ನಗರ ವ್ಯಾಪಾರ- ವ್ಯವಹಾರ ಸ್ಥಳೀಯ

ಸಾವಯವ ಸಂತೆ: ನಾಳಿನ ವಿಶೇಷ

ಸಾಂದರ್ಭಿಕ ಚಿತ್ರ

ಮಂಗಳೂರು: ಪ್ರತಿವಾರದಂತೆ ನಾಳೆ (ಭಾನುವಾರ ಫೆ.14) ನಡೆಯುವ ಸಾವಯವ ಸಂತೆಯಲ್ಲಿ ಶಂಕರ್‌ ಕೈಮಗ್ಗ ನೇಕಾರರ ಮಾರಾಟ ಸಂಘದವರು ತಮ್ಮ ಉತ್ಪಾದನೆಯ ಖಾದಿ ಶರ್ಟ್‌, ಜುಬ್ಬಾ, ಪೈಜಾಮಾ, ಕುರ್ತಾ, ಹೆಗಲಿಗೆ ಹಾಕುವ ಕೈಚೀಲವನ್ನು ಮಾರಾಟಕ್ಕಾಗಿ ತರಲಿದ್ದಾರೆ.

ಆಸಕ್ತ ಗ್ರಾಹಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಾವಯವ ಸಂತೆಯ ಆಯೋಜಕರ ಪ್ರಕಟಣೆ ತಿಳಿಸಿದೆ.

ಸುಮಾರು ಆರು ವರ್ಷಗಳಿಂದ ನಡೆಯುತ್ತಿರುವ ಮಂಗಳೂರಿನ ಸಾವಯವ ಸಂತೆ ಸಾಕಷ್ಟು ರೈತರನ್ನು ಒಟ್ಟುಗೂಡಿಸಿದೆಯಲ್ಲದೆ ಗ್ರಾಹಕರನ್ನೂ ಗಮನದಲ್ಲಿಟ್ಟುಕೊಂಡು ಬೆಲೆ ಕೈಗೆಟುಕುವಂತೆ ಇಡುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ.

ಮಂಗಳೂರಿನ ಸಾವಯವ ಕೃಷಿಕ-ಗ್ರಾಹಕರ ಬಳಗ ಈ ಸಾವಯ ಸಂತೆಯನ್ನು ಆಯೋಜಿಸುತ್ತಿದೆ. ಅಡ್ಡೂರು ಕೃಷ್ಣರಾವ್ ಅವರ ಅಧ್ಯಕ್ಷತೆ ಹಾಗೂ ಸಾಹಿತ್ಯ ಕೇಂದ್ರದ ರತ್ನಾಕರ ಕುಳಾಯಿ (8242412437)  ಅವರು ಕಾರ್ಯದರ್ಶಿಯಾಗಿ ಇನ್ನಿತರ ಸಮಾನ ಮನಸ್ಕರ ಜತೆಗೂಡಿ ಈ ಸಾವಯವ ಕೃಷಿಕ-ಗ್ರಾಹಕ ಬಳಗವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಬೆಳಗ್ಗೆ 6:30ರಿಂದ 9 ಗಂಟೆಯ ವರೆಗೆ ಮಾತ್ರ ಈ ಸಾವಯವ ಸಂತೆ ನಡೆಯಲಿದ್ದು, ಹಂಪನಕಟ್ಟೆಯ ಪೋಸ್ಟ್‌ ಆಫೀಸ್ ಬಳಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ- ಅರವಿಂದ (97429 19004) ಅವರನ್ನು ಸಂಪರ್ಕಿಸಬಹುದು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಗೋವುಗಳಿಗೆ ಮೇವು ಸಂಗ್ರಹ: ಅಂಬಿಲಡ್ಕದಲ್ಲಿ ಸೇವಾ ಅರ್ಘ್ಯ ಸಂಪನ್ನ

Upayuktha

ಸುಳ್ಯ: ಕೆವಿಜಿ ಮೆಡಿಕಲ್‌ ಕಾಲೇಜಿನಲ್ಲಿ ‘ಸ್ಪಂದನ’ ರಾಷ್ಟ್ರೀಯ ವಿಚಾರ ಸಂಕಿರಣ, ಶಾಸಕ ಡಾ.ವೈ ಭರತ್ ಶೆಟ್ಟಿ ಉದ್ಘಾಟನೆ

Upayuktha

ಅಯೋಧ್ಯೆ ತೀರ್ಪಿನ ಹಿನ್ನೆಲೆ: ಕಾಸರಗೋಡು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

Upayuktha