ಬೆಂಗಳೂರು: ಅತಿಯಾದ ಪರಿಸರ ಪ್ರೇಮ ಹೊಂದಿರುವ ಸ್ಯಾಂಡಲ್ ವುಡ್ ನಟರೊಬ್ಬರು ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಹೊಸ ವರ್ಷವನ್ನೂ ವಿಶೇಷವಾಗಿ ಸ್ವಾಗತಿಸಿದ್ದಾರೆ.
ವಿಶಿಷ್ಟ ದನಿ ಹಾಗೂ ನಟನೆಯಿಂದ ಜನಪ್ರಿಯರಾಗಿರುವ ನಟ ವಸಿಷ್ಠ ಸಿಂಹ ಇಂದು ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದು ಅದಕ್ಕೆ ತಮ್ಮ ತಂದೆಯ ಹೆಸರನ್ನೇ ಇಟ್ಟಿರುವುದಾಗಿ ಯುಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ವಿಜಯನಾರಸಿಂಹ’ ಎಂದು ಸಿಂಹದ ಮರಿಗೆ ನಾಮಕರಣ ಮಾಡಿದ್ದಾರೆ. ಅದರ ಪಾಲನೆ, ಪೋಷಣೆಯ ಖರ್ಚು ವಸಿಷ್ಠ ಸಿಂಹ ಭರಿಸಲಿದ್ದಾರೆ. ಅಲ್ಲದೆ ಈ ವರ್ಷ ಕಾಡು, ವನ್ಯಜೀವಿ ಸಂರಕ್ಷಣೆಗೆ ಕೈ ಜೋಡಿಸುವ ಚಿಂತನೆಯಿದೆ ಎಂದಿದ್ದಾರೆ.
ಇವರು `ರಾಜಾಹುಲಿ’ ಚಿತ್ರದ ಜಗ್ಗ ಪಾತ್ರದಿಂದ ಗಮನಸೆಳೆದ ನಂತರ `ರುದ್ರತಾಂಡವ’ದಲ್ಲಿ ನಟಿಸಿದ ವಸಿಷ್ಠ ಸಿಂಹ, 2016 ರಲ್ಲಿ ತೆರೆಕಂಡ `ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮಂ ಫೇರ್ ಮತ್ತು ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಕನ್ನಡ ಮಾತ್ರವಲ್ಲದೆ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.