*ಶಾರ್ವರಿಯ ಸಂಕ್ರಾಂತಿ ಹಬ್ಬ ಬಂತು*
*ನವಗೆ ಸಂತೋಷ,ಸಂಭ್ರಮವ ತಂತು*
*ಆತು ಸುರು ಇಂದು ಪಾವನ ಉತ್ತರಾಯಣ*
*ಪುಣ್ಯಕಾಲ,ನಮೋ ಶ್ರೀಮನ್ನಾರಾಯಣ*
*ಹಲಸು ಮಾವು ಫಲಿಸಿತ್ತು ಬೆಳೆಯ ಹೊತ್ತು*
*ಹಲವು ನೋಡಲೆ ಬಹಳ ಚೆಂದ ಕಾಣುತ್ತು*
*ನವಿಲು ಗರಿಯ ಬಿಡಿಸಿ ಬಚ್ಚದ್ದೆ ಕೊಣುದತ್ತು*
*ಮಾವಿನ ಚೆಗುರು ತಿಂದು ಕೋಗಿಲೆ ಹಾಡಿತ್ತು*
*ಮಧೂರಿಲ್ಲಿ ಕೊಡಿ ಮರ ಚೆಂದಲ್ಲಿ ಏರಿತ್ತು*
*ಅಡಕ್ಕೆ ,ಬೊoಡ, ಬಾಳೆಗೊನೆ ಮೆರದತ್ತು*
*ಶಬರಿ ಮಲೆಲಿ ಮಕರ ಬೆಣಚ್ಚಿ ಬೆಳಗಿತ್ತು*
*ಅಭಯ ನೀಡಿದ ಅಯ್ಯಪ್ಪ ಸಂಕ್ರಾಂತಿ ಹೊತ್ತು*
*ಬೇವು ಬೆಲ್ಲ ಎಲ್ಲಾ ರಸವ ಸವಿಯೆಕ್ಕು*
*ನಾವು ಬೇನೆ ಮರೆಯೆಕ್ಕು ಉಲ್ಲಾಸ ತುಂಬೆಕ್ಕು*
*ಗುಣಾಜೆ ರಾಮಚಂದ್ರ ಭಟ್*