ದೇಶ-ವಿದೇಶ ಪ್ರಮುಖ

ರಾಜಕೀಯದಿಂದ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್ 

ಚೆನ್ನೈ: ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ದಿವಂಗತ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್  ರಾಜಕೀಯದಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸಿದ್ದಾರೆ.

ಅಷ್ಟೇ ಅಲ್ಲದೆ ಎಐಎಡಿಎಂಕೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನ ಸೋಲಿಸುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ನಾನು ಅಮ್ಮನ(ಜಯಲಲಿತಾ) ಸುವರ್ಣ ಆಡಳಿತಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ನಾನು ಎಂದೂ ಸಹ ಯಾವುದೇ ಪವರ್ ಅಥವಾ ಸ್ಥಾನದ ಹಿಂದೆ ಬಿದ್ದಿಲ್ಲ.. ಜಯಲಲಿತಾ ಬದುಕಿದ್ದಾಗಲೂ ನಾನು ಅಧಿಕಾರದ ಆಸೆ ಪಟ್ಟಿಲ್ಲ. ಅವರು ನಿಧನರಾದ ಮೇಲೂ ಸಹ ನಾನು ಅಧಿಕಾರಕ್ಕಾಗಿ ಆಸೆಪಡುವುದಿಲ್ಲ. ನಾನು ರಾಜಕೀಯ ತೊರೆಯುತ್ತಿದ್ದೇನೆ ಹಾಗೂ ನಮ್ಮ ಪಕ್ಷ ಗೆದ್ದು ಜಯಲಲಿತಾರ ಪರಂಪರೆಯನ್ನ ಮುಂದುವರೆಸಲಿ ಎಂದು ಇದೇ ವೇಳೆ ತಮ್ಮ ಪ್ರಕಟಣೆಯಲ್ಲಿ ಎಐಎಡಿಎಂಕೆಗೆ ಹಾರೈಸಿದ್ದಾರೆ.

Related posts

ಇಂದು ಜಾತ್ರಾ ಗದ್ದುಗೆಗೆ ಶ್ರೀಮಾರಿಕಾಂಬೆ, ದೇವಿಯ ಭವ್ಯ ಶೋಭಾಯಾತ್ರೆ

Upayuktha

ಚೀನಾ ಗಡಿಯಲ್ಲಿ ಸಂಘರ್ಷ: ಮೂವರು ಭಾರತೀಯ ಸೈನಿಕರು ಹುತಾತ್ಮ

Upayuktha

‘ಎಸ್‌ಡಿಎಂ ಝೇಂಕಾರ’- ಶೈಕ್ಷಣಿಕ, ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

Upayuktha