ದೇಶ-ವಿದೇಶ ಬಾಲಿವುಡ್

ಬಾಲಿವುಡ್‌ ಹಿರಿಯ ನಟ ಸಂಜಯ್‌ ದತ್‌ ಗೆ ಆರೋಗ್ಯ ಸಮಸ್ಯೆ – ಮುಂಬೈ ಖಾಸಗಿ ಆಸ್ಪತ್ರೆ ಗೆ ದಾಖಲು

ಖ್ಯಾತ ಬಾಲಿವುಡ್‌ ನಟ ಸಂಜಯ್‌ ದತ್‌ ಅವರು ಶನಿವಾರ ಆ.8 ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ವೈರಸ್‌ ಪರೀಕ್ಷೆ ಕೂಡ ಮಾಡಲಾಗಿತ್ತು.

ಭಾರತೀಯ ಚಿತ್ರರಂಗದ ಹಿರಿಯ ನಟ ಸಂಜಯ್ ದತ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಎದೆನೋವು ಮತ್ತು ಉಸಿರಾಟದ ತೊಂದರೆ ಎದುರಾಗಿದ್ದರಿಂದ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರದ ನಿಯಮದ ಪ್ರಕಾರ ಸಂಜಯ್‌ ದತ್ ಅವರಿಗೆ ಕೊರೊನಾ ವೈರಸ್ ಪರೀಕ್ಷೆ ಕೂಡ ಮಾಡಿಸಲಾಗಿದ್ದು, ನೆಗೆಟಿವ್‌ ವರದಿ ಬಂದಿದೆ. ಹಾಗೆ ಅವರಿಗೆ ಕೋವಿಡ್‌-19 ಸೋಂಕು ತಗುಲಲಿಲ್ಲ. ಆದರೆ ಇತರೆ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ non-covid ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Related posts

ಕೇರಳದ ಕೋವಿಡ್ ವಾರಿಯರ್‌ಗಳಿಗೆ ಸಂಗೀತದ ಮೂಲಕ ಸಲಾಂ

Upayuktha

ಸಿಎಎ ಬಗ್ಗೆ ಸಲ್ಲದ ಹೇಳಿಕೆ ನೀಡಿ ಭಾರತದಿಂದ ತಪರಾಕಿ ತಿಂದ ಮಲೇಷ್ಯಾ

Upayuktha

ಕೊಚ್ಚಿ: ಸ್ಫೋಟಕ ಬಳಸಿ ಎರಡು ಅಕ್ರಮ ಕಟ್ಟಡಗಳ ನೆಲಸಮ, ಕ್ಷಣಮಾತ್ರದಲ್ಲಿ ಧೂಳೀಪಟ

Upayuktha

Leave a Comment

error: Copying Content is Prohibited !!