ಕತೆ-ಕವನಗಳು

ಸಂಕ್ರಾಂತಿಗೆ ಸಮ್-ಕ್ರಾಂತಿಯಾಗಲಿ

ಎಳ್ಳು ಬೆಲ್ಲಗಳಂತೆ ಬಿಳಿಯಾಗಿ ಮನಸ್ಸು ಶುದ್ಧವಾಗಿ ಬದುಕುವಂತಾಗಲಿ


ಪರಿಶುದ್ಧ ಪ್ರೀತಿ ಪ್ರೇಮ ಉಕ್ಕಿ ಸರ್ವ ಮನಗಳಲಿ ಹರಿಯಲಿ

ವಿಶ್ವ ಭ್ರಾತೃತ್ವ ಹೆಚ್ಚಿ ಸರ್ವರಲಿ ಶಾಂತಿ ನೆಲೆಸಲಿ
ಸ್ವಾರ್ಥ ಮರೆತು ಜನ ಸರ್ವರೊಂದೇ ಎಂದರಿಯುವಂತಾಗಲಿ

ಧನದಾಹ ಕುಗ್ಗಿ ಬದುಕ ಸಂತಸದಿಂದ ಕಳೆಯುವಂತಾಗಲಿ.
ಬದುಕಿನ ಜಂಜಡವೆಲ್ಲ ತೊಳೆದು ಹೋಗಿ ಶಾಂತಿಯ ಹೊಳೆ ಹರಿಯಲಿ

ಮನಮನಗಳಲಿ ದೈವೀ ಶಕ್ತಿ ಸಂಚರಿಸಿ ಮೋಸ -ವಂಚನೆ ಸಾಯಲಿ
ಭಕ್ತಿ, ಶಕ್ತಿ, ಶಾಂತಿ, ಕೀರ್ತಿ, ಪ್ರೀತಿ, ನೀತಿ, ಸ್ಪೂರ್ತಿ ಸರ್ವ ಕುಟುಂಬಗಳಲೂ ಪ್ರವಹಿಸಲಿ

ಸೂರ್ಯ ಪಥ ಬದಲಿಸಿದಂತೆ ಕೆಟ್ಟ ಆಲೋಚನೆಗಳು ಒಳ್ಳೆಯ ಆಲೋಚನೆಗಳಾಗಿ ಬದಲಾಗಲಿ
ಸುಕಾರ್ಯ ಮಾಡಿ ಉಣ್ಣುವ ಸದ್ಬುದ್ಧಿ ಜನಗಳದ್ದಾಗಲಿ

ಪರರ ಬದುಕ ಹಾಳು ಮಾಡುವ ಕೆಟ್ಟ ಬುದ್ಧಿ ತೊಲಗಲಿ
ಸಂಕ್ರಾಂತಿ ಸಂಬಂಧದಲಿ ಬಿರುಕಾಗದಿರುವಂತೆ ತಡೆಯಲಿ

ಸರಿತಪ್ಪು ತಿಳಿದವರು ಸರಿಯಾಗಿಯೇ ನಡೆವಂತೆ ದೇವರನುಗ್ರಹಿಸಲಿ
ಸರ್ವರಿಗೂ ಸೂರ್ಯ ನಾರಾಯಣನು ದಯೆಯಿತ್ತು ಸಲಹಲಿ..

ಸರ್ವರಿಗೂ ಸಂಕ್ರಾಂತಿಯ ಶುಭಾಶಯಗಳು..
@ಪ್ರೇಮ್@

Related posts

ನನ್ನೆದೆಯ ಕನಸು

Harshitha Harish

ನುಡಿ ಮುತ್ತು: ನಿತ್ಯ ಸತ್ಯ

Upayuktha

*ಬಂಧುಗಳು*

Harshitha Harish