯಲಾರದ ಮಹಾಪರ್ವತ. ಸಾವಿಲ್ಲದ ಸಾಹಿತ್ಯದ ಮೂಲಕ ಚಿರಂತನ ಮೌಲ್ಯಗಳನ್ನು ನೀಡಿರುವ ಕನಕದಾಸರು ಮಾನವಕುಲ ಸಾಮರಸ್ಯ ಮತ್ತು ಸಮೃದ್ಧಿಯ ಸೆಲೆಯಾಗಬೇಕೆಂಬ ಕನಸು ಕಂಡವರು. ಆ ಕನಸಿನ ನನಸ್ಸಿಗಾಗಿ ಹೋರಾಡಿದವರು. ದೇಸಿಯ ಸತ್ವ-ತತ್ವದ ನೆಲೆ-ಬೆಲೆಯನ್ನು ತೆರೆದು ತೋರಿಸಿದವರು. ಜೀವನದಲ್ಲಿ ಕಷ್ಟ-ಸುಖಗಳೆಲ್ಲ ಬರುತ್ತವೆ. ಲೌಕಿಕ ಸುಖದ ಸುತ್ತಲೇ ಸಾಮಾನ್ಯರ ತಿಳಿವಳಿಕೆ ಸುತ್ತುತ್ತದೆ. ಇವುಗಳ ನಶ್ವರತೆ ತಿಳಿಯುವುದೇ ನಿಜವಾದ ಆಧ್ಯಾತ್ಮ. ಇದನ್ನು ಮೀರಿ ಯೋಚಿಸುವಂತೆ ಮನಸ್ಸುಕೊಡು ಎಂಬುದು ಅವರು ಮಾಡಿಕೊಂಡ ಪ್ರಾರ್ಥನೆ ಎಂದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ ಡಾ.ಗುರುರಾಜ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕರುನಾಡ್ ಸೆಂಟರ್ ಫಾರ್ ಫರ್ಮಾನಿಂಗ್ ಆರ್ಟ್ಸ್ ನಿಧಾಗ್ ಕರುನಾಡ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ-ಗಾಯನ- ಭರತನಾಟ್ಯ- ಕೋಲಾಟ ಹಾಗೂ ಹಿರಿಯ ನಾಗರಿಕರಿಗೆ ಗ್ಔರವ ಸರ್ಮಪಣೆ ನಡೆಯಿತು. ಸಂಸ್ಥೆಯ ರೂವಾರಿ ಮೋಹನ್ ಕುಮಾರ್, ಪರಿಮಳ ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕಾಸರಗೋಡು: ರೆವೆನ್ಯೂ ರಿಕವರಿ ದರದಲ್ಲಿ ರಿಯಾಯಿತಿ

Upayuktha

ಸಹಕಾರ ಸಚಿವರ ದಕ ಜಿಲ್ಲಾ ಭೇಟಿ: ಶಾಸಕ ಡಾ. ಭರತ್ ಶೆಟ್ಟಿ ಸ್ವಾಗತ

Upayuktha

‘ತುಡಿತ’ ಕವನ ಸಂಕಲನ ಜ.18ಕ್ಕೆ ಬಿಡುಗಡೆ

Upayuktha