ಓದುಗರ ವೇದಿಕೆ

ಕೊರೊನಾ ನಡುವೆ ಶಾಲೆ ಪ್ರಾರಂಭದ ಆತಂಕ; ಇನ್ನೂ ಎರಡು ತಿಂಗಳು ತಡವಾದರೆ ನಷ್ಟವೇನಿಲ್ಲ

ಸಾಂದರ್ಭಿಕ ಚಿತ್ರ

ಎಲ್ಲರಿಗೂ ತಿಳಿದಂತೆ ನಾವಿಂದು ಕೋವಿಡ್ 19 ನಿಂದ ಭಯಭೀತರಾಗಿದ್ದೇವೆ. ಲಾಕ್ ಡೌನ್ ಇರುವಾಗ ಇದ್ದ ಸ್ಥಿತಿ ಈಗಂತೂ ಖಂಡಿತ ಇಲ್ಲ, ಮೊದಲು ನಿಯಂತ್ರಣಕ್ಕೆಂದು ಮನೆಯಲ್ಲಿ ಹೆದರಿ ಕೂತದ್ದೇ ಹೆಚ್ಚು, ಈಗ ಲಾಕ್ ಡೌನ್ ಸಡಿಲಿಕೆಯಾಯಿತು, ರೋಗಿಗಳ ಸಂಖ್ಯೆ ಹೆಚ್ಚಾಯಿತು. ಈ ನಡುವೆಯಲ್ಲಿ ಶಾಲಾ ಪ್ರಾರಂಭದ ಆತಂಕ, ಯಾವಾಗ ಶಾಲೆ ಶುರುವಾಗುತ್ತೋ, ಮಕ್ಕಳನ್ನು ಬಿಟ್ಟು ಉದ್ಯೋಗಕ್ಕೂ ಹೋಗಲು ಕಷ್ಟ, ಶಾಲೆ ಪ್ರಾರಂಭವಾಗಲಿ ಎಂದು ಇಚ್ಚಿಸುವ ಪೋಷಕರೂ ಇದ್ದಾರೆ.

ಹಾಗೇ ಶಾಲೆ ಪ್ರಾರಂಭವಾಗುತ್ತದೆ ಎಂದಾಗ ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮನೆ ಮಾಡಿದೆ. ಒಮ್ಮೆ ಯೋಚಿಸಿದೆ, ಶಾಲೆಯಲ್ಲಿ ಹೇಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹೇಗೆ ಇರಬಹುದು ಅನ್ನೋದು ಒಂದು ಚಿತ್ರಣ ಕಣ್ಣ ಮುಂದೆ ಬಂದಾಗ ಆತಂಕವಾಗುತ್ತದೆ.

6ನೇ ತರಗತಿಯಿಂದ ಮೇಲಿನ ಮಕ್ಕಳಿಗೆ ಶಿಕ್ಷಕರು, ಪೋಷಕರು, ಹೇಳಿದ ರೋಗದ ವಿವರಣೆ ಸುರಕ್ಷತೆ ಬಗ್ಗೆ ಹೇಗೋ ಒಂದು ಹಂತಕ್ಕೆ ಅರ್ಥವಾಗಬಹುದು, ಕಾರ್ಯರೂಪಕ್ಕೆ ತರಬಹುದು. ಆದರೆ ಎಲ್‌ಕೆಜಿ, ಯುಕೆಜಿ, 1ರಿಂದ 5 ನೇ ತರಗತಿಯವರೆಗೆ ಹೇಗೆ ಅಂತರ ಕಾಯ್ದಕೊಳ್ಳುವುದು, ಒಂದು ಶೌಚಾಲಯವನ್ನು ಒಬ್ಬರಿಂದ ಮತ್ತೊಬ್ಬರಿಗೆ ಬಳಕೆ, ಕುಡಿಯುವ ನೀರಿನ ಲೋಟ, ಇತ್ಯಾದಿ, ಇವುಗಳನ್ನು ಒಂದೆರಡು ದಿನ ಒಬ್ಬ ಬಳಕೆ ಮಾಡಿದ ಕೂಡಲೇ ಸ್ವಚ್ಛ ಮಾಡಬಹುದು, ಪ್ರತಿ ಕ್ಷಣ ಸ್ವಚ್ಛ ಮಾಡಲು ಖಾಸಗಿ ಶಾಲೆಯಲ್ಲಿ ಸಹಾಯಕರಿದ್ದಾರೆ; ಆದರೆ ಸರಕಾರಿ ಶಾಲೆಯಲ್ಲಿ ಶಿಕ್ಷಕರು ಈ ಕೆಲಸವನ್ನು ಮಾಡಬೇಕಾದೀತು.

ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಕೂಡ ಸಮಸ್ಯೆಯೇ. ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಮಕ್ಕಳ ದೂರು, ಸ್ವಚ್ಛತೆಯಲ್ಲೇ ಕಾಲಹರಣವಾದರೆ ಮಕ್ಕಳು, ಶಿಕ್ಷಕರು ಶಾಲೆಗೆ ಬಂದು ಉಪಯೋಗವೇನು.?! ಆನ್‌ಲೈನ್ ತರಗತಿ ಶುರು ಮಾಡುವುದೆಂದರೆ ಎಲ್ಲಿಗೆ??! ಸರಿಯಾಗಿ ನೆಟ್ವರ್ಕ್ ಇಲ್ಲದ ಊರಿನಲ್ಲಿ, ಇದು ಸಾಧ್ಯವಾ?? ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಬೇಕು ಎಂದು ಒಂದೆಡೆ ಹೇಳುತ್ತಿದ್ದರೆ, ಈಗ ತರಗತಿಗಳೂ ಆನ್‌ಲೈನ್‌ನಲ್ಲಿ ನಡೆಯುವುದರಿಂದ ಬಳಕೆಯ ಪರಿಮಾಣ ಹೆಚ್ಚಾಗುತ್ತಿದೆ.

ಫ್ರಾನ್ಸ್‌ನಲ್ಲಿ ಶಾಲೆಗಳು ಆರಂಭವಾದ ಒಂದೇ ವಾರದಲ್ಲಿ 70 ಮಕ್ಕಳಿಗೆ ಕೊರೊನಾ ಸೋಂಕು; ಪೋಷಕರಲ್ಲಿ ಹೆಚ್ಚಿದ ಆತಂಕ

ಒಂದು ಪತ್ರಿಕೆಯಲ್ಲಿ ಓದಿದೆ, ದೊಡ್ಡವರು ಹೇಗೆ ಉದ್ಯೋಗಕ್ಕೇ ಹೋಗಿ ಬರುತ್ತಾರೇಯೋ ಹಾಗೇ, ಮಕ್ಕಳಿಗೆ ಮನೆಯೇ ಪಾಠ ಶಾಲೆವಾಗದಿರಲಿ ಎಂದು. ಮಕ್ಕಳು ಕೂಡ ಶಾಲೆಗೆ ಹೋಗಲಿ ಎಂದು, ದೊಡ್ಡವರಿಗೆ ಜವಬ್ದಾರಿ ಇದೆ,, ರೋಗ ಲಕ್ಷಣದ ಅರಿವಿದೆ. ಹಾಗೆಂದು ಕೊರೊನಾ ವಿರುದ್ಧ ಹೋರಾಟದಲ್ಲಿ ಸಂರಕ್ಷಣೆ ಜೊತೆ ದಿನ ಕಳೆಯುತ್ತಾರೆ. ಸಣ್ಣ ಮಕ್ಕಳು ಹಾಗಲ್ಲ; ಅವರಿಗೆ ತರಗತಿಯಲ್ಲಿ ಬೆರೆತು, ಜತೆಯಲ್ಲಿ ಊಟ ಪಾಠ, ಆಟವಾಗಬೇಕು, ಇದನ್ನೆಲ್ಲ ಹೇಗೆ ದೂರ ಮಾಡಲು ಸಾಧ್ಯ?

ಒಂದೆರಡು ನಿಮಿಷ ತರಗತಿ ಬಿಟ್ಟರೆ ಮಕ್ಕಳ ಆಟ, ಪೈಟಿಂಗ್, ದೂಡಿಕೊಳ್ಳುವುದು ಇದನ್ನೆಲ್ಲಾ ನೋಡಿ ಶಿಕ್ಷಕ್ಷರೇನು ಮಾಡುವುದು? ಮಾಸ್ಕ್, ಹಾಕಿಕೊಂಡು ಕೂತರೆ, ಅದನ್ನು ಸ್ನೇಹಿತ ಎಳೆದು ಹಾಕುವುದು, ಅದರಲ್ಲಿ ಆಟ, ಅತಿಯಾದ ಸಾನಿಟೈಸರ್ ಬಳಕೆಯಿಂದಲೂ ದುಷ್ಪರಿಣಾಮವಾಗಬಹುದು. ಮಾಸ್ಕ್, ಸಾನಿಟೈಸರ್ ಬಳಕೆ ಯಾಕೆಂದು ಪ್ರಶ್ನೆಗೆ ಉತ್ತರ ನೀಡುವಂತೆ ಪೋಷಕರು, ಶಿಕ್ಷಕರು ಹೇಳಬಹುದು. ಆದರೆ ಮಕ್ಕಳ ಮನಸ್ಸಿಗೆ ಇದರ ಗಂಭೀರತೆ ಅರ್ಥ ಮಾಡಿಸಲು ಸಾಧ್ಯವೇ? ರೋಗದ ತೀವ್ರತೆಯನ್ನು ಅರಿಯದ ಮುಗ್ಧ ಮಕ್ಕಳನ್ನು ಬಲಿಪಶು ಮಾಡುವುದು ಸರಿಯೇ?!

ಎಂಟರಿಂದ ರಿಂದ ಹತ್ತು ಕಿಲೋಮೀಟರ್ ಒಳಗೆ ಯಾವುದೇ ಕೊರೋನಾ ರೋಗದ ಸಮಸ್ಯೆ ಇಲ್ಲದಿದ್ದಲ್ಲಿ ಶಾಲೆ ನಡೆಸಲು ತುಸು ನೆಮ್ಮದಿ. ಆದರೆ, ಪೇಟೆಗೆ ಹೋಗಿ ಬರುವ ಮಕ್ಕಳನ್ನು ಸುರಕ್ಷತೆ ಎಷ್ಟು ಮಾಡಲು ಸಾಧ್ಯ??! ಲಾಕ್ ಡೌನ್ ಸಡಿಲಿಕೆಯಾಯಿತು ಎಂದು ಎಚ್ಚರ ತಪ್ಪಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ, ಒಂದಿಷ್ಟು, ಸಮಯ ಕಳೆಯಲಿ, ರೋಗ ಲಕ್ಷಣಗಳು ಕಡಿಮೆಯಾಗಿ ಮತ್ತೆ ಶಾಲೆಗಳು ಪ್ರಾರಂಭವಾಗಲಿ. ಮಕ್ಕಳ ಹಿತ ದೃಷ್ಟಿಯಿಂದ ಸರಕಾರ ಶಾಲೆಗಳನ್ನು ತೆರೆಯಲು ಇನ್ನೂ ಒಂದೆರಡು ತಿಂಗಳು ಕಾದು ನೋಡಬೇಕಿತ್ತು. ಏನೋ ಎಲ್ಲರ ಮನದಲ್ಲಿ ಆತಂಕ, ಹಾಗೂ ಗೊಂದಲದ ವಾತಾವರಣ.

– ಪೂರ್ಣಿಮಾ ಪಂಜ, ಚೊಕ್ಕಾಡಿ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಮಾಧ್ಯಮದ ಹೆಸರು ಹೇಳಿಕೊಂಡು ಸುಳ್ಳು ಸೃಷ್ಟಿಸುವವರು ಕಿಡಿಗೇಡಿಗಳು

Upayuktha

ಕಾಣುತ್ತಿಲ್ಲ‌ ಕಾಸರಗೋಡಿನಲ್ಲಿ ಕನ್ನಡದ ಕಂಪು, ಯಾರು ಕಾರಣ?

Upayuktha

ಕರ್ನಾಟಕ-ಕೇರಳ ಎರಡು ಪ್ರತ್ಯೇಕ ದೇಶಗಳೇ? ಗಡಿ ಹಿಂಸೆಗೆ ಕೊನೆ ಎಂದು?

Upayuktha