ಕತೆ-ಕವನಗಳು

ಸಂವಿಧಾನ ಶಿಲ್ಪಿ

ಸಂವಿಧಾನ ಶಿಲ್ಪಿ” ಎಂದೇ ಪ್ರಖ್ಯಾತಿ ಅಂಬೇಡ್ಕರವರು
ಸಾಮಾಜಿಕ ಸಮಾನತೆ, ಅಸ್ಪ್ರಶ್ಯತೆಯ ನಿವಾರಣೆಗೆ ಹೋರಾಡಿದವರು
ಮಹಾರಾಷ್ಟ್ರದ ರತ್ನಗಿರಿಯ ಕೀರ್ತಿ ಇವರು
ಅಭಿಮಾನಿಗಳು ಆದರದಿಂದ ಬಾಬಾ ಸಾಹೇಬ್ ಎಂದು ಕರೆಯವರು||

ಜೀವನದಲ್ಲಿ ತಾವು ಅನುಭವಿಸಿದ ನೋವು,ಅವಮಾನವನ್ನು ಮೆಟ್ಟಿಲಾಗಿಸಿಕೊಂಡರು
ವಿಶ್ವಮಾನ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರವರು||

ಸಾಮಾನ್ಯ ದಲಿತ ವರ್ಗದಲ್ಲಿ ಜನಿಸಿದರು
ಸಾಮಾಜಿಕ, ಆರ್ಥಿಕ, ರಾಜಕೀಯ, ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈದರು
ದೇಶದ ಹೆಮ್ಮೆಯ ಪುತ್ರ ಎನಿಸಿಕೊಂಡರು||

ವಿವಿಧತೆಯಲ್ಲಿ ಏಕತೆಯನ್ನು ಹೊರಹಾಕುವಂತಹ ಸರ್ವ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟರು
ಕಷ್ಟ, ಅವಮಾನಕ್ಕೆ ಅಂಜದೇ ಧೈರ್ಯವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು||

ದೇಶದ ಎಲ್ಲಾ ಮಹಿಳೆಯರು ಅಂಬೇಡ್ಕರವರನ್ನು ಸ್ಮರಿಸಲೇಬೇಕು
ಕಾರಣ….. ಮಹಿಳಾ ಸಮಾನತೆಗಾಗಿ ಮೊಟ್ಟ ಮೊದಲು ಧ್ವನಿ ಎತ್ತಿದವರು ||

ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡರೂ….
ಎಲ್ಲಿಯೂ ಎದೆ ಗುಂದದೆ ಶಿಕ್ಷಣ ಹಾಗೂ ಸಂಘಟನೆಗೆ ಒತ್ತು ನೀಡಿದರು
ಚುರುಕು ಬುದ್ಧಿಯುಳ್ಳವರಾಗಿದ್ದರು
ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ವಿಷಯದಲ್ಲಿ ತುಂಬಾ ನಿಪುಣರು||

ಮಾನವೀಯತೆಯನ್ನು ಗೌರವಿಸುವ ಅವರ ಚಿಂತನೆ
ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವರು ಅಪಾರ ಸಾಧನೆ||

ಅವರೇ ನಮ್ಮ ದೇಶದ ಹೆಮ್ಮೆ ಡಾ/ಬಾಬಾ ಸಾಹೇಬ್ ಅಂಬೇಡ್ಕರವರು.

✍️ ಸಂಧ್ಯಾ ಕುಮಾರಿ ಎಸ್ ವಿಟ್ಲ

Related posts

ಹವ್ಯಕ ಕವಿತೆ: ಇಡ್ಕುತ್ತವು ಎಲ್ಲೋರು ಕಲ್ಲು ಹಣ್ಣಿಂಗೆ

Upayuktha

ಕವನ: ಕಣಿಪುರದ ಜಾತ್ರೆ

Upayuktha

ಸಣ್ಣಕಥೆ: ಮರ ಭೂಮಿಗೆ ಭಾರವಾದರೆ ಕತ್ತರಿಸಬಹುದು, ನರ ಭೂಮಿಗೆ ಭಾರವಾದಾಗ?

Upayuktha