ಗ್ರಾಮಾಂತರ ಸ್ಥಳೀಯ

ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಂಸ್ಕೃತ ದಿನಾಚರಣೆ

ಬೆಳ್ಳೂರು: ಶ್ರಾವಣ ಮಾಸದ ಪೌರ್ಣಮಿಯಂದು ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ. ಆ ಪ್ರಯುಕ್ತ ಆಗಸ್ಟ್ 3ರಂದು (ಸೋಮವಾರ) ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಸಂಸ್ಕೃತ ದಿನಾಚರಣೆಯನ್ನು ಆಚರಿಸಿದರು.

ಕೊರೋನಾ ಸಂಕಷ್ಟದ ಕಾರಣದಿಂದ ಇದೇ ಮೊದಲ ಬಾರಿಗೆ ಆನ್ಲೈನ್ ನ ಮೂಲಕ ಸಂಸ್ಕೃತ ದಿನವನ್ನು ಆಚರಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿನಿ ಅಭಿಜ್ಞಾ ಪ್ರಾರ್ಥನೆಯನ್ನು ಹಾಡಿದಳು. ಒಂಭತ್ತನೇ ತರಗತಿಯ ವೈಭವಿ. ಜೆ ಪ್ರತಿಜ್ಞೆಯನ್ನು ಬೋಧಿಸಿದಳು. ಹಳೆ ವಿದ್ಯಾರ್ಥಿನಿ ವೈಷ್ಣವಿ.ಜೆ ಸಂಸ್ಕೃತ ದಿನದ ಪ್ರತಿಜ್ಞೆಯನ್ನೂ ಸಂಸ್ಕೃತದ ಮಹತ್ವದ ಕುರಿತು ವಿಷಯ ಮಂಡಿಸಿದಳು.

ಹಳೆ‌ ವಿದ್ಯಾರ್ಥಿನಿ ಸೌಂದರ್ಯ ಎ ಸಂಸ್ಕೃತದ ಕುರಿತು ಮಹಾತ್ಮರ ಅಭಿಪ್ರಾಯವನ್ನು ತಿಳಿಸಿದಳು. ಐದನೇ ತರಗತಿಯ ಯಶ್ವಿ.ಸಿ ವಿಜ್ಞಾನದಲ್ಲಿ‌ ಸಂಸ್ಕೃತದ ಮಹತ್ವವನ್ನು‌ ತಿಳಿಸಿದಳು. ಆರನೇ ತರಗತಿಯ ಶಿವಾನಂದ ಜೆ‌ ಸಂಸ್ಕೃತ ಸುಭಾಷಿತವನ್ನು ತಿಳಿಸಿ ಕೊಟ್ಟನು.

ಪ್ರಧಾನಾಧ್ಯಾಪಕಿ‌ ವಾರಿಜಾ ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ‌ ಶುಭಹಾರೈಸಿದರು. ಸಂಸ್ಕೃತ ಅಧ್ಯಾಪಕ ಮಹೇಶ ಕೃಷ್ಣ ತೇಜಸ್ವಿ ಧನ್ಯವಾದವಿತ್ತರು. ಎಂಟನೇ ತರಗತಿಯ ವಿದ್ಯಾರ್ಥಿ ದೀಕ್ಷಿತ್ ಎನ್ ಹಾಗೂ ಶಾಲಾ‌ ಅಧ್ಯಾಪಕರು ಶುಭ ಹಾರೈಸಿದರು.

ಆನ್ಲೈನ್ ನ ಮೂಲಕ ಸಂಸ್ಕೃತ ದಿನಾಚರಣೆಯನ್ನು ಆಚರಿಸಿದ್ದು ಈ ಬಾರಿಯ‌ ವಿಶೇಷವಾಗಿತ್ತು. ಸಂಸ್ಕೃತ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಆನ್ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಮಂಗಳೂರಿಗೆ ಬಂತು 1 ಕೋಟಿ ರು.ಗಳ ‘ಡ್ರೀಮ್‌ ಬಸ್‌’!

Upayuktha

ಡಿ.15: ಪುದುಚೇರಿ ಲೆ.ಗವರ್ನರ್ ಕಿರಣ್‌ ಬೇಡಿ ಕಲ್ಲಡ್ಕಕ್ಕೆ ಭೇಟಿ

Upayuktha

ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕದ ಸಾಹಿತ್ಯ ಸಂಭ್ರಮ ಜ.5ಕ್ಕೆ

Upayuktha