ಅಪರಾಧ ಚಂದನವನ- ಸ್ಯಾಂಡಲ್‌ವುಡ್

ಡ್ರಗ್ಸ್ ಪ್ರಕರಣ : ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾದ ನಟಿ ರಾಗಿಣಿ ದ್ವಿವೇದಿ ಗೆ ಇಂದು ಕೂಡ ಅವರಿಗೆ ಜಾಮೀನು ದೊರೆತಿಲ್ಲ.

ನಟಿ ರಾಗಿಣಿ ಜಾಮೀನು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತ್ರಿಸದಸ್ಯ ಪೀಠವು ಮುಂದೂಡಿದೆ.

ಜಾಮೀನು ಕೋರಿ ರಾಗಿಣಿ ಮೊದಲಿಗೆ ರಾಜ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ರಾಜ್ಯ ಹೈಕೋರ್ಟ್ ರಾಗಿಣಿ ಅರ್ಜಿಯನ್ನು ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.

ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ನವೀನ್ ಸಿನ್ಹಾ ಮತ್ತು ಇಂದು ಮಲ್ಹೋತ್ರಾ ಅವರುಗಳು ರಾಗಿಣಿ ಹಾಗೂ ಶಿವಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದಾರೆ.

Related posts

ಆರೋಗ್ಯ ಸಮಸ್ಯೆ ಯಿಂದ ನಟ ವಿಜಯಕಾಂತ್ ಆಸ್ಪತ್ರೆ ದಾಖಲು

Harshitha Harish

ಕಾರಿಗೆ ಸೈಡ್ ಕೊಡೋ ವಿಚಾರಕ್ಕೆ ರಸ್ತೆಯಲ್ಲೇ ಸಿನೆಮಾ ನಟಿಯಿಂದ ಫೈಟ್

Upayuktha

ಅಮೆರಿಕದಲ್ಲಿ ಶೂಟೌಟ್‌: ಮೈಸೂರು ಮೂಲದ ವಿದ್ಯಾರ್ಥಿ ಸಾವು

Upayuktha