ವಿಟ್ಲ: ಕರ್ನಾಟಕ ಸರ್ಕಾರ ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿ ರಜೆಯನ್ನು ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಿದರೂ, ವಿಟ್ಲದ ಶಾಲಾ ಕಾಲೇಜುಗಳಿಗೆ ಮಾತ್ರ ಇದು ಯಾವುದೂ ಅನ್ವಯವಾಗಿಲ್ಲ. ಶನಿವಾರ ಎಂದಿನಂತೆ ಶಾಲಾ ಕಾಲೇಜು ತೆರೆದು ಪಾಠ ಪ್ರವಚನಗಳು ನಡೆದಿದೆ.
ಶಾಲೆಗಳು ತೆರೆದಿರುವ ಬಗ್ಗೆ ಬಂಟ್ವಾಳ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರಲ್ಲಿ ಮಾಹಿತಿ ಕೇಳಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ವಿಟ್ಲದಲ್ಲಿರುವ ಸರ್ಕಾರಿ ಶಾಲೆಗಳಿಗೆ ಖಾಸಗೀ ಶಾಲೆಗಳಿಗೆ ಭೇಟಿ ನೀಡಿದ ಸಮಯ ಎಂದಿನಂತೆ ಶಾಲೆಗಳು ತೆರೆದಿದ್ದು, ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಬಂದ ಹಾಗೆ ಬಿಂಬಿಸುವ ಪ್ರಯತ್ನಗಳೂ ನಡೆಯಿತು.
ಕೆಲವು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಹಾಲ್ ಗಳಲ್ಲಿ ಕಿಟಕಿ ಬಾಗಿಲು ಮುಚ್ಚಿ ಕೂಡಿ ಹಾಕುವ ಕಾರ್ಯವೂ ನಡೆಯಿತು. ಇನ್ನು ಕೆಲವು ಶಾಲೆಗಳಲ್ಲಿ ಎಂದಿನಂತೆ ಪಾಠ ಪ್ರವಚನ ನಡೆಯುತ್ತಿತ್ತು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಶಾಲೆಗಳು ತೆರೆದಿದ್ದು, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರೀತೆ ಎಂಬ ಭಯದಲ್ಲಿ ಪೋಷಕರು ಇರುವಂತೆ ಮಾಡಿದೆ.
ತಹಸೀಲ್ದಾರ್ ರಶ್ಮಿ ಎಸ್. ಆರ್. ಹಾಗೂ ಡಿಡಿಪಿಐ ಮಲ್ಲೇಶ್ ಸ್ವಾಮಿ ಅವರ ಗಮನಕ್ಕೆ ಪ್ರಕರಣ ಬರುತ್ತಿದ್ದಂತೆ ಶಾಲೆಗಳಿಗೆ ತುರ್ತು ರಜೆಯನ್ನು ಘೋಷಣೆ ಮಾಡಿದ್ದಾರೆ. ಸ್ಥಳಕ್ಕೆ ವಿಟ್ಲ ಗ್ರಾಮಕರಣಿಕ ಪ್ರಕಾಶ್, ಗ್ರಾಮ ಸಹಾಯಕ ಲಿಂಗಪ್ಪ ಗೌಡ ಸೇರಿ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ